#MorbiBridgeCollapse ಗುಜರಾತ್ ನ ಮಚ್ಚು ನದಿಯ ಸುಮಾರು 140 ವರ್ಷ (1879ರ) ಹಳೆಯ ಸೇತುವೆ ನಿನ್ನೆ ಸಂಜೆ ಕುಸಿದು ಬಿದ್ದು ಸುಮಾರು 130 ಕ್ಕೂ ಅಧಿಕ ಜನರು ದುರ್ಮರಣ ಹೊಂದಿದ
#MorbiBridgeCollapse
ಗುಜರಾತ್ ನ ಮಚ್ಚು ನದಿಯ ಸುಮಾರು 140 ವರ್ಷ (1879ರ) ಹಳೆಯ ಸೇತುವೆ ನಿನ್ನೆ ಸಂಜೆ ಕುಸಿದು ಬಿದ್ದು ಸುಮಾರು 130 ಕ್ಕೂ ಅಧಿಕ ಜನರು ದುರ್ಮರಣ ಹೊಂದಿದ ಘಟನೆ ಗುಜರಾತ್ ನಲ್ಲಿ ನಡೆದಿದೆ..
ಈ ಸೇತುವೆಯನ್ನು ದುರಸ್ತಿಗಾಗಿ ಸುಮಾರು 7 ತಿಂಗಳ ಕಾಲ ಮುಚ್ಚಲಾಗಿತ್ತು ಮತ್ತು ಮೊನ್ನೆ ದೀಪಾವಳಿಯ ಎರಡು ದಿನಗಳ ನಂತರ ದುರಸ್ತಿಗೊಳಿಸಿ ಮತ್ತೆ ತೆರೆಯಲಾಗಿತ್ತು...
ಈ ಘಟನೆಗೆ ಸರ್ಕಾರಗಳೇ ಕಾರಣ.....
1. 100 ಸಾಮರ್ಥ್ಯದ ಸೇತುವೆಯ ಮೇಲೆ 400 ಜನರನ್ನು ಏಕೆ ಅನುಮತಿಸಲಾಯಿತು?
2. ಒಂದು ಸೇತುವೆ ದುರಸ್ತಿಗೊಂಡ ನಂತರ ಅದರ ಸಾಮರ್ಥ್ಯ (capacity) ಎಷ್ಟು ಎಂದು ಅದನ್ನು ದುರಸ್ತಿಗೊಳಿಸಿದ ಟೆಂಡರ್ ಪಡೆದುಕೊಂಡ ಒರೆವಾ ಗ್ರೂಪ್ ಟೆಂಡರ್ ಅವರು ತಿಳಿಸಿ. ಅದರ ಮಾಹಿತಿಯಂತೆ ಟಿಕೆಟ್ ಪಡೆದುಕೊಳ್ಳುವವರು ಅಷ್ಟೇ ಜನರನ್ನು ಬಿಡಬೇಕಿತ್ತು..
2. ಈಗ ಸರ್ಕಾರಗಳು ತನ್ನ ತಪ್ಪನ್ನು ತಳ್ಳಿ ಹಾಕಲು ಸೇತುವೆ ಪುನಾರಂಭಕ್ಕೆ ಸರ್ಕಾರದ ಅನುಮತಿಯೇ ಪಡೆದಿಲ್ಲ ಎಂದು ಹೇಳುತ್ತಿದೆ. ಇದು ಒಂಥರಾ ಅಸಯ್ಯ ಅನಿಸುವುದಿಲ್ಲವೇ....?? ಅನುಮತಿ ಪಡೆದ ಇಲ್ಲ ಅಂತಾ ಆದರೆ 400 + ಜನ ಹೋಗುವವರೆಗೂ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು...?? ಹಾಗಾದರೆ ಸುಮಾರು 130 ಕ್ಕೂ ಅಧಿಕ ಜನರ ಸಾವಿಗೆ ಬೆಲೆಯೇ ಇಲ್ಲವೇ...?
ಅಂದು ಬಂಗಾಳದಲ್ಲಿ ನಡೆದ ಫ್ಲೈಓವರ್ ಕುಸಿತದ ಸಂದರ್ಭದಲ್ಲಿ ಇದೇ ನಮ್ಮ ದೇಶದ ಪ್ರಧಾನಿ ಚುನಾವಣೆಗೆ ಮುನ್ನ ಕೋಲ್ಕತ್ತಾ ಮೇಲ್ಸೇತುವೆ ಕುಸಿದಿರುವುದು ಪಶ್ಚಿಮ ಬಂಗಾಳ ಸರ್ಕಾರ ಮಾಡಿರುವ ಭ್ರಷ್ಟಾಚಾರದ ಮಟ್ಟವನ್ನು ಸಾಬೀತುಪಡಿಸುತ್ತದೆ ಮತ್ತು ಇದೊಂದು 'ವಂಚನೆಯ ಕೃತ್ಯ' ಎಂದು ಹೇಳಿದ್ದರು...
ಈಗ ಏನೆಂದು ಹೇಳುವಿರಿ ಮಾನ್ಯ Narendra Modi ಯವರೇ....??
ಇದು ನಮ್ಮ ಇಡೀ ದೇಶದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ... ಕರ್ನಾಟಕದಲ್ಲಿ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ 40% ಕಮಿಷನ್ ನ ಹಣೆ ಬರಹ..
ಎಲ್ಲಾ ಸರ್ಕಾರಗಳ ರಾಜಕೀಯ ಕಿತ್ತಾಟಕ್ಕೆ ಬಲಿಯಾಗುವುದು ಅಮಾಯಕ ಜನರು ಎಂಬುದು ಬಹಳ ದುಃಖ ಮತ್ತು ವಿಪರ್ಯಾಸದ ಸಂಗತಿ....🥲
ಈ ದುರ್ಘಟನೆಯಲ್ಲಿ ಮರಣ ಹೊಂದಿದ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನು ಆ ಪರಮಾತ್ಮ ನೀಡಲಿ...🙏
#PrayForGujart #Gujrat
- Suki Shetty
Comments