Posts

#MorbiBridgeCollapse ಗುಜರಾತ್ ನ ಮಚ್ಚು ನದಿಯ ಸುಮಾರು 140 ವರ್ಷ (1879ರ) ಹಳೆಯ ಸೇತುವೆ ನಿನ್ನೆ ಸಂಜೆ ಕುಸಿದು ಬಿದ್ದು ಸುಮಾರು 130 ಕ್ಕೂ ಅಧಿಕ ಜನರು ದುರ್ಮರಣ ಹೊಂದಿದ

#MorbiBridgeCollapse ಗುಜರಾತ್ ನ ಮಚ್ಚು ನದಿಯ ಸುಮಾರು 140 ವರ್ಷ (1879ರ) ಹಳೆಯ ಸೇತುವೆ ನಿನ್ನೆ ಸಂಜೆ ಕುಸಿದು ಬಿದ್ದು ಸುಮಾರು 130 ಕ್ಕೂ ಅಧಿಕ ಜನರು ದುರ್ಮರಣ ಹೊಂದಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.. ಈ ಸೇತುವೆಯನ್ನು ದುರಸ್ತಿಗಾಗಿ ಸುಮಾರು 7 ತಿಂಗಳ ಕಾಲ ಮುಚ್ಚಲಾಗಿತ್ತು ಮತ್ತು ಮೊನ್ನೆ ದೀಪಾವಳಿಯ ಎರಡು ದಿನಗಳ ನಂತರ ದುರಸ್ತಿಗೊಳಿಸಿ ಮತ್ತೆ ತೆರೆಯಲಾಗಿತ್ತು... ಈ ಘಟನೆಗೆ ಸರ್ಕಾರಗಳೇ ಕಾರಣ..... 1. 100 ಸಾಮರ್ಥ್ಯದ ಸೇತುವೆಯ ಮೇಲೆ 400 ಜನರನ್ನು ಏಕೆ ಅನುಮತಿಸಲಾಯಿತು? 2. ಒಂದು ಸೇತುವೆ ದುರಸ್ತಿಗೊಂಡ ನಂತರ ಅದರ ಸಾಮರ್ಥ್ಯ (capacity) ಎಷ್ಟು ಎಂದು ಅದನ್ನು ದುರಸ್ತಿಗೊಳಿಸಿದ ಟೆಂಡರ್ ಪಡೆದುಕೊಂಡ ಒರೆವಾ ಗ್ರೂಪ್‌ ಟೆಂಡರ್ ಅವರು ತಿಳಿಸಿ. ಅದರ ಮಾಹಿತಿಯಂತೆ ಟಿಕೆಟ್ ಪಡೆದುಕೊಳ್ಳುವವರು ಅಷ್ಟೇ ಜನರನ್ನು ಬಿಡಬೇಕಿತ್ತು.. 2. ಈಗ ಸರ್ಕಾರಗಳು ತನ್ನ ತಪ್ಪನ್ನು ತಳ್ಳಿ ಹಾಕಲು ಸೇತುವೆ ಪುನಾರಂಭಕ್ಕೆ ಸರ್ಕಾರದ ಅನುಮತಿಯೇ ಪಡೆದಿಲ್ಲ ಎಂದು ಹೇಳುತ್ತಿದೆ. ಇದು ಒಂಥರಾ ಅಸಯ್ಯ ಅನಿಸುವುದಿಲ್ಲವೇ....??  ಅನುಮತಿ ಪಡೆದ ಇಲ್ಲ ಅಂತಾ ಆದರೆ 400 + ಜನ ಹೋಗುವವರೆಗೂ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು...?? ಹಾಗಾದರೆ ಸುಮಾರು 130 ಕ್ಕೂ ಅಧಿಕ ಜನರ ಸಾವಿಗೆ ಬೆಲೆಯೇ ಇಲ್ಲವೇ...? ಅಂದು ಬಂಗಾಳದಲ್ಲಿ ನಡೆದ ಫ್ಲೈಓವರ್ ಕುಸಿತದ ಸಂದರ್ಭದಲ್ಲಿ ಇದೇ ನಮ್ಮ ದೇಶದ ಪ್ರ...

ಪೊಗರು

ಪೊಗರು ಚಿತ್ರದ ವಿವಾದದ ಸುತ್ತಾ, ಭೌದ್ಧಿಕ ಗುಲಾಮಗಿರಿ ಕಳಚುವ ಸುಸಂದರ್ಭ..!! ಚಿತ್ರದಲ್ಲಿ ವಿವಾದವಾಗಿರುವ ಒಂದೊಂದೇ ವಿಷಯಗಳನ್ನು ನೋಡೋಣಾ:- ಯಜ್ಞಮಾಡುತ್ತಿರುವ ಪುರೋಹಿತನ ಹೆಗಲ ಮೇಲೆ ಕಾಲಿಟ್ಟ ಎಂಬುದು..!! ಕಾರಣ:- ಯಜ್ಞ-ಯಾಗ ಎಂಬುದು ಲೋಕಕಲ್ಯಾಣಾರ್ಥ, ಅದನ್ನು ಮಾಡುವವರು ಲೋಕಹಿತ ಬಯಸುವವರು ಎಂಬುದು. ರಿಯಾಲಿಟಿ:- ಲೋಕಕಲ್ಯಾಣಾರ್ಥ ಮಾಡುವ ಬಹುಮುಖ್ಯ ಯಾಗಗಳು ಎರಡೇ, "ರಾಜಸೂಯ", " ಅಶ್ವಮೇಧ". ಉಳಿದವು ತಮ್ಮತಮ್ಮ ಅಭಿಷ್ಟೇಗೆ ಮಾಡಿಸುವಂಥಹುವು. ಇನ್ನು ಯಜ್ಞ-ಯಾಗಗಳು ವ್ಯಾವಹಾರಿಕವಾಗಿ ಬಹಳ ಕಾಲವಾಗಿದೆಯಲ್ಲಾ? ಉದಾಹರಣೆಗೆ ಪ್ರಳಯಕಾಲ ಎಂಬ ಭ್ರಮೆ 2012 ರಲ್ಲಿ ಉಂಟಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಜನರು "ಪ್ರಳಯಕಾಲದ ರುದ್ರಯಾಗ" ಮಾಡಿ ಜಗತ್ತನ್ನು ಕಾಪಾಡುತ್ತೇವೆ ಎಂಬ "ಬೃಹತ್ ಬ್ರಹ್ಮಾಂಡ" ನಾಟಕಗಳನ್ನು ಟಿವಿಯಲ್ಲಿ ಬಹಳಕಾಲ ನೋಡಿದೆವಲ್ಲಾ..!! ಕಾಲಿಟ್ಟದ್ದು ತಪ್ಪಾಗಿದೆ ಎಂದು, ಅಸಲಿ ಕಾರಣ ಆ ಕಲಾವಿದರೂ ಸಹ ನಿಜ ಬ್ರಾಹ್ಮಣರೇ ಅಗಿದ್ದಾರೆ. ಪ್ರಣಯಮೂರ್ತಿ, ಶಂಕರ್ ಅಶ್ವತ್ಥ್ ಅವರು. ಅದೂ ಸಮಸ್ಯೆ, ಇಂದು ಬ್ರಾಹ್ಮಣ ಪಾತ್ರಧಾರಿಗಳ ಮೇಲೆ ಕಾಲಿಟ್ಟವರು ಮುಂದೆ ಬ್ರಾಹ್ಮಣರಿಗೆ ಗೌರವ ಕೊಡುವರೇ ಎಂಬುದು, ಏಕೆಂದರೆ ಶತಶತಮಾನಗಳಿಂದ "ಬ್ರಾಹ್ಮಣರಿಗೆ ಅಗೌರವ ತೋರಿಸುವುದು ಗೋಹತ್ಯೆಗೆ ಸಮ, ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಬ್ರಾಹ್ಮಣರಿಗೆ ಕಾಲುತಾಗಿಸುವುದು ಬ್ರಹ್ಮ ಹತ್ಯೆಗೆ ಸಮ...

ಶ್ರೀ_ಆದಿ_ಶಂಕರಾಚಾರ್ಯರ_ಜಯಂತಿಯ_ಶುಭಾಶಯಗಳು..😍💐🙏

Image
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು.  ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್...

ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐

Image
ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐 ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕ್ರಾಂತಿಕಾರಿ ಹೋರಾಟದ ಹಾದಿ ತುಳಿದ ಪ್ರಮುಖರಲ್ಲಿ ಲಾಲಾ ಲಜಪತ್ ರಾಯ್ ಒಬ್ಬರು. ಪಂಜಾಬ್ ಕೇಸರಿ ಎಂದೇ ಖ್ಯಾತರಾಗಿದ್ದ ಇವರು ಬ್ರಿಟಿಷರ ವಿರುದ್ಧ ಹೋರಾಡಲು ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ತಮ್ಮ ಪ್ರಖರ ಮಾತಿನ ಮೂಲಕವೇ ಕ್ರಾಂತಿಯ ಕಿಚ್ಚು ಹಚ್ಚಿದರು. ಈ ಭೂಮಿ ಮೇಲೆ ಚೆಲ್ಲಿರುವುದು ನಮ್ಮ ಪೂರ್ವಜರ ರಕ್ತ. ನಾವು ಈ ಭೂಮಿಯನ್ನು ಬಳಸುತ್ತಿದ್ದೇವೆ. ಅದರ ಮೇಲೆ ವಾಸಿಸುತ್ತಿದ್ದೇವೆ. ಆದ್ದರಿಂದ ಈ ಭೂಮಿ ನಮ್ಮದು ಇಲ್ಲವೇ ದೇವರದ್ದು…’ ಹೀಗೆ ತಮ್ಮ ಪ್ರಖರ ಮಾತುಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು ಹಚ್ಚಿದವರು ಅಪ್ರತಿಮ ವೀರ ಲಾಲಾ ಲಜಪತ್​ರಾಯ್. ಲಾಲ್-ಬಾಲ್-ಪಾಲ್ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಅವಲೋಕಿಸಿದಾಗ ಒಟ್ಟಿಗೆ ಕಾಣಿಸಿಕೊಳ್ಳುವ ಹೆಸರುಗಳು. ಲಾಲ್ ಎಂದರೆ ಲಾಲಾ ಲಜಪತರಾಯ್, ಬಾಲ್ ಎಂದರೆ ಬಾಲ ಗಂಗಾಧರ ತಿಲಕ್, ಪಾಲ್ ಎಂದರೆ ಬಿಪಿನ್ ಚಂದ್ರಪಾಲ್. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಹೋರಾಟದ ದಿಕ್ಕನ್ನು ಬದಲಿಸಿದ ಈ ಯುವಕರು ಕ್ರಾಂತಿಕಾರಿ ಹೋರಾಟದಿಂದಷ್ಟೇ ಸ್ವರಾಜ್ಯದ ಕನಸು ನನಸ...

ಧೈರ್ಯಕ್ಕೆ ಮತ್ತೊಂದು ಹೆಸರೇ ಜನರಲ್ ತಿಮ್ಮಯ್ಯ 🇮🇳🙏

Image
#ಧೈರ್ಯಕ್ಕೆ_ಮತ್ತೊಂದು_ಹೆಸರೇ_ಜನರಲ್_ತಿಮ್ಮಯ್ಯ ಜನರಲ್ ತಿಮ್ಮಯ್ಯರವರ ಸಾಧನೆ ಮತ್ತು ಅಂದಿನ ಸರ್ಕಾರ ಜನರಲ್ ತಿಮ್ಮಯ್ಯ ಅವರ ಜೊತೆ ನಡೆದುಕೊಂಡ ರೀತಿಯನ್ನು #ಬ್ರಿಗೇಡಿಯರ್_ಜಾನ್_ಪಿ_ದಳವಿ ಈ ರೀತಿ ವಿವರಿಸುತ್ತಾರೆ..🙏 ಅವತ್ತಿನ ತನಕ ನಿರ್ಲಕ್ಷ್ಯದಿಂದಿದ್ದು, ಉಡಾಫೆಯ ಮಾತುಗಳನ್ನಾಡುತ್ತಲೇ ಓಡಾಡಿಕೊಂಡಿದ್ದ ನೆಹರು ಇದ್ದಕ್ಕಿದ್ದಂತೆ ಭಾರತದ ಗಡಿಗಳನ್ನು ಕಾಯುವ ಕೆಲಸ ವನ್ನು ಸೇನೆಗೆ ಒಪ್ಪಿಸಿ ಬಿಟ್ಟಿದ್ದರು. ಪಾರ್ಲಿಮೆಂಟಿನಲ್ಲಿ ಅವರಿಗೆ ವಿರೋಧ ಪಕ್ಷಗಳೆದುರು ಮುಖ ಉಳಿಸಿಕೊಳ್ಳುವ ಹರಕತ್ತು ಇತ್ತು. ಬೇರಿನ್ಯಾವುದೂ ತೋಚದಿದ್ದಾಗ, ಇಡೀ ಸಮಸ್ಯೆಯನ್ನು ಸೇನೆಗೆ ಒಪ್ಪಿಸಿದ್ದೇನೆ ಎಂದು ನುಣಿಚಿಕೊಂಡು ಬಿಟ್ಟರು. ಒಬ್ಬ ಅಂತಾರಾಷ್ಟ್ರೀಯ ಮುತ್ಸದ್ದಿ ಯಾಗಿ ಬೆಳೆಯಬಯಸುತ್ತಿದ್ದ ಮಹಾನ್ ಬುದ್ಧಿವಂತ ನೆಹರೂಜಿಗೆ ಇಂಥದೊಂದು ತಪ್ಪು ಮಾಡಬಾರದೆಂದು ತೋಚಲೇ ಇಲ್ಲ. ಚೀನದ ನಾಯಕರು NEFA ದ ಸರಹದ್ದುಗಳ ತನಕ ತಮ್ಮ ಮಜಬೂತಾದ ಸೈನ್ಯವನ್ನು ತಂದು ನಿಲ್ಲಿಸಿದಾಗಲೂ ಕೂಡ ನಾವು ಸೇನೆಯನ್ನು ಬಳಸುತ್ತಿದ್ದೇವೆ ಎಂಬ ಹೇಳಿಕೆ ಕೊಟ್ಟಿರಲಿಲ್ಲ. 'ಅಲ್ಲಿ ನಮ್ಮ ಗಡಿ ರಕ್ಷಕ ಪಡೆ (Frontier guards) ಮಾತ್ರ ಇದೆ" ಎಂದು ಜಗತ್ತಿಗೆ ಸುಳ್ಳು ಹೇಳುತ್ತ ಬಂತು. ಆದರೆ ನಮ್ಮ ನೆಹರೂ ಇದ್ದಕ್ಕಿದ್ದಂತೆ "ಸೈನ್ಯಕ್ಕೆ ಗಡಿ ಕಾಯುವ ಜವಾಬ್ದಾರಿ. ಒಪ್ಪಿಸಿದ್ದೇನೆ' ಎಂದು ಹೇಳಿಕೆ ಕೊಡುವ ಮೂಲಕ ಊರಿಗೆ ಮುಂಚೆ ನಾವು ಯುದ್ಧಕ್ಕೆ ಸಿದ...

ಓಂ ಪ್ರಕಾಶ್ ಯಾದವ್ ವಿಶ್ವಕ್ಕೆ ಸ್ಪೂರ್ತಿದಾಯಗುವ ಬಾಲಕ..😍🙏

Image
#ಓಂ_ಪ್ರಕಾಶ್_ಯಾದವ್ 🧡 ಏಳನೇ ತರಗತಿಯಲ್ಲಿ ಓದುತ್ತಿದ್ದ ಉತ್ತರಪ್ರದೇಶದ ರೈತನ ಮಗ. ವ್ಯಾನ್ ವೊಂದಕ್ಕೆ ಬೆಂಕಿ ಬಿದ್ದಾಗ ಮಕ್ಕಳನ್ನು ರಕ್ಷಿಸಿ ಸಂಜಯ ಚೋಪ್ರ ಅವಾರ್ಡ ಗೆದ್ದರು. ಮತ್ತು 2011ರಲ್ಲಿ ರಾಷ್ಟ್ರದ ಧೈರ್ಯಶಾಲಿ ಪ್ರಶಸ್ತಿ ಗೆದ್ದ ಹುಡುಗ..😍🙏 ಅಂದು ಸೆಪ್ಟಂಬರ್ 11, 2010. ತನ್ನ ಸ್ನೇಹಿತರ ಜೊತೆ ಮಾರುತಿ ಕಾರ್ ನಲ್ಲಿ ಶಾಲೆಗೆ ಹೋಗುತ್ತಿದ್ದ. ಆದರೆ ಆಕಸ್ಮಿಕವಾಗಿ ಮಾರುತಿ ಕಾರಿಗೆ ಬೆಂಕಿ ಹೊತ್ತಿತು. ಕಾರಣವಿಷ್ಟೆ ಗ್ಯಾಸ್'ಕಿಟ್ ನಲ್ಲಿನ ಶಾರ್ಟಸರ್ಕ್ಯೂಟ್ !!! ತಕ್ಷಣ ಮಾರುತಿ ಕಾರಿನ ಡೋರ್ ತೆಗೆದು ಚಾಲಕ ಪಲಾಯನ ಗೈದ. ಆದರೆ ಯಾದವ್ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಬಳಿಯಿದ್ದ ಡೋರ್ ಮುರಿದ,ಬಾಗಿಲು ತೆರೆದ, ತನ್ನ ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಎಳೆದು ಹಾಕಿ, ಯಾದವ್ ಆ ಹೊತ್ತಿನಲ್ಲಿ ತನ್ನ ಎಂಟು ಜನ ಸಹಪಾಠಿಗಳನ್ನು ರಕ್ಷಿಸಿದ್ದ. ಆಗಲೆ ಬೆಂಕಿ ಅವನ ಮುಖ ಬೆನ್ನು ತೋಳುಗಳನ್ನು ಬೇಯಿಸಿಬಿಟ್ಟಿತು. ಅಷ್ಟಾಗಿಯೂ ಅವನ ಮುಖದಲ್ಲಿ ಭಯ ಕಾಣುತ್ತಿರಲಿಲ್ಲ.ಬದಲಾಗಿ ಅವನ ಮುಖದ ಸುಟ್ಟಗಾಯಗಳು ನೋಡಿದವರನ್ನು ಭಯಬೀಳಿಸುತ್ತಿತ್ತು. ಅವನ ಆತ್ಮಸ್ಥೈರ್ಯ ಒಂದಿಂಚು ಕುಸಿದಿರಲಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ವರ್ಷ ಶಾಲೆಯಿಂದ ದೂರ ಕೂಡ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು..😔 ಸಂದರ್ಶಕನೊಬ್ಬ ಘಟನೆಯ ಬಗ್ಗೆ ಕೇಳಿದ್ದಕ್ಕೆ ಹೀಗೆ ಹೇಳಿದ "ನನಗೆ ನನ್ನ ಮೈ ಸುಟ್ಟುಹೋದ ಅನುಭವ ಆಗುತ...

ನಡೆದಾಡುವ ವಿಶ್ವಕೋಶ, ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ, ಕನ್ನಡಿಗರ ಹೆಮ್ಮೆಯ "ಕಡಲ ತಡಿಯ ಭಾರ್ಗವ" ಡಾ. ಕೆ #ಶಿವರಾಮ_ಕಾರಂತ ರವರ ಜನ್ಮ ದಿನ 😍💐

Image
ನಡೆದಾಡುವ ವಿಶ್ವಕೋಶ, ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ, ಕನ್ನಡಿಗರ ಹೆಮ್ಮೆಯ "ಕಡಲ ತಡಿಯ ಭಾರ್ಗವ" ಡಾ. ಕೆ #ಶಿವರಾಮ_ಕಾರಂತ ರವರ ಜನ್ಮ ದಿನದಂದು, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಸೇವೆಯನ್ನು ಸ್ಮರಿಸುತ್ತಾ ನನ್ನ ನಮನಗಳನ್ನು ಸಲ್ಲಿಸೋಣ.. 😍🙏💐 ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು. ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ...