ಓಂ ಪ್ರಕಾಶ್ ಯಾದವ್ ವಿಶ್ವಕ್ಕೆ ಸ್ಪೂರ್ತಿದಾಯಗುವ ಬಾಲಕ..😍🙏
#ಓಂ_ಪ್ರಕಾಶ್_ಯಾದವ್ 🧡
ಏಳನೇ ತರಗತಿಯಲ್ಲಿ ಓದುತ್ತಿದ್ದ ಉತ್ತರಪ್ರದೇಶದ ರೈತನ ಮಗ. ವ್ಯಾನ್ ವೊಂದಕ್ಕೆ ಬೆಂಕಿ ಬಿದ್ದಾಗ ಮಕ್ಕಳನ್ನು ರಕ್ಷಿಸಿ ಸಂಜಯ ಚೋಪ್ರ ಅವಾರ್ಡ ಗೆದ್ದರು. ಮತ್ತು 2011ರಲ್ಲಿ ರಾಷ್ಟ್ರದ ಧೈರ್ಯಶಾಲಿ ಪ್ರಶಸ್ತಿ ಗೆದ್ದ ಹುಡುಗ..😍🙏
ಅಂದು ಸೆಪ್ಟಂಬರ್ 11, 2010. ತನ್ನ ಸ್ನೇಹಿತರ ಜೊತೆ ಮಾರುತಿ ಕಾರ್ ನಲ್ಲಿ ಶಾಲೆಗೆ ಹೋಗುತ್ತಿದ್ದ. ಆದರೆ ಆಕಸ್ಮಿಕವಾಗಿ ಮಾರುತಿ ಕಾರಿಗೆ ಬೆಂಕಿ ಹೊತ್ತಿತು. ಕಾರಣವಿಷ್ಟೆ ಗ್ಯಾಸ್'ಕಿಟ್ ನಲ್ಲಿನ ಶಾರ್ಟಸರ್ಕ್ಯೂಟ್ !!! ತಕ್ಷಣ ಮಾರುತಿ ಕಾರಿನ ಡೋರ್ ತೆಗೆದು ಚಾಲಕ ಪಲಾಯನ ಗೈದ. ಆದರೆ ಯಾದವ್ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಬಳಿಯಿದ್ದ ಡೋರ್ ಮುರಿದ,ಬಾಗಿಲು ತೆರೆದ, ತನ್ನ ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಎಳೆದು ಹಾಕಿ, ಯಾದವ್ ಆ ಹೊತ್ತಿನಲ್ಲಿ ತನ್ನ ಎಂಟು ಜನ ಸಹಪಾಠಿಗಳನ್ನು ರಕ್ಷಿಸಿದ್ದ. ಆಗಲೆ ಬೆಂಕಿ ಅವನ ಮುಖ ಬೆನ್ನು ತೋಳುಗಳನ್ನು ಬೇಯಿಸಿಬಿಟ್ಟಿತು. ಅಷ್ಟಾಗಿಯೂ ಅವನ ಮುಖದಲ್ಲಿ ಭಯ ಕಾಣುತ್ತಿರಲಿಲ್ಲ.ಬದಲಾಗಿ ಅವನ ಮುಖದ ಸುಟ್ಟಗಾಯಗಳು ನೋಡಿದವರನ್ನು ಭಯಬೀಳಿಸುತ್ತಿತ್ತು. ಅವನ ಆತ್ಮಸ್ಥೈರ್ಯ ಒಂದಿಂಚು ಕುಸಿದಿರಲಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ವರ್ಷ ಶಾಲೆಯಿಂದ ದೂರ ಕೂಡ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು..😔
ಸಂದರ್ಶಕನೊಬ್ಬ ಘಟನೆಯ ಬಗ್ಗೆ ಕೇಳಿದ್ದಕ್ಕೆ ಹೀಗೆ ಹೇಳಿದ "ನನಗೆ ನನ್ನ ಮೈ ಸುಟ್ಟುಹೋದ ಅನುಭವ ಆಗುತ್ತಿತ್ತು ಆದರೆ ಆಗಲೇ ನನಗೆ ನನ್ನ ಸ್ನೇಹಿತರ ಕೂಗು ಕೇಳಿಸುತ್ತಿತ್ತು. ನಾನು ಅದಾಗಲೆ ಹೊರ ಬಂದಿದ್ದೆ. ನನ್ನ ಸ್ನೇಹಿತರು ವ್ಯಾನ್'ನ ಒಳಗಡೆ ಸುಟ್ಟುಹೋಗುತ್ತಿದ್ದರು. ನಾನು ನನ್ನ ಪಾಠಚೀಲ ಎಸೆದು ಅವರನ್ನು ವ್ಯಾನ್'ನಿಂದ ಹೊರಗೆ ಎಳೆಯಲು ಮುಂದಾದೆ" ಎಂದ. ಅವನಲ್ಲಿ ಇನ್ನೊಮ್ಮೆ ಇಂತಹ ಸನ್ನಿವೇಶವನ್ನು ಎದುರಿಸಬಲ್ಲೆಯಾ ? ಎಂದು ಸಂದರ್ಶಕನು ಪ್ರಶ್ನೆ ಮಾಡಿದಾಗ ಬಾಲಕನ ಉತ್ತರ "ಯಾವಾಗ ಬೇಕಿದ್ದರೂ ಎದುರಿಸಬಲ್ಲೆ" ಎಂದು ದಿಟ್ಟತನದಿಂದ ಯಾದವ್ ಹೇಳುತ್ತಾನೆ. ಇದೆ ಅವನನ್ನು ದಂತಕಥೆಯ ಹಿರೋನಂತೆ ಬಿಂಬಿಸಿತು. ನಿಜವಾಗಿಯೂ ಅವನು ವಿಶ್ವಕ್ಕೆ ಸ್ಪೂರ್ತಿಯಾಗುವ ಬಾಲಕ.😍🙏
#RealLifeHeroes
- Suki Shetty

Comments