ಧೈರ್ಯಕ್ಕೆ ಮತ್ತೊಂದು ಹೆಸರೇ ಜನರಲ್ ತಿಮ್ಮಯ್ಯ 🇮🇳🙏
#ಧೈರ್ಯಕ್ಕೆ_ಮತ್ತೊಂದು_ಹೆಸರೇ_ಜನರಲ್_ತಿಮ್ಮಯ್ಯ
ಜನರಲ್ ತಿಮ್ಮಯ್ಯರವರ ಸಾಧನೆ ಮತ್ತು ಅಂದಿನ ಸರ್ಕಾರ ಜನರಲ್ ತಿಮ್ಮಯ್ಯ ಅವರ ಜೊತೆ ನಡೆದುಕೊಂಡ ರೀತಿಯನ್ನು #ಬ್ರಿಗೇಡಿಯರ್_ಜಾನ್_ಪಿ_ದಳವಿ ಈ ರೀತಿ ವಿವರಿಸುತ್ತಾರೆ..🙏
ಅವತ್ತಿನ ತನಕ ನಿರ್ಲಕ್ಷ್ಯದಿಂದಿದ್ದು, ಉಡಾಫೆಯ ಮಾತುಗಳನ್ನಾಡುತ್ತಲೇ ಓಡಾಡಿಕೊಂಡಿದ್ದ ನೆಹರು ಇದ್ದಕ್ಕಿದ್ದಂತೆ ಭಾರತದ ಗಡಿಗಳನ್ನು ಕಾಯುವ ಕೆಲಸ ವನ್ನು ಸೇನೆಗೆ ಒಪ್ಪಿಸಿ ಬಿಟ್ಟಿದ್ದರು. ಪಾರ್ಲಿಮೆಂಟಿನಲ್ಲಿ ಅವರಿಗೆ ವಿರೋಧ ಪಕ್ಷಗಳೆದುರು ಮುಖ ಉಳಿಸಿಕೊಳ್ಳುವ ಹರಕತ್ತು ಇತ್ತು. ಬೇರಿನ್ಯಾವುದೂ ತೋಚದಿದ್ದಾಗ, ಇಡೀ ಸಮಸ್ಯೆಯನ್ನು ಸೇನೆಗೆ ಒಪ್ಪಿಸಿದ್ದೇನೆ ಎಂದು ನುಣಿಚಿಕೊಂಡು ಬಿಟ್ಟರು. ಒಬ್ಬ ಅಂತಾರಾಷ್ಟ್ರೀಯ ಮುತ್ಸದ್ದಿ ಯಾಗಿ ಬೆಳೆಯಬಯಸುತ್ತಿದ್ದ ಮಹಾನ್ ಬುದ್ಧಿವಂತ ನೆಹರೂಜಿಗೆ ಇಂಥದೊಂದು ತಪ್ಪು ಮಾಡಬಾರದೆಂದು ತೋಚಲೇ ಇಲ್ಲ.
ಚೀನದ ನಾಯಕರು NEFA ದ ಸರಹದ್ದುಗಳ ತನಕ ತಮ್ಮ ಮಜಬೂತಾದ ಸೈನ್ಯವನ್ನು ತಂದು ನಿಲ್ಲಿಸಿದಾಗಲೂ ಕೂಡ ನಾವು ಸೇನೆಯನ್ನು ಬಳಸುತ್ತಿದ್ದೇವೆ ಎಂಬ ಹೇಳಿಕೆ ಕೊಟ್ಟಿರಲಿಲ್ಲ. 'ಅಲ್ಲಿ ನಮ್ಮ ಗಡಿ ರಕ್ಷಕ ಪಡೆ (Frontier guards) ಮಾತ್ರ ಇದೆ" ಎಂದು ಜಗತ್ತಿಗೆ ಸುಳ್ಳು ಹೇಳುತ್ತ ಬಂತು. ಆದರೆ ನಮ್ಮ ನೆಹರೂ ಇದ್ದಕ್ಕಿದ್ದಂತೆ "ಸೈನ್ಯಕ್ಕೆ ಗಡಿ ಕಾಯುವ ಜವಾಬ್ದಾರಿ. ಒಪ್ಪಿಸಿದ್ದೇನೆ' ಎಂದು ಹೇಳಿಕೆ ಕೊಡುವ ಮೂಲಕ ಊರಿಗೆ ಮುಂಚೆ ನಾವು ಯುದ್ಧಕ್ಕೆ ಸಿದ್ಧರಿದ್ದೇವೆಂಬುದನ್ನು ಜಗತ್ತಿಗೆ ಸಾರುವಂತಹ ಕೆಲಸ ಮಾಡಿ ಬಿಟ್ಟಿದ್ದಾರೆ. ಅಸಲಿಗೆ ನಮ್ಮ ಸೇನೆ ಯುದ್ಧಕ್ಕಲ್ಲ; ಗಡಿ ಕಾಯುವುದಕ್ಕೂ ಸಿದ್ಧವಿರಲಿಲ್ಲ!
ಅದೊಂದು ತಣ್ಣಗಿನ ಮುಂಜಾವಿನಂದು, ಅಕ್ಟೋಬರ್ 20, 1959ರಂದು ಲದಾಕ್‌ನಲ್ಲಿ ಒಂದು ಭಯಾನಕ ಘಟನೆ ಜರುಗಿ ಹೋಯಿತು. ಹವಿಲ್ದಾರ್ ಕರಮ್‌ಸಿಂಗ್ ಎಂಬ ಅಧಿಕಾರಿ ತನ್ನ ಪಡೆಯ ಸಮೇತ ಅವತ್ತು ಗಸ್ತು
ತಿರುಗಲು ಹೊರಟಿದ್ದ. ಮಂಜು ದಟ್ಟವಾಗಿತ್ತು. ಕೇವಲ ಇಪ್ಪತ್ತು ಜನರಿದ್ದ ಈ ಪೊಲೀಸ್ ಪಾರ್ಟಿ (ಗಸ್ತು ದಳ) ಇನ್ನು ಕೆಲವೇ ನಿಮಿಷಗಳಲ್ಲಿ ಮಾರಣ ಹೋಮ ವೊಂದು ಜರುಗಿ ಹೋದೀತೆಂಬ ಅತಿ ಚಿಕ್ಕ ಅನುಮಾನವೂ ಇಲ್ಲದೆ, ಸುರಿದ ಮಂಜಿನಲ್ಲಿ ಬೂಟು ಎತ್ತಿಡುತ್ತ ನಡೆಯುತ್ತಿತ್ತು. ಒಂದು ಪರ್ವತ ತಿರುವಿನಲ್ಲಿ ಸಾಗಿಸುತ್ತಿದ್ದ ಈ ದಳ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಶುರುವಾಗಿ ಹೋಯಿತು. ಏನಾಗುತ್ತಿದೆ ಎಂಬುದು ಅರ್ಥವಾಗುವುದರೊಳಗಾಗಿ ಹವಿಲ್ದಾರ್ ಕರಮ್‌ಸಿಂಗ್‌ನ ಪಡೆಯ ಒಂಬತ್ತು ಜನ ಸೈನಿಕರು ಸತ್ತು ಬಿದ್ದರು. ಉಳಿದ ಹನ್ನೊಂದು ಜನರನ್ನು ಚೀನಿ ಪಡೆ ಬಂಧಿಸಿಬಿಟ್ಟಿತ್ತು. ಸ್ವತಃ ಹವಿಲ್ದಾರ್ ಕರಮ್‌ಸಿಂಗ್ ಬಂಧಿತನಾಗಿದ್ದ. ಆತನ ಮುಖದಲ್ಲಿ ಭಯವಿರಲಿಲ್ಲ. ದೊಡ್ಡ ದಿಗ್ರಮಯಿತ್ತು. ಏಕೆಂದರೆ ಈ ಅನಿರೀಕ್ಷಿತ ಮಾರಣಹೋಮ ಚೀನಾ-ಭಾರತ ಗಡಿ ಯಲ್ಲಾಗಿರಲಿಲ್ಲ. ನಮ್ಮ ಸರಹದ್ದು ಒಳಗೆ ಆಗಿತ್ತು. ಚೀನಿಗಳು ಸಲೀಸಾಗಿ ನಲವತ್ತು ಮೃಲಿ ಆಳಕ್ಕೆ ನುಗ್ಗಿ ಬಂದು ಬಿಟ್ಟಿದ್ದರು. ಬಂದ ಕೆಲಸ ಮುಗಿಸಿ ವಾಪಸು ಹೊರಟು ಹೋಗಿದ್ದರು! ಈ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಂತೆಯೇ ದೇಶಾದ್ಯಂತ ದೊಡ್ಡ ಆಕ್ರೋಶ ಬೀಸಿಬಿಟ್ಟಿತ್ತು. ಜನ ಉದ್ವಿಗ್ನರಾದರು. ಇನ್ ಯಾರಾದರೂ ಹಿಂದಿ-ಚೀನೀ ಭಾಯಿ ಭಾಯಿ ಎಂದು ಮಾತನಾಡಿದರೆ, ಅವರಿಗೆ ಬುದ್ಧಿ ಕಲಿಸಲು ಇಡೀ ದೇಶವೇ ತಯಾರಾಗಿ ನಿಂತು ಬಿಟ್ಟಿತ್ತು.
ಇಂಥ ಸಂದರ್ಭದಲ್ಲಿ ದೇಶ ಬಯಸಿದ್ದುದು ನೆಹರೂಜಿ ಅವರ ವೀರಾವೇಶದ ಭಾಷಣವನ್ನಲ್ಲ.
ಅಂಥವುಗಳೇನಿದ್ದರೂ ಕೂತು ಕೇಳಲಿಕ್ಕೆ ಚೆಂದ. ಅದರ ಬದಲು ನೆಹರೂಜಿ ಚೀನಾದೊಂದಿಗೆ ಕಟ್ಟುನಿಟ್ಟಾದ ಮಾತುಕತೆಗೆ ಕೂತು ಬಿಡಬಹುದಾಗಿತ್ತು. ಒಂದಷ್ಟು ಪ್ರದೇಶವನ್ನು ಅವರಿಗೆ ಕೊಟ್ಟು, ಇನ್ನೊಂದಷ್ಟನ್ನು ನಾವಿಸಿದುಕೊಂಡು, ಹಳೆಯ ನಕಾಶಗಳನ್ನು ತಿದ್ದಿ ಬರೆಯಿಸಿ, ಅರ್ಧ ಶತಮಾನದಷ್ಟು ಹಿಂದಿನ ಮೆಕ್ ಮಹೋನ್ ಲೈನನ್ನು ಮತ್ತೆ ನವೀಕರಿಸಿಕೊಡು, ಅಲ್ಲಿಗೆ
ಚೀನಿಗಳ ಸಹವಾಸವೇ ಸಾಕೆಂದು ಕೈ ಕುಲುಕಿ ಎದ್ದು ಬಂದು ಬಿಡಬಹುದಾಗಿತ್ತು. ಚೀನಿಗಳು ಈಗ ಅತ್ಯಂತ ಸ್ಪಷ್ಟವಾಗಿ ತಮ್ಮ ಯುದ್ಧ ಪಿಪಾಸು ಮುಖದ ಪ್ರದರ್ಶನ ಮಾಡಿಬಿಟ್ಟಿದ್ದರು. ಗಡಿ ವಿವಾದ ಮಾತುಕತೆ ಯಲ್ಲಿ ಬಗೆಹರಿಸಿಕೊಳ್ಳಲಾಗದಿದ್ದರೆ, ಯಾವತ್ತಿದ್ದರು ತಾವು ಯುದ್ಧಕ್ಕೆ ಸಿದ್ದ ಎಂಬುದನ್ನು ಲದಾಕ್‌ನ ಘಟನೆಯ ಮೂಲಕ ಸಾಬೀತು ಮಾಡಿಬಿಟ್ಟಿದ್ದರು.
ನೆಹರೂಜಿಯವರ ವೀರಾವೇಶದ ಭಾಷಣ ಕೇಳಿಕೊಂಡಿರಲು ದೇಶವೇನೂ ಸಿದ್ಧವಾಗಿತ್ತು.
ಆದರೆ ದೇಶದ ಜನರಿಗಿದ್ದ ಅಮಾಯಕ ಸಂತೋಷ ಸೈನ್ಯಕ್ಕಿರಲಿಲ್ಲ. ಚೀನಾ ಯುದ್ಧ ಸಿದ್ಧತೆಗಳು
ನಮ್ಮಲ್ಲಿ ಆತಂಕವುಂಟು ಮಾಡತೊಡಗಿದ್ದವು. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ದನಿಯೆತ್ತಿದವರು ಭಾರತದ #ಸೇನಾ_ಮುಖ್ಯಸ್ಥ_ಜನರಲ್_ತಿಮ್ಮಯ್ಯ, ಮೊದಲಿನಿಂದಲೂ ಅವರು ಚೀನಿ ಶತ್ರುವಿನ ಬಗ್ಗೆ ಒಂದು ಅನುಮಾನ ಕಣ್ಣಿಟ್ಟೇ ಇದ್ದರು. ಇವತ್ತಲ್ಲ ನಾಳೆ ಮೈಮೇಲೇರಿ ಬರಲಿರುವ ಚೀನಿಗಳ ವಿರುದ್ಧ ನಮಗೆ ಹೆಚ್ಚಿನ ಸೈನಿಕರನ್ನು ಕೊಡಿ; ಮದ್ದುಗುಂಡು ಕೊಡಿ ಎಂದು ಕೇಳುತ್ತಲೇ ಬಂದಿದ್ದರು. ಆದರೆ ನಮ್ಮ #ರಕ್ಷಣಾಮಂತ್ರಿ_ಕೃಷ್ಣ_ಮೆನನ್‌ರಿಗೆ ಮೊದಲಿನಿಂದಲೂ ಜನರಲ್ ತಿಮ್ಮಯ್ಯನವರ ಎಂದರೆ ಏನೋ ಅಸಡ್ಡೆ, ಇಂಗ್ಲೀಷ್ ಕಾಲದ ಮನುಷ್ಯ. ಯಾವಾಗಲೂ ಗೊಣಗುತ್ತಾನೆ. ಸುಮ್ಮಸುಮ್ಮನೆ ಗಾಬರಿಯಾಗುತ್ತಾನೆ. ಆತನಿಗೆ ಹೇಳಿ, ಚೀನಾ ವಿಷಯದಲ್ಲಿ ಯಾವಾಗ ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ ನಾವು ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರಲಿಕ್ಕೆ ಹೇಳಿ" ಎಂಬ ಧಾಟಿಯಲ್ಲಿ ಮಾತನಾಡುತ್ತಾ ಬಂದರು ಮೆನನ್, ಎಲ್ಲಕ್ಕಿಂತ ಮುಖ್ಯವಾಗಿ, "ನಮ್ಮ ಮೊದಲನೇ ಶತ್ರುವೇನಿದ್ದರೂ ಪಾಕಿಸ್ತಾನ.
ಅದು ನಮ್ಮ ಎನಿಮಿ ನಂಬರ್ ಒನ್! ಅದರೆಡೆಗೆ ಗಮನವಿರಲಿ. ಚೀನಾ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ" ಎಂದು ಕೃಷ್ಣ ಮೆನನ್ ಅವಿವೇಕಿಯಂತೆ ಮಾತನಾಡಿದಾಗ, ಸಮರ್ಥ ಯೋಧ ಜನರಲ್ ತಿಮ್ಮಯ್ಯ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. "ನಮ್ಮ ರಕ್ಷಣಾ ಸಚಿವರು ಆಡುತ್ತಿರುವ ಮಾತುಗಳು ನನಗರ್ಥವಾಗುತ್ತಿವೆ. ಅವರ ಅಭಿನಂದನೆಗಳಿಗೆ ನಾನು ಕೃತಜ್ಞ, ಆದರೆ ಅವರ ದಡ್ಡತನಕ್ಕೆ ನನ್ನ ಸಂತಾಪವಿದೆ. ಶತ್ರುಗಳಿಗೆ ನಂಬರುಗಳನ್ನು ಕೊಟ್ಟು ಇವರು ಪ್ರಥಮ ಶತ್ರು, ಇನ್ನೊಬ್ಬನು ನಂತರ ಶತ್ರು ಅಂತ ತೀರ್ಮಾನ ಮಾಡುವ ಕೆಲಸವಿದೆಯಲ್ಲ? ಅದನ್ನು ಕಮ್ಯುನಿಸ್ಟ್ ರಾಜಕಾರಣಿಯಾದ ಮನನ್‌ರಂಥವರು ಮಾಡಬಹುದೇನೋ, ಸೇನಾಧಿಪತಿಯಾದ ನಾನು ಮಾಡಲಾರೆ!"
ಜನರಲ್ ತಿಮ್ಮಯ್ಯ ಕಡ್ಡಿ ಮುರಿದಂತೆ ಮಾತಾಡಿದ್ದರು.
ಏಕೆಂದರೆ, ಭಾರತೀಯ ಸೇನೆಯ ಮುಖ್ಯಸ್ಥರಾಗುವುದಕ್ಕೆ ಮುಂಚೆಯೇ ಅವರಿಗೆ ನಮ್ಮ ಸೇನೆ ಸ್ಥಿತಿಗತಿಗಳೇನೆಂಬುದು ಗೊತ್ತಿತ್ತು. ಪಾರ್ಲಿಮೆಂಟಿನಲ್ಲಿ ಭಾಷಣ ಮಾಡಿದಷ್ಟು ಸುಲಭವಾಗಿ ದುಸ್ಥಿತಿಯಲ್ಲಿರುವ ಭಾರತೀಯ ಸೇನೆಯನ್ನು ಹಿಮಾಲಯದಲ್ಲಿ ಗಡಿ ಕಾಯುವ ಕೆಲಸಕ್ಕೆ ಹಚ್ಚುವಂತಿರಲಿಲ್ಲ. ಹೆಚ್ಚಿನ ಜನ, ಮದ್ದುಗುಂಡು, ವಸತಿ, ಬಟ್ಟೆ, ಸಲಕರಣೆ ಇಲ್ಲ ಬೇಕಿತ್ತು. ನಮ್ಮಲ್ಲಿ ಯಾವುದೂ ಇರಲಿಲ್ಲ. ಈಗ ಲದಾಕ್‌ನ ಗಡಿ ಕಾಯುವ ಜೊತೆಗೆ NEFA ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊರಸಿಬಿಟ್ಟರ ಸೈನ್ಯ ನಲುಗಿ ಹೋಗುತ್ತದೆ ಎಂಬುದು ಜನರಲ್ ಮ್ಮಯ್ಯನವರಿಗೆ ಉಳಿದಲ್ಲರಿಗಿಂತ ಸ್ಪಷ್ಟವಾಗಿ ಗೊತ್ತಿತ್ತು.
ಆದರೆ ಹಠಕ್ಕೆ, ಮೂರ್ಖತನಕ್ಕೆ ಬಿದ್ದ ರಕ್ಷಣಾ ಸಚಿವ ಮೆನನ್ ಒಬ್ಬ ಸೇನಾ ಮುಖ್ಯಸ್ಥ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಇಲ್ಲ. ವಿನಾಕಾರಣವಾಗಿ ಸೇನೆಯ ಇತರ ಅಧಿಕಾರಿಗಳು ಬಡ್ತಿ ವಿಷಯಕ್ಕೆ ತಲೆ ಹಾಕಿದರು. ಜನರಲ್ ತಿಮ್ಮಯ್ಯನವರ ವ್ಯಕ್ತಿತ್ವದ ಬಗ್ಗೆ ಹಗುರಾಗಿ
ಮಾತನಾಡತೊಡಗಿದರು. ಬರಬರುತ್ತಾ ಮಾತು ಪಡಸಾದವು. ಇದಕ್ಕೆ ಸರಿಯಾಗಿ ಪತ್ರಿಕೆಗಳು
ಪ್ರತಿನಿತ್ಯ ನಮ್ಮ ದೇಶದ ರಕ್ಷಣಾ ಸಚಿವ ಮತ್ತು ಸೇನಾ ಮುಖ್ಯಸ್ಥರ ನಡುವಿನ ವಾಗ್ವಾದದ ಬಗ್ಗೆ ವ್ಯಾಪಕವಾಗಿ ಬರೆಯತೊಡಗಿದವು. ನೊಂದು ಹೋದರು ಜನರಲ್ ತಿಮ್ಮಯ್ಯ, ಅದೊಂದು ಮುಂಜಾನೆಯ ಸೇನಾ ಮುಖ್ಯಸ್ಥ ದಿರಿಸು ಕಳಚಿಟ್ಟು ಎರಡೇ ಎರಡು ಸಾಲಿನ ರಾಜೀನಾಮೆ ಪತ್ರ ಬರೆದುಕೊಂಡು ಹೋಗಿ ಪ್ರಧಾನಿ ನೆಹರೂರವರ ಮೇಜಿನ ಮೇಲಿರಿಸಿಬಿಟ್ಟರು. ಆ ಮಹಾಯೋಧನ ಮುಖದಲ್ಲಿ ಕೇವಲ ನೋವಿತ್ತು. ತನ್ನನ್ನು ನಡೆಸಿಕೊಂಡ ರೀತಿಯೆಡೆಗೆ ಅಸಮಾಧಾನ ವಿತ್ತು. ಆದರೆ ನೆಹರು ಮಹಾನ್ ಚಾಣಾಕ್ಷ ರಾಜಕಾರಣಿ. ವೈಯಕ್ತಿಕವಾಗಿ ದೊಡ್ಡ charm ಇದ್ದ ಮನುಷ್ಯ. ಪಳಗಿದ ಮುತ್ಸದ್ದಿ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡ ಹುದ್ದೆ ಯಲ್ಲಿದ್ದ ಮನುಷ್ಯ. "ಇದೆಂಥದು ಜನರಲ್ ತಿಮ್ಮಯ್ಯನವರ? ತೀರ ನೀವು ಹೀಗೆ ಮಾಡೋದು? ದಯವಿಟ್ಟು ನಿಮ್ಮ ರಾಜೀನಾಮೆ ವಾಪಸ್ ತೆಗೆದುಕೊಳ್ಳಿ. ಭಾರತದ ಸೇನೆಗೆ ಏನೇನು ಬೇಕು? ನನಗೆ ಹೇಳಿ. ವೈಯಕ್ತಿಕವಾಗಿ ನಾನು ಪೂರೈಸುತ್ತೇನೆ. ನಮ್ಮ ರಕ್ಷಣಾ ಸಚಿವ ಮೆನನ್ ಅವರು ನಿಮ್ಮ ಆಡಳಿತ ವ್ಯವಹಾರದಲ್ಲಿ ತಲೆ ಹಾಕದಂತೆ ನೋಡಿ ಕೊಳ್ಳುತ್ತೇನೆ. ಇವತ್ತಿನ ದೇಶ ಎಂಥ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ ಅಂತ ನಿಮಗೆ ಗೊತ್ತು. ಭಾರತ - ಚೀನಾ ಗಡಿ ಸಮಸ್ಯೆ ಕರಾಳವಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ಕೈ ಬಿಡುತ್ತೀರಾ? ಸುಮ್ಮನಿರಿ. ದಯವಿಟ್ಟು ರಾಜಿನಾಮೆ ವಾಪಸು ತೆಗೆದುಕೊಳ್ಳಿ!" ಅಂದರು ನೆಹರು. ರಾಜಕಾರಣವೆಂದರೆ ಜನರಲ್ ತಿಮ್ಮಯ್ಯ ನವರಿಗೇನು ಗೊತ್ತು? ಆಟ ಒಬ್ಬ ಪ್ರಾಮಾಣಿಕ ಯೋಧ, ಎಲ್ಲವನ್ನೂ ನೇರವಾಗಿಯೇ ಆಲೋಚಿಸಬಲ್ಲ ನಿಸ್ಸಹ ಮನುಷ್ಯ, ಇಂಥ ಕರಾಳ ಸಂದರ್ಭದಲ್ಲಿ ನನ್ನ ಕೈ ಬಿಡುತ್ತೀರೋ ತಿಮ್ಮಯ್ಯನವರ ಎಂದು ಈ ದೇಶದ ಪ್ರಧಾನಿಯೇ ಕೈ
ಹಿಡಿದು ಕೇಳುತ್ತಿರುವಾಗ ಈ ಮಹಾ ಯೋಧರ ಮನಸ್ಸು ಕರಗಿ ಹೋಗದಿರಲು ಸಾಧ್ಯವೇ? ರಾಜೀನಾಮೆ ಪತ್ರವನ್ನು ನೆಹರೂ ಅವರ ಸಮ್ಮುಖದಲ್ಲಿ ಹರಿದು ಹಾಕಿ ಬಂದು ಸೈನಿಕ ಮುಖ್ಯಸ್ಥನ ಕಚೇರಿಯಲ್ಲಿ ಕುಳಿತರು.
ಅದು ಅವರ ಬದುಕಿನ ಮೊದಲನೇ ದೊಡ್ಡ ತಪ್ಪಾಗಿತ್ತು.
“ಜನರಲ್ ತಿಮ್ಮಯ್ಯ ನವರೊಂದಿಗೆ ನಾನು ಮಾತನಾಡಿದ್ದೇನೆ. ಸಣ್ಣದನ್ನೇ ಹಿಡಿದು ದೊಡ್ಡದು ಮಾಡುವ ಮನುಷ್ಯ ಅಥ. ಅವರ ರಾಜಿನಾಮೆಗೆ ಬೇರೆ ಕಾರಣಗಳೇ ಇರಲಿಲ್ಲ. ಸುಮ್ಮನೆ ಮೆನನ್ ಜೊತೆ ಭಿನ್ನಾಭಿಪ್ರಾಯ ಮಾಡಿಕೊರಿಡಿದ್ದಾರೆ, ಮೆನನ್ ದೊಡ್ಡ ಮುತ್ಸದ್ದಿ. ಸೈನ್ಯಾಧಿಕಾರಿಗಳ ಬಡ್ತಿ ವಿಷಯದಲ್ಲಿ ಮೆನನ್ ತಲೆ ಹಾಕಿದರು ಅಂತೆಲ್ಲ ಆಪಾದಿಸುವುದು, ಅರ್ಥಹೀನ. ಸಿಲ್ಲಿ! ತಿಮ್ಮಯ್ಯನವರ ಆಪಾದನೆಗಳನ್ನು ನಾನು ತಿರಸ್ಕರಿಸುತ್ತೇನೆ!” ಎಂದು ವಾಚಾಮಗೋಚರವಾಗಿ ಮಾತನಾಡಲು ತೊಡಗಿದರು ನೆಹರು. ಸಂಸತ್ತಿನಲ್ಲಿ ಕೇವಲ ತಮ್ಮ ಗೆಳೆಯ ಮೆನನ್‌ರನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಜನರಲ್ ತಿಮ್ಮಯ್ಯನವರಂಥ ಮಹಾ ಯೋಧನನ್ನು ಹೀಗಳೆದರು. ಅವರ ತಕರಾರುಗಳನ್ನೆಲ್ಲ ಕ್ಷುಕ ಅಂದರು.
ಅವತ್ತು ಸಂಸತ್ತಿನಲ್ಲಿ ನೆಹರು ದಿಗ್ವಿಜಯ ಸಾಧಿಸಿದರು. ಅದರ ಪರಿಣಾಮವನ್ನು ಅನುಭವಿಸಿದರು. ಯಾವ ನೆಹರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೈನ್ಯಕ್ಕಿಂತ ನಾಗರಿಕ ಧ್ವನಿಗೇ ಹೆಚ್ಚು ಪ್ರಾಶಸ್ತ್ಯವಿರಬೇಕು ಎಂದು ವಾದಿಸಿದ್ದರೋ, ಯಾವ ನೆಹರೂ ಜನರಲ್ ತಿಮ್ಮಯ್ಯನವರನ್ನು ಅವಮಾನಿಸಿ ಮೆನನ್ ತರಹದವರನ್ನು ಬೆಂಬಲಿಸಿ ಮಾತಾಡಿದ್ದರೋ, ಅದೇ ನೆಹರು 1962ರ ಯುದ್ಧದ ನಂತರ ತಾವು ಬೆಂಬಲಿಸಿದವರನ್ನೆಲ್ಲ ಅವರವರ ಹುದ್ದೆಗಳಿಂದ ಕೆಳಕ್ಕಿಳಿಸಬೇಕಾಗಿ ಸಾರ್ವಜನಿಕರೆದುರು ತಲೆ ತಗ್ಗಿಸಿ ನಿಲ್ಲಬೇಕಾಯಿತು. ಅವತ್ತು ಜನರಲ್ ತಿಮ್ಮಯ್ಯನವರನ್ನು ನಾನು ತಪ್ಪು ತಿಳಿದುಕೊಂಡಿದ್ದೆ ಎಂದು ಒಪ್ಪಿಕೊಳ್ಳಬೇಕಾಯಿತು. ಭಾರತದ ಗೌರವ ಮತ್ತು ಭದ್ರತೆಗಳನ್ನುಳಿಸಲು ಮತ್ತೆ ಅದೇ ಜನರಲ್ ತಿಮ್ಮಯ್ಯನವರ ಮುಂದೆ ಮಂಡಿಯೂರಿದ
ಬೇಕಾಯಿತು. ಆದರೆ ಬಹುದೊಡ್ಡ ಸಮಸ್ಯೆ ಎದುರಿಸುತ್ತಿದೆ ಕಾಲದಲ್ಲಿ ಭಾರತದಂತಹ ಒಂದು ದೇಶ
ತನ್ನ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರ ನಡುವಿನ ಸಾರ್ವಜನಿಕ ವಿವಾದವನ್ನು ಕಣ್ಣಾರೆ ನೋಡಬೇಕಾಗಿ ಬಂದದ್ದೊಂದು ದುರಂತ. ಚೀನದೆಡೆಗೆ ಭಾರತ ಸರ್ಕಾರ ತಳೆದಿದ್ದ ನಿಲುವಿನ ಬಗ್ಗೆಯೇ ಜನರಲ್ ತಿಮ್ಮಯ್ಯ ನ ವರೆಗೆ ಅಸಮಾಧಾನ ವಿತ್. ಆತ ನಿಜಕ್ಕೂ ಒಬ್ಬ ಅನುಭವಿ,ದೂರಗ್ರಾಹಿ ಯೋಧ. ದೊಡ್ಡ ಶಿಸ್ತಿನ ಸೇನಾಪತಿ. ಅವರಿಗೆ ಕೃಷ್ಣ ಮೆನನ್‌ರಂತಹ ವ್ಯಕ್ತಿಯಿಂದ ದೇಶಭಕ್ತಿಯ ಪಾಠ ಕಲಿಯಬೇಕಾಗಿರಲಿಲ್ಲ. ಅಂಥ ಜನರಲ್ ತಿಮ್ಮಯ್ಯ ಕ್ಷುಲ್ಲಕ ಕಾರಣಗಳಿಗಾಗಿ ತನ್ನ ದೇಶವನ್ನಾಳಿದ ಸರ್ಕಾರದೊಂದಿಗೆ ಜಗಳ ಮಾಡಿ ಕೊಳ್ಳುವುದು ಸಾಧ್ಯವಾಗಿರಲಿಲ್ಲ. ನಾಳೆ ಸಂಭವಿಸಬಹುದಾದ ಬಹುದೊಡ್ಡ ದುರಂತ ಜನರಲ್ ತಿಮ್ಮಯ್ಯನವರ ನ್ನು ಆತಂಕಕ್ಕೀಡು ಮಾಡಿತ್ತು. ಇಲ್ಲದಿದ್ದರೆ ಅವರು ರಾಜೀನಾಮೆ ಯಂತಹ ಅತ್ಯುಗ್ರ ಕ್ರಮಕ್ಕೆ ಕೈ ಹಾಕುತ್ತಿರಲಿಲ್ಲ ಮತ್ತು ಪ್ರಧಾನಿಯಂಥ ವ್ಯಕ್ತಿ ಕೈ ಹಿಡಿದು ಕೇಳಿ ಕೊಂಡಾಗ ಒಬ್ಬ ಶುದ್ಧ ಯೋಧನಂತೆ ರಾಜೀನಾಮೆ ವಾಪಸು ತೆಗೆದುಕೊಳ್ಳುತ್ತಿರಲಿಲ್ಲ. ಜನರಲ್ ತಿಮ್ಮಯ್ಯ ಎಷ್ಟು ದೊಡ್ಡ ಸಾಹಸಿ ಯೋಧರಾಗಿದ್ದರೂ, ಅಂತರಂಗದಲ್ಲಿ ಅಷ್ಟೇ ಸಂಕೋಚದ ಮನುಷ್ಟರಾಗಿದ್ದರು. ಯಾವತ್ತೂ ಪತ್ರಿಕೆಗಳ ಬಾಯಿಗೆ ಸಿಕ್ಕ ವರಲ್ಲ. ಪ್ರಚಾರ ಬಯಸಿದವರಲ್ಲ. ಬಹಿರಂಗವಾಗಿ ಏನನ್ನೂ ಮಾತಾಡಿದವರಲ್ಲ. 1960 ರ ಜೂನ್ ತಿಂಗಳಲ್ಲಿ ಮಾತ್ರ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ಕರೆದಿದ್ದರು. `ಚೀನಾ ಸೈನ್ಯ ಭಾರತದ NEFA ಗಡಿಯಲ್ಲಿ ಒಂದೇ ಸಮನೆ ಜಮೆಯಾಗುತ್ತಿದೆ. ನನ್ನ ನಿಜವಾದ ಧಾವಂತವೇ ಅದು. ಅವರು ರಸ್ತೆ ಹಾಕಿಕೊಂಡಿದ್ದಾರೆ. ಟೆಲಿಫೋನ್ ವ್ಯವಸ್ಥೆಯಾಗಿದ್ದು ನಾವಿನ್ನೂ ತುಂಬ ಹಿಂದಿದ್ದೇವೆ. ಗಡಿಗಳ ತನಕ ತಲುಪುವುದೇ ಕಷ್ಟ. ಹಿಮಾಲಯದ ಪರ್ವತಗಳಲ್ಲಿ ನಿಸರ್ಗ ಬಹಳ ಕ್ರೂರಿ. ನನ್ನ ಧಾವಂತವೇ ಅದು!" ಅಂದಿದ್ದರು.
ಅವರ ಧಾವಂತವನ್ನು ಮೆನನ್ ಮಹಾಶಯ ಎಡಗೈಯಲ್ಲಿ ತಳ್ಳಿ ಹಾಕಿದ್ದರು. ಚೀನಾ ಸೇನಾ ತನ್ನ ಗಡಿಯಲ್ಲಿ ಜಮೆಗೊಂಡರೆ ನಮಗೇಕೆ ಧಾವಂತವಾಗಬೇಕು? ಅಂದುಕೊಂಡು ಬಿಟ್ಟಿದ್ದರು. ನೆಹರೂರಂತಹ ಮುಗಿಲೆತ್ತರದ ವ್ಯಕ್ತಿ, ತಮ್ಮ ಗೆಳೆಯ ಮೆನನ್ ರನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು. ಭಾರತ ಕಂಡ ಬಹುದೊಡ್ಡ ಯೋಧರಲ್ಲಿ ಜನರಲ್ ತಿಮ್ಮಯ್ಯ ಒಬ್ಬರು. ಅವರಲ್ಲಿ ಯೋಗ್ಯತೆಯೊಂದೇ ಅಲ್ಲ; ಸೇನೆಯ ಕಟ್ಟಕಡೆಯ ಯೋಧನಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಯ ತನಕ ಎಲ್ಲರಿಂದಲೂ ಪ್ರೀತಿ ಮತ್ತು ಗೌರವಗಳನ್ನು ಪಡೆಯುವಂತಹ ಅಪರೂಪದ
ಗುಣಗಳಿದ್ದವು. ಎರಡನೇ ಪ್ರಪಂಚ ಯುದ್ದದಲ್ಲಿ ಅಕ್ಷರಶಃ ಯುದ್ಧ ಭೂಮಿಯಲ್ಲಿ ಫೀಲ್ಡ್ ಕಮಾಂಡರ್ ಆಗಿ ಭಾಗವಹಿಸಿದ ಮೊದಲನೆಯ ಮತ್ತು ಏಕೈಕ ಭಾರತೀಯ ಅಧಿಕಾರಿ ಆತ. ಆ ಯುದ್ಧ ದಲ್ಲಿ ಜನರಲ್ ತಿಮ್ಮಯ್ಯ ತೊರ್ಪಡಿಸಿದಳು ಸಾಹಸ ವನ್ನು ಇಡೀ ಬ್ರಿಟಿಷ್ ಸೇನೆ ಕೊಂಡಾಡಿತ್ತು. ಬಿರುದು ನೀಡಿ ಗೌರವಿಸಿ ತ್ತು. ಒಬ್ಬ ದಕ್ಷಿಣ ಭಾರತೀಯ ಅಧಿಕಾರಿಯನ್ನು ಗೌರವಿಸಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣವಿದ್ದ ಭಾರತೀಯ ಸೈನ್ಯದಲ್ಲಿ, ಉತ್ತರ ಭಾರತದ ಸಮಸ್ತ ಸೈನಿಕರು ಜನರಲ್ ತಿಮ್ಮಯ್ಯನವರ ಹಿರಿತನ, ಯಾಜಮಾನ್ಯ ಮತ್ತು ನೇತೃತ್ವವನ್ನು ಅಂತರಾಳದಿಂದ ಒಪ್ಪಿಕೊಂಡಿದ್ದು. 1947ರ ದೇಶ ವಿಭಜನೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಎಲ್ಲರೂ ತಮ್ಮ ಸಮಚಿತ್ತ ಕಳೆದುಕೊಂಡು ಕಂಗಾಲಾಗಿದ್ದಾಗ ಸೈನ್ಯದಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಯೋಧರೆಲ್ಲರನ್ನೂ ಒಂದೇ ನೇರಕ್ಕೆ ನೋಡಿ, ಅವರನ್ನು ಪ್ರೀತಿಸಿ ಅವರಿಂದಲೇ ಭಾರತದ ರಕ್ಷಣೆ ಮಾಡಿದ ದಕ್ಷತೆ ಜನರಲ್ ತಿಮ್ಮಯ್ಯನವರದಾಗಿತ್ತು.
ಜನರಲ್ ತಿಮ್ಮಯ್ಯ ಎಂದಿಗೂ ತಮ್ಮ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡವರಲ್ಲ. 1948ರಲ್ಲಿ ಕಾಶ್ಮೀರದ ಕೊಳ್ಳಕ್ಕೆ ಬೆಂಕಿ ಬಿದ್ದಾಗ, ಸೈನ್ಯದ ನೇತೃತ್ವವನ್ನು ವಹಿಸಿಕೊಂಡ ಜನರಲ್ ತಿಮ್ಮಯ್ಯ ಅ ತನಕ ಯಾರೋ ಕಾಲಿಡದಿದ್ದ ಮಂಜು ಪರ್ವತಗಳಲ್ಲಿ ಖುದ್ದಾಗಿ ನಿಂತು ಪಾಕಿಸ್ತಾನಿ ಸೈನ್ಯದೊಂದಿಗೆ ಬಡಿದಾಡಿ ದಿಗ್ವಿಜಯಗಳನ್ನು ಸಾಧಿಸಿದ ಸೇನಾನಿ. ಅವತ್ತು ಸಂಪೂರ್ಣವಾದ ಸ್ವಾತಂತ್ರ್ಯವನ್ನು ಜನರಲ್ ತಿಮ್ಮಯ್ಯ ನವರಿಗೆ ಕೊಟ್ಟಿದ್ದೇ ಆಗಿದ್ದರೆ, 'ಪಾಕ್ ಆಕ್ರಮಿತ ಕಾಶ್ಮೀರ ಎಂಬ ಭೂಭಾಗವನ್ನು ಅನಾಮತ್ತಾಗಿ ಜಯಿಸಿ ಭಾರತದ ನಕ್ಷೆ ಸೇರಿಸಿ ಬಿಡುತ್ತಿದ್ದರೂ ಆತ. ಆ ದಿನಗಳಲ್ಲಿ ಪಾಕಿಸ್ತಾನಿ ಅಬ್ಬರವನ್ನು ಲೀಲಾಜಾಲವಾಗಿ ಬಗ್ಗುಬಡಿದಿದ್ದರು ಜನರಲ್ ತಿಮ್ಮಯ್ಯ, ಇನ್ನೇನು 'ಪಾಕ್ ಆಕ್ರಮಿತ ಕಾಶ್ಮೀರ' ಭಾರತದ ಕೈವಶವಾಗುವುದರಲ್ಲಿತ್ತು. ಪ್ರಧಾನಿ ನೆಹರೂ "ಯುದ್ಧ ಸಾಕು" ಅಂದುಬಿಟ್ಟಿದ್ದರು.
ಜನರ ಹಿಮ್ಮಯ್ಯ ಯಾವತ್ತೂ ಯುದ್ದ ಭೂಮಿಯಿಂದ ದೂರ ಉಳಿದ ಯೋಧರಲ್ಲ. ರಾಜಕಾರಣಿಗಳ ಮುಂದೆ ಕೈ ಕಟ್ಟಿ ನಿಂತ, ನನಗೊಂದು ತಣ್ಣಗಿನ ಜಾಗದಲ್ಲಿ ಕೆಲವು ವರ್ಷಗಳ ಕಾಲ ನೆಮ್ಮದಿಯಾಗಿರಲು ಅವಕಾಶ ಕೊಡಿ ಎಂದು ಕೇಳಿದವರಲ್ಲ. ಇಪ್ಪತ್ತೈದು ವರ್ಷ ಸುದೀರ್ಘ ಸೇವೆಯಲ್ಲಿ ಒಬ್ಬೇ ಒಬ್ಬ ಸೈನಿಕ ಜನರಲ್ ತಿಮ್ಮಯ್ಯನವರ ವಿರುದ್ಧ ಮಾತಾಡಿದ್ದನ್ನು ನಾನು ಕೇಳಿಸಿಕೊಂಡಿಲ್ಲ. 1953-54 ರಲ್ಲಿ ಕೊರಿಯಾ ಯುದ್ಧ ನಡೆದಾಗ ಅಂತಾರಾಷ್ಟ್ರೀಯ ಆಯೋಗದ ಕರೆಯ ಮೇಲೆ ಕೊರಿಯಾಗೆ ತೆರಳಿದ ಜನರಲ್ ತಿಮ್ಮಯ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಥ ದೊಡ್ಡ
ಹೆಸರು ಮಾಡಿದರೆಂದರೆ, ನೆಹರುಗೆ ಜನಪ್ರಿಯತೆಯ ವಿಷಯದಲ್ಲಿ ತನಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡು ಬಿಟ್ಟನೇ ಎಂದು ಧಾವಂತವಾಗಿತ್ತು. ಭಾರತದಲ್ಲಿ ನೆಹರೂಜಿ ಎಷ್ಟೇ ಖ್ಯಾತಿವೆತ್ತ ನಾಯಕನೆನಿಸಿಕೊಂಡಿದ್ದರೂ, ಜನರಲ್ ತಿಮ್ಮಯ್ಯನವರನ್ನು ಗದರುವ, ಸುಮ್ಮನಿರಿಸುವ,
ಎದುರಾ ಎದುರು ನಿಂತು ದಂಡಿಸುವ ಚೈತನ್ಯ ಅವರಲ್ಲಿರಲಿಲ್ಲ. ಮುಂದೆ ಹಾಗೆ ನೆಹರೂರವರ
ಸ್ಟೇಚ್ಛೆಗಳಿಗೆ, ಹುಚ್ಚಾಟಗಳಿಗೆ ಮಣಿಯುವ ಅನೇಕ ಜನರಲ್‌ಗಳು ಬಂದದ್ದು ನಿಜ. ಆದರೆ
ಜನರಲ್ ತಿಮ್ಮಯ್ಯ ಹಾಗೆಲ್ಲ ತಲೆಬಾಗುವ ಸೇನಾನಿಯಾಗಿರಲೇ ಇಲ್ಲ. ಭಾರತ ಸೇನಾ ಮುಖ್ಯಸ್ಥ ರಾಗುವ ಕೆಲವು ವರ್ಷಗಳಿಗೆ ಮುನ್ನ ನಮ್ಮ ರಾಜಕಾರಣಿಗಳು ಮತ್ತು ಅವರ ಆಜ್ಞಾಧೀನ ಸೈನ್ಯಾಧಿಕಾರಿಗಳು ಜನರಲ್ ತಿಮ್ಮಯ್ಯನವರ ನ್ನು
ಉದ್ದೇಶಪೂರ್ವಕವಾಗಿ ಮೂಲೆಗೊತ್ತರಿಸಿದ್ದರು. ಆಗ ಇಡೀ ಸೇನೆ ಚಡಪಡಿಸಿ, ಹೋಗಿತ್ತು, ಒಂದಲ್ಲ ಒಂದು ದಿನ ನಮ್ಮ ಚಿಮ್ಮಿ' ಸೇನೆಯ ಚುಕ್ಕಾಣಿ ಹಿಡಿದು ಹಿಡಿಯುತ್ತಾರೆ. ಸೇವೆಗೆಂದು ಗೌರವ ತಂದುಕೊಡುತ್ತಾರೆ. ಅವರಲ್ಲದೆ ಮತ್ಯಾರೂ ಭಾರತೀಯ ಸೇವೆಯನ್ನು ಸರಿಪಡಿಸಲಾರರು ಎಂದು ಪ್ರತಿಯೊಬ್ಬ ಅಧಿಕಾರಿಯೂ ಮಾತಾಡಿಕೊಳ್ಳುತ್ತಿದ್ದ. 1957 ರ ಮಾರ್ಚ್ ತಿಂಗಳಲ್ಲಿ ಜನರಲ್ ತಿಮ್ಮಯ್ಯ ಆರ್ಮಿ ಚೀಫ್ ಆಗಿ ಅಧಿಕಾರ ಸ್ವೀಕರಿಸಿದಾಗ ಇಡೀ ಭಾರತೀಯ ಸೈನ್ಯ ರೋಮಾಂಚನಕ್ಕೊಳಗಾಗಿತ್ತು. " ನಮ್ಮ ಟಿಮ್ಮಿ ಅಧಿಕಾರಕ್ಕೆ ಬಂದರು" ಎಂದು ಪ್ರತಿಯೊಬ್ಬ ಸೈನಿಕನೂ ಆನಂದದಿಂದ ಉದ್ಗರಿಸಿದ್ದರು. ಅವರನ್ನು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದುದೇ ಟಿಮ್ಮಿ ಅಂತ.
ಅಂಥ ಹಿರಿಯರೊಂದಿಗೆ ಮಿಲಿಟರಿ ಅಪರೇಷನ್ ಡೈರಕ್ಟೋರೇಟ್‌ನಲ್ಲಿ ವರ್ಷಗಟ್ಟಲೆ ದುಡಿಯುವ ಅವಕಾಶ ದೊರತದ್ದು ನನ್ನ ಬದುಕಿನ ಭಾಗ್ಯವೆಂದೇ ಇವತ್ತಿಗೂ ಭಾವಿಸುತ್ತೇನೆ. ಯಾವ ಉತ್ಸಾಹದಿಂದ ಅವರು ಭಾರತೀಯ ಸೇನೆಯನ್ನು ಸರಿಪಡಿಸುವ, ಅದಕ್ಕಾದ ಹಾನಿಯನ್ನು ವಾಸಿಮಾಡುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದರೆಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಂತೆಯೇ ಜನರಲ್ ತಿಮ್ಮಯ್ಯನವರ ಉತ್ಸಾಹ ಹೀಗೆ ನಮ್ಮ ಹೀನಾ ರಾಜಕಾರಣಿಗಳಿಂದಾಗಿ ದಿನೇ ದಿನೇ ನವೆದು ಹೋಯಿತು ಎಂಬುದನ್ನೂ ನೋಡಿದ್ದೇನೆ. ಮುಖ್ಯವಾಗಿ ನಮ್ಮ ರಕ್ಷಣಾ ಸಚಿವ ಮೆನನ್, ಜನರಲ್ ತಿಮ್ಮಯ್ಯನವರ ಉತ್ಸಾಹವನ್ನು ಕೊಂದು ಹಾಕಿದರು. ದೊಡ್ಡ ನಿರಾಸೆಯೊಂದಿಗೆ, ದುಃಖಿತರಾಗಿ ಜನರಲ್ ತಿಮ್ಮಯ್ಯ ನಿವೃತ್ತರಾದರು. ಭಾರತ ಸರ್ಕಾರಕ್ಕೆ ಚೀನದ ವಿಷಯದಲ್ಲಿ ಬುದ್ದಿ ಹೇಳಲಾಗಲಿಲ್ಲ. ಕಡೇ ಪಕ್ಷ ನಮ್ಮ ಸೈನ್ಯವನ್ನು ಒಂದು ಮಹಾಯುದ್ಧಕ್ಕೆ ಅಣಿ ಮಾಡಿ ಹೋಗಲಾಗುತ್ತಿಲ್ಲ ಎಂಬ ಬಾಧೆ ಜನರಲ್ ತಿಮ್ಮಯ್ಯನವರನ್ನು ತೀವ್ರವಾಗಿ ಕಾಡಿತ್ತು. " ನಿಮ್ಮನ್ನು ಚೀನಾದ ಫಿರಂಗಿಗಳಿಗೆ ಆಹಾರವಾಗಿ ಬಿಟ್ಟು ಹೋಗುತ್ತಿಲ್ಲವೆಂದು ನಂಬಿಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ” ಎಂಬ ಕೊನೆಯ ವಾಕ್ಯದೊಂದಿಗೆ ಜನರಲ್ ತಿಮ್ಮಯ್ಯ ತಮ್ಮ ನಿವೃತ್ತಿ ಭಾಷಣ ಮುಗಿಸಿದ್ದರು.
ತಮ್ಮ ಅಸಮಾಧಾನವನ್ನು ನಮ್ಮ ದೇಶದ ಹೀನ ರಾಜಕಾರಣಿಗಳಿಗೆ ಅರಿವು ಮಾಡಿಕೊಡಲಿಕ್ಕೆ ಹಿರಿಯ ಸೈನ್ಯಾಧಿಕಾರಿಗಳಿಗೆ ಇರುವ ಒಂದೇ ಒಂದು ಅವಕಾಶವೆಂದರೆ ರಾಜಿನಾಮೆ ಬಿಸಾಡುವುದು.
ಅದೇ ಕೆಲಸವನ್ನು ಮಾಡಿದ್ದರು ಜನರಲ್ ತಿಮ್ಮಯ್ಯ. ತುಂಬಿದ ಸಂಸತ್ತಿನಲ್ಲಿ ಪ್ರಧಾನಿ ನೆಹರೂ ತಮ್ಮನ್ನು ಅವಮಾನಿಸುತ್ತಿದ್ದಾಗ ಒಬ್ಬ ಶುದ್ಧ ಸೈನಿಕರಂತೆ ದೃಢವಾಗಿ ನಿಂತು ಎಲ್ಲವನ್ನೂ ಸಹಿಸಿಕೊಂಡರು. ಆದರೆ, ಆ ಘಟನೆಯಾದ ನಂತರ ಅವರು ಮೊದಲಿನ 'ಜನರಲ್ ತಿಮ್ಮ' ಆಗಿ ಉಳಿಯಲಿಲ್ಲ. ಅವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ತಮ್ಮ ಕೈ ಕೆಳಗಿನ ಅಧಿಕಾರಿಗಳ ಮೇಲೆ ಮೊದಲಿದ್ದ ಹಿಡಿತ ಕಳೆದುಕೊಳ್ಳಬೇಕಾಯಿತು. ಜನರಲ್ ಟಿಮ್ಮಿ ತಮ್ಮ ರಾಜಿನಾಮೆಯನ್ನು ಹಿಂತೆಗೆದುಕೊಂಡಿದ್ದೇ ಅನೇಕರ ಅಸಮಾಧಾನಕ್ಕೆ ಕಾರಣವಾಗಿತ್ತು. ನೆಹರೂ ಸರ್ಕಾರಕ್ಕೆ ಮತ್ತು ರಕ್ಷಣಾ ಸಚಿವ ಮೆನನ್‌ಗೆ ಬುದ್ದಿ ಕಲಿಸುವ ತಾಕತ್ತಿದ್ದುದೇ ಒಬ್ಬ ಜನರಲ್ ತಿಮ್ಮಯ್ಯನವರಿಗೆ. ಅವರ ರಾಜಿನಾಮೆ ಬಿಸಾಡಿ ಎದ್ದು ಹೋಗಿದ್ದಿದ್ದರೆ, ಕಡೇ ಪಕ್ಷ ದೇಶದ ಗಮನ ನಮ್ಮ ಸೈನ್ಯದೆಡೆಗೆ, ಅದರ ಕೊರತೆಗಳ ಕಡೆಗೆ ಹರಿಯುತ್ತಿತ್ತು. ಚರ್ಚೆಗಳಾಗುತ್ತಿದ್ದವು. ಮೆನನ್‌ಗೆ
ಛೀಮಾರಿಯಾಗುತ್ತಿತ್ತು. ಕಡೇ ಸುತ್ತಿನಲ್ಲಿ ಜನರಲ್ ತಿಮ್ಮಯ್ಯ ಅವರನ್ನು (ಆ ಮೂಲಕ ಇಡೀ
ಸೇನೆಯನ್ನು) ಪ್ರಧಾನಿ ನೆಹರು ಆ ಪರಿ ಅವಮಾನಿಸಿದಾಗಲಾದರೂ ಜನರಲ್ ಟಿಮ್ಮಿ ಎರಡನೇ ಸಲ ರಾಜಿನಾಮೆ ನೀಡಬಹುದಿತ್ತು. ಅಕಸ್ಮಾತ್ ರಾಜಿನಾಮೆ ನೀಡಿದ್ದೇ ಆಗಿದಿದ್ದರೆ, ನಂತರದ ದಿನಗಳಲ್ಲಿ ಕೃಷ್ಣ ಮೆನನ್ ಎಷ್ಟು ಹಠಮಾರಿ ನಾಯಕನಾಗಿ ಬೆಳೆಯುತ್ತಿರಲಿಲ್ಲ. ಅಷ್ಟೊಂದು
ಪ್ರಾಮುಖ್ಯತೆ ಪಡೆಯುತ್ತಿರಲಿಲ್ಲ. ಕಡೇ ಪಕ್ಷ ಅವರು ಸೈನ್ಯದ ಆಂತರಿಕ ವಿಷಯಗಳಲ್ಲಿ ತಲೆ ಹಾಕುತ್ತಿರಲಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷದವರು, ಕಾಂಗ್ರೆಸ್ಸಿನಲ್ಲೇ ಮೆನನ್‌ರನ್ನು ಶತಾಯಗತಾಯ ಹಣಿದುಹಾಕುತ್ತಿದ್ದರು. ಅವರಿಗೆ ಜನರಲ್ ತಿಮ್ಮಯ್ಯನವರ ಎರಡನೇ
ರಾಜೀನಾಮೆ, ದೊಡ್ಡದೊಂದು ಅವಕಾಶ ಒದಗಿಸಿಬಿಡಬಹುದಾಗಿತ್ತು. ಆದರೆ ಟಿಮ್ಮಿ ರಾಜೀನಾಮೆ ನೀಡಲಿಲ್ಲ..!!!
ಯಾಕೆ ಗೊತ್ತೇ?
ಸೈನಿಕ ಜೀವನದೂದ್ದಕ್ಕೂ ತಾವು ಪ್ರೀತಿಸಿದ ಕುಮಾವೋ ರೆಜಿಮೆಂಟ್ ಸದ್ಯದಲ್ಲೇ ತನ್ನ ಶತಮಾನೋತ್ಸವ ಆಚರಿಸಿಕೊಳ್ಳಲಿತ್ತು. ಸೇನಾ ಮುಖ್ಯಸ್ಥರಾಗಿ ಆ ಸಮಾರಂಭ ಅಧ್ಯಕ್ಷತೆ ವಹಿಸಿ, ಸಮಾರಂಭವನ್ನು ಕಣ್ಣಾರೆ ಕಂಡೂ ಆನಂತರ ನಿವೃತ್ತರಾಗಬೇಕೆಂಬ ಶುದ್ದ ಸೈನಿಕ ಆಸೆ ಜನರಲ್ ತಿಮ್ಮಯ್ಯನವರದಾಗಿತ್ತು. ಎಂತಹ ವಿಪರ್ಯಾಸವಲ್ಲವೇ..? ಅಂತ ಧೀರ ಸೇನಾನಿಯನ್ನು ಮತ್ತೆ ನೋಡಲೇ ಇಲ್ಲ. ಆದರೆ ಜನರಲ್ ತಿಮ್ಮಯ್ಯನವರ ಒಂದು ಧೀರೋದಾತ್ತ ಸೈನಿಕ ಜೀವನ ಅಷ್ಟು ವಿಷಾದನೀಯವಾಗಿ ಮುಗಿದುಹೋಗಿತ್ತು.
ಜನರಲ್ ತಿಮ್ಮಯ್ಯನವರ ನಿವೃತ್ತಿಯ ನಂತರ ನೆಹರೂರನ್ನು ಧಿಕ್ಕರಿಸುವವರೇ ಇಲ್ಲದಾಯ್ತು. ಕೃಷ್ಣ ಮೆನನ್‌ರ ತಾಳಕ್ಕೆ ತಕ್ಕಂತೆ ಕುಣಿಯುವ ಸೇನಾಧಿಕಾರಿಗಳು ಹುಟ್ಟಿಕೊಂಡರು. ಅವರು ಹೇಳಿದ್ದು ವೇದವಾಕ್ಯ ವಾಯಿತು. ದಿನೇ ದಿನೇ ಸೈನ್ಯ ತನ್ನ ಶಿಸ್ತು ಕಳೆದುಕೊಂಡಿತು. ಅದಕ್ಕೆ ಪಾಠ ಹೇಳಲು ಅಂತಿಮವಾಗಿ 1962ರಲ್ಲಿ ಚೀನವೇ ದಂಡೆತ್ತಿ ಬರಬೇಕಾಯಿತು.
ನೆಹರೂ ಸರ್ಕಾರ ಜನರಲ್ ತಿಮ್ಮಯ್ಯನವರನ್ನು ನಡೆಸಿಕೊಂಡಷ್ಟು ಕೆಟ್ಟದಾಗಿ ಮತ್ಯಾರನ್ನೂ
ನಡೆಸಿಕೊಂಡಿರಲಿಕ್ಕಿಲ್ಲ. ನಿವೃತ್ತಿಯ ನಂತರ ಅಷ್ಟು ದೊಡ್ಡ ಯೋಧ ಜನರಲ್ ತಿಮ್ಮಯ್ಯ ಅನಾಮಧೇಯರಾಗಿ ಹೋದರು. ಅವರಿಗಿಂತ ನಿಕೃಷ್ಟ ಸೇನಾಧಿಕಾರಿಗಳಿಗೆ ನಿವೃತ್ತಿಯ ನಂತರ ಗವರ್ನರ್ ಹುದ್ದೆಗಳನ್ನು, ರಾಯಭಾರಿ ಹುದ್ದೆಗಳನ್ನು ಕೊಡ ಮಾಡಿದ ಪ್ರಧಾನಿ ನೆಹರೂ. ಜನರಲ್ ತಿಮ್ಮಯ್ಯನವರ ನ್ನು ಬರಿಗೈಲಿ ಮನೆಗೆ ಕಳಿಸಿದರು. ಅದನ್ನು ಯಾವ ಪತ್ರಕರ್ತನೂ ಪ್ರಶ್ನಿಸಲಿಲ್ಲ. ಕಡೆಗೆ ದಕ್ಷಿಣ ಭಾರತ ಕಾಫಿ ಮಂಡಳಿ (South Indian Coffee Board) ಜನರಲ್ ತಿಮ್ಮಯ್ಯ ನವರಿಗೊಂದು ಗೌರವಯುತ ಸ್ಥಾನ ನೀಡಿ ಅನಾಮಧೇಯ ಸಾವಿನಿಂದ
ರಕ್ಷಿಸಿತು. ಆದರೆ ಜನರಲ್ ತಿಮ್ಮಯ್ಯನವರನ್ನು ನಿಜಕ್ಕೂ ಗುರುತಿಸಿ ಗೌರವಿಸಿದ್ದರು ಸಂಯುಕ್ತ ರಾಷ್ಟ್ರ ಸಂಸ್ಥೆ! ಕೊನೆಯ ದಿನಗಳಲ್ಲಿ ಅವರನ್ನು ಸೈಪ್ರಸ್ ಯುದ್ಧ ಭೂಮಿಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಿಸಿ ಕಲಿಸಿತು. ಮಹಾ ಯೋಧ ಜನರಲ್ ತಿಮ್ಮಯ್ಯ ಮೈ ತುಂಬ ಮಿಲಿಟರಿ ಪೋಷಾಕು ಧರಿಸಿಕೊಂಡು 1965ರ ಡಿಸೆಂಬರ್‌ನಲ್ಲಿ ಸೈಪ್ರಸ್ ಯುದ್ಧಭೂಮಿಯಲ್ಲಿ ಒಬ್ಬ ಶುದ್ಧ ಯೋಧನಂತೆಯೇ ತೀರಿಕೊಂಡರು. ಅವರ ಸಾವು ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಯಾಯಿತು. ಅವರಿಗೆ ಅಂತಾರಾಷ್ಟ್ರೀಯ ಗೌರವ ದೊರಕಿತು. ಕೃತಘ್ನ ಭಾರತ ಸರ್ಕಾರ ಎಂದೂ ಆ ಶ್ರೇಷ್ಠ ಜೀವಿಯನ್ನು ಗೌರವಿಸಲಿಲ್ಲ, ಸರಿಯಾಗಿ ನಡೆಸಿಕೊಳ್ಳಲಿಲ್ಲ.
ಅದಕ್ಕಿಂತ ದೊಡ್ಡ ಅನಾಹುತವೆಂದರೆ ಪ್ರಧಾನಿ ನೆಹರು 1959 ರ ಜುಲೈ ತಿಂಗಳಲ್ಲಿ ಮೇಜರ್ ಜನರಲ್ ಬಿ. ಎಂ. ಕೌಲ್ ಎಂಬ ಅಧಿಕಾರಿಗೆ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ನೀಡಿ, ಭಾರತೀಯ ಸೈನ್ಯದ ಕ್ವಾರ್ಟರ್ ಮಾಸ್ಟರ್ ಜನರಲ್ ಎಂಬ ಹುದ್ದೆಗೆ ನೇಮಿಸಿ ದಿಲ್ಲಿಗೆ
ಕರೆಸಿಕೊಂಡರು. ಅಲ್ಲಿಗೆ ದುರಂತ ನಾಟಕದ ಮೊದಲ ಅಧ್ಯಾಯ ಆರಂಭವಾದಂತಾಯಿತು.
ಮೇಜರ್ ಜನರಲ್ ಬಿ.ಎಂ. ಕೌಲ್‌ರ ಬಡ್ತಿ ಮತ್ತು ಅವರನ್ನು ದಿಲ್ಲಿಗೆ ಕರೆತರುವ ನಿರ್ಣಯವನ್ನು ಜನರಲ್ ತಿಮ್ಮಯ್ಯ ಶತಾಯಗತಾಯ ವಿರೋಧಿಸಿದ್ದರು. ಆದರೆ ನೆಹರು ಮೇಲೆ ಒತ್ತಡ ಹೇರಿ ಕೃಷ್ಣ ಮೆನನ್ ಈ ಕೆಲಸ ಮಾಡಿಸಿದ್ದರು. ಬಿ.ಎಂ. ಕೌಲ್‌ರಿಗೆ ಕೃಷ್ಣ
ಮೆನನ್‌ರ ಬೆಂಬಲವಿದೆಯಂತೆ ಮತ್ತು ನೆಹರೂ ಅವರ ಛೇಂಬರಿಗೆ ನೇರ ಪ್ರವೇಶ ದೊರೆಯುತ್ತದಂತೆ ಎಂಬ ವಾರ್ತ ಹರಡಿದ ಕ್ಷಣದಿಂದಲೇ ಸೈನ್ಯದೊಳಕ್ಕೆ ರಾಜಕಾರಣ, ಅಶಿಸ್ತು ಮತ್ತು ನೈತಿಕ ಅಧಃ
ಪತನಗಳ ಅನಿಷ್ಟ ಕಾಲಿಟ್ಟಿತು. ಇಂತಹ ಆತಂಕದ ದಿನಗಳಲ್ಲಿ ನಾನು 1954 ರಿಂದ 1959 ರ ತನಕ ಆರ್ಮಿ ಹೆಡ್ ಕ್ವಾರ್ಟಸ್ ರಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಅಲ್ಲಿ ನಡೆದುದೆಲ್ಲವನ್ನೂ ಕಣ್ಣಾರೆ ನೋಡಿದೆ. ಆದ್ದರಿಂದಲೇ
1962ರಲ್ಲಿ ನನ್ನನ್ನು ತವಾಂಗ್ ಯುದ್ಧ ಭೂಮಿಗೆ ಬ್ರಿಗೇಡಿಯರ್‌ನನ್ನಾಗಿ ನೇಮಿಸಿ ಕಳಿಸಿದಾಗ ಈ ದೇಶದ ಭವಿತವ್ಯ ಎಂಥದಿದೆಯೋ ಎಂದು ನಾನು ಕಳವಳಗೊಂಡದ್ದು.
#ಅಮರ್_ರಹೇ_ಜನರಲ್_ತಿಮ್ಮಯ್ಯ_ಜೀ
ಜೈ ಹಿಂದ್ 🇮🇳
- Suki Shetty



Comments