Posts

ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐

Image
ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐 ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕ್ರಾಂತಿಕಾರಿ ಹೋರಾಟದ ಹಾದಿ ತುಳಿದ ಪ್ರಮುಖರಲ್ಲಿ ಲಾಲಾ ಲಜಪತ್ ರಾಯ್ ಒಬ್ಬರು. ಪಂಜಾಬ್ ಕೇಸರಿ ಎಂದೇ ಖ್ಯಾತರಾಗಿದ್ದ ಇವರು ಬ್ರಿಟಿಷರ ವಿರುದ್ಧ ಹೋರಾಡಲು ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ತಮ್ಮ ಪ್ರಖರ ಮಾತಿನ ಮೂಲಕವೇ ಕ್ರಾಂತಿಯ ಕಿಚ್ಚು ಹಚ್ಚಿದರು. ಈ ಭೂಮಿ ಮೇಲೆ ಚೆಲ್ಲಿರುವುದು ನಮ್ಮ ಪೂರ್ವಜರ ರಕ್ತ. ನಾವು ಈ ಭೂಮಿಯನ್ನು ಬಳಸುತ್ತಿದ್ದೇವೆ. ಅದರ ಮೇಲೆ ವಾಸಿಸುತ್ತಿದ್ದೇವೆ. ಆದ್ದರಿಂದ ಈ ಭೂಮಿ ನಮ್ಮದು ಇಲ್ಲವೇ ದೇವರದ್ದು…’ ಹೀಗೆ ತಮ್ಮ ಪ್ರಖರ ಮಾತುಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು ಹಚ್ಚಿದವರು ಅಪ್ರತಿಮ ವೀರ ಲಾಲಾ ಲಜಪತ್​ರಾಯ್. ಲಾಲ್-ಬಾಲ್-ಪಾಲ್ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಅವಲೋಕಿಸಿದಾಗ ಒಟ್ಟಿಗೆ ಕಾಣಿಸಿಕೊಳ್ಳುವ ಹೆಸರುಗಳು. ಲಾಲ್ ಎಂದರೆ ಲಾಲಾ ಲಜಪತರಾಯ್, ಬಾಲ್ ಎಂದರೆ ಬಾಲ ಗಂಗಾಧರ ತಿಲಕ್, ಪಾಲ್ ಎಂದರೆ ಬಿಪಿನ್ ಚಂದ್ರಪಾಲ್. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಹೋರಾಟದ ದಿಕ್ಕನ್ನು ಬದಲಿಸಿದ ಈ ಯುವಕರು ಕ್ರಾಂತಿಕಾರಿ ಹೋರಾಟದಿಂದಷ್ಟೇ ಸ್ವರಾಜ್ಯದ ಕನಸು ನನಸ...

ಧೈರ್ಯಕ್ಕೆ ಮತ್ತೊಂದು ಹೆಸರೇ ಜನರಲ್ ತಿಮ್ಮಯ್ಯ 🇮🇳🙏

Image
#ಧೈರ್ಯಕ್ಕೆ_ಮತ್ತೊಂದು_ಹೆಸರೇ_ಜನರಲ್_ತಿಮ್ಮಯ್ಯ ಜನರಲ್ ತಿಮ್ಮಯ್ಯರವರ ಸಾಧನೆ ಮತ್ತು ಅಂದಿನ ಸರ್ಕಾರ ಜನರಲ್ ತಿಮ್ಮಯ್ಯ ಅವರ ಜೊತೆ ನಡೆದುಕೊಂಡ ರೀತಿಯನ್ನು #ಬ್ರಿಗೇಡಿಯರ್_ಜಾನ್_ಪಿ_ದಳವಿ ಈ ರೀತಿ ವಿವರಿಸುತ್ತಾರೆ..🙏 ಅವತ್ತಿನ ತನಕ ನಿರ್ಲಕ್ಷ್ಯದಿಂದಿದ್ದು, ಉಡಾಫೆಯ ಮಾತುಗಳನ್ನಾಡುತ್ತಲೇ ಓಡಾಡಿಕೊಂಡಿದ್ದ ನೆಹರು ಇದ್ದಕ್ಕಿದ್ದಂತೆ ಭಾರತದ ಗಡಿಗಳನ್ನು ಕಾಯುವ ಕೆಲಸ ವನ್ನು ಸೇನೆಗೆ ಒಪ್ಪಿಸಿ ಬಿಟ್ಟಿದ್ದರು. ಪಾರ್ಲಿಮೆಂಟಿನಲ್ಲಿ ಅವರಿಗೆ ವಿರೋಧ ಪಕ್ಷಗಳೆದುರು ಮುಖ ಉಳಿಸಿಕೊಳ್ಳುವ ಹರಕತ್ತು ಇತ್ತು. ಬೇರಿನ್ಯಾವುದೂ ತೋಚದಿದ್ದಾಗ, ಇಡೀ ಸಮಸ್ಯೆಯನ್ನು ಸೇನೆಗೆ ಒಪ್ಪಿಸಿದ್ದೇನೆ ಎಂದು ನುಣಿಚಿಕೊಂಡು ಬಿಟ್ಟರು. ಒಬ್ಬ ಅಂತಾರಾಷ್ಟ್ರೀಯ ಮುತ್ಸದ್ದಿ ಯಾಗಿ ಬೆಳೆಯಬಯಸುತ್ತಿದ್ದ ಮಹಾನ್ ಬುದ್ಧಿವಂತ ನೆಹರೂಜಿಗೆ ಇಂಥದೊಂದು ತಪ್ಪು ಮಾಡಬಾರದೆಂದು ತೋಚಲೇ ಇಲ್ಲ. ಚೀನದ ನಾಯಕರು NEFA ದ ಸರಹದ್ದುಗಳ ತನಕ ತಮ್ಮ ಮಜಬೂತಾದ ಸೈನ್ಯವನ್ನು ತಂದು ನಿಲ್ಲಿಸಿದಾಗಲೂ ಕೂಡ ನಾವು ಸೇನೆಯನ್ನು ಬಳಸುತ್ತಿದ್ದೇವೆ ಎಂಬ ಹೇಳಿಕೆ ಕೊಟ್ಟಿರಲಿಲ್ಲ. 'ಅಲ್ಲಿ ನಮ್ಮ ಗಡಿ ರಕ್ಷಕ ಪಡೆ (Frontier guards) ಮಾತ್ರ ಇದೆ" ಎಂದು ಜಗತ್ತಿಗೆ ಸುಳ್ಳು ಹೇಳುತ್ತ ಬಂತು. ಆದರೆ ನಮ್ಮ ನೆಹರೂ ಇದ್ದಕ್ಕಿದ್ದಂತೆ "ಸೈನ್ಯಕ್ಕೆ ಗಡಿ ಕಾಯುವ ಜವಾಬ್ದಾರಿ. ಒಪ್ಪಿಸಿದ್ದೇನೆ' ಎಂದು ಹೇಳಿಕೆ ಕೊಡುವ ಮೂಲಕ ಊರಿಗೆ ಮುಂಚೆ ನಾವು ಯುದ್ಧಕ್ಕೆ ಸಿದ...

ಓಂ ಪ್ರಕಾಶ್ ಯಾದವ್ ವಿಶ್ವಕ್ಕೆ ಸ್ಪೂರ್ತಿದಾಯಗುವ ಬಾಲಕ..😍🙏

Image
#ಓಂ_ಪ್ರಕಾಶ್_ಯಾದವ್ 🧡 ಏಳನೇ ತರಗತಿಯಲ್ಲಿ ಓದುತ್ತಿದ್ದ ಉತ್ತರಪ್ರದೇಶದ ರೈತನ ಮಗ. ವ್ಯಾನ್ ವೊಂದಕ್ಕೆ ಬೆಂಕಿ ಬಿದ್ದಾಗ ಮಕ್ಕಳನ್ನು ರಕ್ಷಿಸಿ ಸಂಜಯ ಚೋಪ್ರ ಅವಾರ್ಡ ಗೆದ್ದರು. ಮತ್ತು 2011ರಲ್ಲಿ ರಾಷ್ಟ್ರದ ಧೈರ್ಯಶಾಲಿ ಪ್ರಶಸ್ತಿ ಗೆದ್ದ ಹುಡುಗ..😍🙏 ಅಂದು ಸೆಪ್ಟಂಬರ್ 11, 2010. ತನ್ನ ಸ್ನೇಹಿತರ ಜೊತೆ ಮಾರುತಿ ಕಾರ್ ನಲ್ಲಿ ಶಾಲೆಗೆ ಹೋಗುತ್ತಿದ್ದ. ಆದರೆ ಆಕಸ್ಮಿಕವಾಗಿ ಮಾರುತಿ ಕಾರಿಗೆ ಬೆಂಕಿ ಹೊತ್ತಿತು. ಕಾರಣವಿಷ್ಟೆ ಗ್ಯಾಸ್'ಕಿಟ್ ನಲ್ಲಿನ ಶಾರ್ಟಸರ್ಕ್ಯೂಟ್ !!! ತಕ್ಷಣ ಮಾರುತಿ ಕಾರಿನ ಡೋರ್ ತೆಗೆದು ಚಾಲಕ ಪಲಾಯನ ಗೈದ. ಆದರೆ ಯಾದವ್ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಬಳಿಯಿದ್ದ ಡೋರ್ ಮುರಿದ,ಬಾಗಿಲು ತೆರೆದ, ತನ್ನ ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಎಳೆದು ಹಾಕಿ, ಯಾದವ್ ಆ ಹೊತ್ತಿನಲ್ಲಿ ತನ್ನ ಎಂಟು ಜನ ಸಹಪಾಠಿಗಳನ್ನು ರಕ್ಷಿಸಿದ್ದ. ಆಗಲೆ ಬೆಂಕಿ ಅವನ ಮುಖ ಬೆನ್ನು ತೋಳುಗಳನ್ನು ಬೇಯಿಸಿಬಿಟ್ಟಿತು. ಅಷ್ಟಾಗಿಯೂ ಅವನ ಮುಖದಲ್ಲಿ ಭಯ ಕಾಣುತ್ತಿರಲಿಲ್ಲ.ಬದಲಾಗಿ ಅವನ ಮುಖದ ಸುಟ್ಟಗಾಯಗಳು ನೋಡಿದವರನ್ನು ಭಯಬೀಳಿಸುತ್ತಿತ್ತು. ಅವನ ಆತ್ಮಸ್ಥೈರ್ಯ ಒಂದಿಂಚು ಕುಸಿದಿರಲಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ವರ್ಷ ಶಾಲೆಯಿಂದ ದೂರ ಕೂಡ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು..😔 ಸಂದರ್ಶಕನೊಬ್ಬ ಘಟನೆಯ ಬಗ್ಗೆ ಕೇಳಿದ್ದಕ್ಕೆ ಹೀಗೆ ಹೇಳಿದ "ನನಗೆ ನನ್ನ ಮೈ ಸುಟ್ಟುಹೋದ ಅನುಭವ ಆಗುತ...

ನಡೆದಾಡುವ ವಿಶ್ವಕೋಶ, ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ, ಕನ್ನಡಿಗರ ಹೆಮ್ಮೆಯ "ಕಡಲ ತಡಿಯ ಭಾರ್ಗವ" ಡಾ. ಕೆ #ಶಿವರಾಮ_ಕಾರಂತ ರವರ ಜನ್ಮ ದಿನ 😍💐

Image
ನಡೆದಾಡುವ ವಿಶ್ವಕೋಶ, ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ, ಕನ್ನಡಿಗರ ಹೆಮ್ಮೆಯ "ಕಡಲ ತಡಿಯ ಭಾರ್ಗವ" ಡಾ. ಕೆ #ಶಿವರಾಮ_ಕಾರಂತ ರವರ ಜನ್ಮ ದಿನದಂದು, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಸೇವೆಯನ್ನು ಸ್ಮರಿಸುತ್ತಾ ನನ್ನ ನಮನಗಳನ್ನು ಸಲ್ಲಿಸೋಣ.. 😍🙏💐 ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು. ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ...

ಭಾರತದ ಚರಿತ್ರೆ -2 ಹುತಾತ್ಮನನ್ನು ಜೀವಂತವಾಗಿಸಿದ ಆ ಎಪ್ಪತ್ತೆರಡು ಘಂಟೆಗಳು.!!

Image
ಹುತಾತ್ಮನನ್ನು ಜೀವಂತವಾಗಿಸಿದ ಆ ಎಪ್ಪತ್ತೆರಡು ಘಂಟೆಗಳು! #ಜಸ್ವಂತ್_ಸಿಂಗ್ ಯಾರೂ ಇಲ್ಲ ಅಲ್ಲಿ ಎಂಬ ಮಾಹಿತಿ ಪಡೆದು, ಇನ್ನೇನು ಭಾರತದ ಈ ಭೂಭಾಗ ಅನಾಯಾಸವಾಗಿ ತಮಗೆ ದಕ್ಕುತ್ತೆ ಅಂತ ಮುಂಬರೆದು ಬರುತ್ತಿತ್ತು ಚೀನಾ ಪಡೆ! ಗುಂಡೊಂದು ತೂರಿ ಬಂದು ಚೀನೀ ಸೈನಿಕನ ಶಿರವನ್ನು ಹೊಕ್ಕಿತು. ಆತ ಅಲ್ಲೇ ಹೆಣವಾದ. ಯಾರೂ ಇಲ್ಲದ ಮೇಲೆ ಗುಂಡೆಲ್ಲಿಂದ ಬಂತು ಎಂದು ಉಳಿದವರೆಲ್ಲಾ ಸಾವರಿಸಿಕೊಂಡು ನೋಡ ನೋಡುತ್ತಿದ್ದಂತೆ ಮತ್ತೊಬ್ಬ ಸೈನಿಕ ಬಿದ್ದಿದ್ದ. ಈ ಬಾರಿ ಗುಂಡು ಬಂದ ದಿಕ್ಕು ಬದಲಾಗಿತ್ತು. ಒಬ್ಬರ ಹಿಂದೆ ಒಬ್ಬರು ವಿವಿಧ ದಿಕ್ಕುಗಳಿಂದ ಬರುತ್ತಿದ್ದ  ಗುಂಡಿಗೆ ಬಲಿಯಾಗುತ್ತಿದ್ದಂತೆ ಭಾರತೀಯ ಸೈನಿಕರ ಪರಾಕ್ರಮದ ಬಗ್ಗೆ ಕೇಳಿ ಅರಿತಿದ್ದ 600ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಿಯರ ಎದೆಯಲ್ಲೊಂದು ಚಳಿ ಹುಟ್ಟಿತು. ಒಟ್ಟು ಎಷ್ಟು ಜನ ಯೋಧರಿರಬಹುದು ಎನ್ನುವ ಲೆಖ್ಖವೇ ಅವರಿಗೆ ಸಿಗದಾಯಿತು. ತರಗೆಲೆಗಳಂತೆ ತಮ್ಮವರ ತಲೆಗಳುರುಳುವುದನ್ನು ಅವರು ನೋಡುತ್ತಾ ಅಸಹಾಯಕರಾಗಿ ನಿಲ್ಲಬೇಕಾಯಿತು. ಅಲ್ಲೊಂದು ಅದ್ಭುತ ಶಕ್ತಿಯಿತ್ತು; ಅದು ಅಂದೂ ಮಾತೃಭೂಮಿಗಾಗಿ ಹೋರಾಡಿತು; ಇಂದಿಗೂ ಹೋರಾಡುತ್ತಲೇ ಇದೆ. ಅರುಣಾಚಲ ಪ್ರದೇಶದ ಬಹುತೇಕ ಊರುಕೇರಿಗಳು 1962ರ ಭಾರತ-ಚೀನಾ ಯುದ್ಧಕ್ಕೆ ವೇದಿಕೆಗಳಾಗಿವೆ, ಸರಿಯಾದ ಶಸ್ತ್ರವಿಲ್ಲದೆಯೂ ಕಾದಾಡಿದ ಭಾರತೀಯ ಸೈನಿಕರ ಪರಾಕ್ರಮಕ್ಕೆ ಸಾಕ್ಷಿಗಳಾಗಿವೆ, ಯುದ್ಧ ಸ್ಮಾರಕಗಳಾಗಿವೆ....

ಭಾರತದ_ಚರಿತ್ರೆ -1 ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏

Image
#ಭಾರತ_ದರ್ಶನ ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏   ಇಂದಿಗೆ ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಪುರಿಯ ರಥಬೀದಿ ಅಕ್ಷರಶಃ ಸ್ಮಶಾನವಾಗಿತ್ತು. ಜಗನ್ನಾಥ ಮಂದಿರದ ಐವತ್ತಕ್ಕೂ ಹೆಚ್ಚು ಅರ್ಚಕರ ಶವಗಳು ದೇಗುಲದ ಎದುರಿನ ಬೀದಿಯಲ್ಲಿ ಬೇಸಗೆಯ ಬಿರು ಬಿಸಿಲಿಗೆ ಒಣಗುತ್ತಿದ್ದವು. ಪೈಕ ಸರದಾರರ ಶವಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪೈಕ ಯೋಧರ ಮಕ್ಕಳ ಶವಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೈಕಾಗಳನ್ನು ಒಡಿಶಾದಿಂದ ಬಹಿಷ್ಕರಿಸಲಾಗಿತ್ತು. ಹಲವಾರು ಜನರನ್ನು ಬ್ರಿಟನ್ನಿನ ತೋಟಗಳಿಗೆ ಗುಲಾಮರಂತೆ ದುಡಿಸಲು ರವಾನಿಸಲಾಗಿತ್ತು. ಇಡಿಯ ಒಡಿಶಾದ ಮನೆಮನೆಗಳಲ್ಲಿ ದುಃಖ ಮಡುಗಟ್ಟಿತ್ತು. ಒಂದೊಂದು ಮನೆಯಲ್ಲೂ ಒಂದೋ ಮನೆಯ ಸದಸ್ಯರೊಬ್ಬರು ಕೊಲೆಯಾಗಿದ್ದರು ಅಥವಾ ದೇಶಭೃಷ್ಟರಾಗಿದ್ದರು. ಪುರಿಯ ಜಗನ್ನಾಥ ಅಸಹಾಯಕನಾಗಿ ದೇಗುಲದೊಳಗೆ ಬಂಧಿಯಾಗಿದ್ದ! ಬ್ರಿಟಿಷರು ಭಾರತದಲ್ಲಿ ಯಾವುದೇ ಕ್ರೌರ್ಯ ತೋರಲಿಲ್ಲ ಎನ್ನುವವರಿಗೆ ಇತಿಹಾಸದ ಈ ತಿಂಗಳು, ಒಡಿಶಾದ ಬೀದಿಬೀದಿಗಳು ಕ್ರೌರ್ಯದ ಪರಾಕಾಷ್ಠೆಯ ಸಾಕ್ಷಿಯಾಗಿ ನಿಂತಿದ್ದವು. ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ...

ವಿದ್ಯೆ ಬುದ್ದಿ ಕಲಿಸಿದ ಗುರುವಿಗೆ ಶಿಕ್ಷಕರ ದಿನದ ಶುಭಾಷಯಗಳು.😍💐🙏

Image
#ವಿದ್ಯೆ_ಬುದ್ದಿ_ಕಲಿಸಿದ_ಗುರುವಿಗೆ_ಶಿಕ್ಷಕರ_ದಿನದ_ಶುಭಾಷಯಗಳು...💐💐🙏🏼🙏🏼 ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು,ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ.  ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ.ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತ...