Posts

ಭಾರತದ_ಚರಿತ್ರೆ -1 ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏

Image
#ಭಾರತ_ದರ್ಶನ ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏   ಇಂದಿಗೆ ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಪುರಿಯ ರಥಬೀದಿ ಅಕ್ಷರಶಃ ಸ್ಮಶಾನವಾಗಿತ್ತು. ಜಗನ್ನಾಥ ಮಂದಿರದ ಐವತ್ತಕ್ಕೂ ಹೆಚ್ಚು ಅರ್ಚಕರ ಶವಗಳು ದೇಗುಲದ ಎದುರಿನ ಬೀದಿಯಲ್ಲಿ ಬೇಸಗೆಯ ಬಿರು ಬಿಸಿಲಿಗೆ ಒಣಗುತ್ತಿದ್ದವು. ಪೈಕ ಸರದಾರರ ಶವಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪೈಕ ಯೋಧರ ಮಕ್ಕಳ ಶವಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೈಕಾಗಳನ್ನು ಒಡಿಶಾದಿಂದ ಬಹಿಷ್ಕರಿಸಲಾಗಿತ್ತು. ಹಲವಾರು ಜನರನ್ನು ಬ್ರಿಟನ್ನಿನ ತೋಟಗಳಿಗೆ ಗುಲಾಮರಂತೆ ದುಡಿಸಲು ರವಾನಿಸಲಾಗಿತ್ತು. ಇಡಿಯ ಒಡಿಶಾದ ಮನೆಮನೆಗಳಲ್ಲಿ ದುಃಖ ಮಡುಗಟ್ಟಿತ್ತು. ಒಂದೊಂದು ಮನೆಯಲ್ಲೂ ಒಂದೋ ಮನೆಯ ಸದಸ್ಯರೊಬ್ಬರು ಕೊಲೆಯಾಗಿದ್ದರು ಅಥವಾ ದೇಶಭೃಷ್ಟರಾಗಿದ್ದರು. ಪುರಿಯ ಜಗನ್ನಾಥ ಅಸಹಾಯಕನಾಗಿ ದೇಗುಲದೊಳಗೆ ಬಂಧಿಯಾಗಿದ್ದ! ಬ್ರಿಟಿಷರು ಭಾರತದಲ್ಲಿ ಯಾವುದೇ ಕ್ರೌರ್ಯ ತೋರಲಿಲ್ಲ ಎನ್ನುವವರಿಗೆ ಇತಿಹಾಸದ ಈ ತಿಂಗಳು, ಒಡಿಶಾದ ಬೀದಿಬೀದಿಗಳು ಕ್ರೌರ್ಯದ ಪರಾಕಾಷ್ಠೆಯ ಸಾಕ್ಷಿಯಾಗಿ ನಿಂತಿದ್ದವು. ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ...

ವಿದ್ಯೆ ಬುದ್ದಿ ಕಲಿಸಿದ ಗುರುವಿಗೆ ಶಿಕ್ಷಕರ ದಿನದ ಶುಭಾಷಯಗಳು.😍💐🙏

Image
#ವಿದ್ಯೆ_ಬುದ್ದಿ_ಕಲಿಸಿದ_ಗುರುವಿಗೆ_ಶಿಕ್ಷಕರ_ದಿನದ_ಶುಭಾಷಯಗಳು...💐💐🙏🏼🙏🏼 ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು,ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ.  ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ.ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತ...

ವೀರಯೋಧ ವಿಕ್ರಂ ಭಾತ್ರಾ ರ ನೆನಪು 😍🙏

Image
#ಏ_ಮೇರೆ_ವತನ್_ಕೇ_ಲೋಗೋ… #ವಿಕ್ರಂ_ಭಾತ್ರಾ 😍🙏🏼🇮🇳 ಮೊಬೈಲ್ ಪ್ಲೇ ಬ್ಯಾಕ್ನಲ್ಲಿ ಲತಾ ಮಂಗೇಶ್ಕರ್ ಹಾಡಿದ “ಏ ಮೇರೆ ವತನ್ ಕೇ ಲೋಗೊ” ಹಾಡು ಗುಯ್ ಗುಟ್ಟುತ್ತಿತ್ತು, ಅದನ್ನ ಹಾಡು ಎಂದರೆ ತಪ್ಪಾಗುತ್ತೆ, ಅದೊಂದು ಚರಮ ಗೀತೆ, ಕಾರ್ಗಿಲ್ ಕಣ್ಣೆದುರು ಬಂದು ಹೋಯ್ತು, ಗೆದ್ದು ಬೀಗಿದ್ದಕ್ಕಿಂತ, ಕಳೆದುಕೊಂಡು ಅತ್ತದ್ದೇ ಜಾಸ್ತಿ. ನಾವು ಗೆದ್ದು ಸೋತಿದ್ದೆವು, ಪಾಕಿಸ್ತಾನ ಸೋತು ಸತ್ತಿತ್ತು. ಹೀಗೆ ಹಾಡು ಕೇಳುತ್ತಿದ್ದವನಿಗೆ ನೆನಪಾದದ್ದು ಕಾರ್ಗಿಲ್ ಹೀರೋಗಳದ್ದು, ಅದರಲ್ಲೂ #ವಿಕ್ರಂ_ಭಾತ್ರಾ 🙏🏼 ಆತ ಮನಸ್ಸು ಮಾಡಿದ್ದರೆ ಹಡಗು ಹತ್ತಿ ಡಾಲರ್ ಗಟ್ಟಲೆ ದುಡಿಯಬಹುದಿತ್ತು, ವಿದೇಶಿ ಹಡಗಿನಲ್ಲಿ ಕೆಲಸವೂ ಸಿಕ್ಕಿತ್ತು, ಆದರೆ ಆತ ಹಡಗಿನ ಯುನಿಪಾರಂ ತ್ಯಜಿಸಿ ಸೇನೆಯ ಯುನಿಪಾರಂ ತೊಟ್ಟುಬಿಟ್ಟ.. ತಂದೆ ಜಿ.ಎಲ್ ಭಾತ್ರಾ ಚಂಡೀಗಡದ ಪಾಲಾಲಂಪುರದ ಸಣ್ಣ ಶಾಲೆಯೊಂದರ ಮುಖ್ಯ ಶಿಕ್ಷಕ, ತಾಯಿ ಜಯ್ ಕಮಲ್ ಶಿಕ್ಷಕಿ ಜೊತೆಗೊಬ್ಬ ಸಹೋದರ ಇವಿಷ್ಟು ಭಾತ್ರಾನ ಪ್ರಪಂಚ,ತೀರಾ ಮಧ್ಯಮ ವರ್ಗದ ಕುಟುಂಬವದು, ವಿಕ್ರಂ ಸೇನೆಗೆ ಸೇರಿ ಹದಿನೆಂಟು ತಿಂಗಳಾಗಿತ್ತಷ್ಟೆ, ಮೊದಲ ರಜೆ ಸಿಕ್ಕಿತ್ತು, ಅಮ್ಮನ ಕೈ ತುತ್ತು ತಿನ್ನಬೇಕು,ಅಪ್ಪ,ತಮ್ಮನ ಜೊತೆ ಹರಟಬೇಕು ಎಂದು ಆಸೆಯಿಂದ ಮನೆಗೆ ಬಂದಿದ್ದ, ಹೋಳಿ ಹಬ್ಬದ ಸಂದರ್ಭ ಪಾಲಾಲಂಪುರದಲ್ಲಿ ನೇವುಗಲ್ ಕಫೇ ಎಂಬ ಹೋಟೆಲ್ ಇದೆ,ಅದ್ಯಾವುದೋ ಕೆಲಸಕ್ಕೆ ಹೋದಾತನಿಗೆ ಪರಿಚಯಸ್ಥನೊಬ್ಬ ಸಿಕ್ಕಿದ್ದ, “ಯುದ್ಧ ಪ್ರಾರ್...

ಸ್ವಾತಂತ್ರ್ಯ_ಯಾರಿಂದ_ಬಂತು.. #ಮಂಗಳ್_ಪಾಂಡೆ 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ಮಂಗಳ್_ಪಾಂಡೆ (ದಿ. ೮ ಎಪ್ರಿಲ್ ೧೮೫೭) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೯೫೭ಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ. ಮಂಗಲ ಪಾಂಡೆ - ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಆರಂಭಿಕ ವರ್ಷಗಳಲ್ಲಿ ಮಂಗಲ್ ಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ ಕುಟುಂಬಕ್ಕೆ ಭಾರತದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯಲ್ಲಿ ಜುಲೈ ೧೮೨೭ ೧೯ ರಂದು ಜನಿಸಿದರು. ಅವರ ತಂದೆ, ದಿವಾಕರ್ ಪಾಂಡೆ, ವೃತ್ತಿಯ ಮೂಲಕ ರೈತ ಮತ್ತು ಮಧ್ಯಮ ವರ್ಗ ಸೇರಿದ್ದರು. ಮಂಗಲ್ ಪಾಂಡೆ, ನಂತರ ೧೮೩೦ ರಲ್ಲಿ ಬರಗಾಲದಿಂದ ಅವರ ತಂದೆ ಮಂಗಲ್ ಪಾಂಡೆ ಹಾಗೂ ಅವರ ಸಹೋದರಿಯನ್ನು ಬಿಟ್ಟು ಮೃತಪಟ್ಟರು. ಅವರು ೨೨ನೇ ವಯಸ್ಸಿನಲ್ಲಿ ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇರಿದರು. ಪಾಂಡೆ ೩೪ ನೇ ಬಂಗಾಳ ಸ್ಥಳೀಯ ಪದಾತಿದಳದ ೬ ನೇ ಕಂಪನಿ ಭಾಗವಾಗಿದ್ದರು , ಪ್ರಮುಖವಾಗಿ ರೆಜಿಮೆಂಟ್ ತಂದೆಯ...

ಸ್ವಾತಂತ್ರ್ಯ_ಯಾರಿಂದ_ಬಂತು... ಚಂದ್ರಶೇಖರ್ ಆಜಾದ್ 🙏🙏

Image
#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪತಚಲನ ನಡೆದಿತ್ತು. ಹನ್ನೆರಡನೆ ವಯಸ್ಸಿಗಾಗಲೇ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಬೇಕೆಂಬ ಹಂಬಲದಲ್ಲಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ?.. ಜೈ!" “ವಂದೇ... ಮಾತರಂ!" ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಎದುರಾಯಿತು. ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಿದರು. ಎಂಭತ್ತಕ್ಕು ಹೆಚ್ಚು ವಯಸ್ಸಿನ ವೃದ್ಧರೊಬ್ಬರ ಎದೆ ಮೇಲೆ ಒಬ್ಬ ಪೋಲಿಸ್ ಲಾಠಿ ಬೀಸಿದ. ಇದನ್ನು ನೋಡಿ ಕೋಪಗೊಂಡ ಹುಡುಗ ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಬೀಸಿದ, ಕಲ್ಲು ನೇರವಾಗಿ ಹೋಗಿ ಆ ಪೋಲೀಸ್ ಹಣೆಗೆ ಬಿತ್ತು. ಅಷ್ಟೇ, ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ. ಕಟಕಟೆಯಲ್ಲಿ ಹುಡುಗನನ್ನು ವಿಚಾರಣೆ ಮಾಡಲಾಯಿತು. ನ್ಯಾಯಾಧೀಶರಯ ನಿನ್ನ ಹೆಸರೇನು? ಎಂದು ಕೇಳಿದರೆ ಹುಡುಗ ಆಜಾದ್! ಎಂದು ಉತ್ತರಿಸಿದ. ನ್ಯಾಯಾಧೀಶರು ನಿನ್ನ ತಂದೆ ಹೆಸರೇನು? ಎಂದಾಗ ಹುಡುಗ ಸ್ವಾಧೀನತೆಯೆ ನನ್ನ ಅಪ್ಪ ಎಂದುಬಿಟ್ಟ‌. ಮನೆ ಎಲ್ಲಿ? ಎಂದು ಕೇಳಿದಾಗ ಹುಡುಗ ಸೆರೆಮನೆಯೇ ನನ್ನ  ಮನೆ! ಬರೆದುಕೊಳ್ಳಿ ಎಂದ. ನ್ಯಾಯಾಧೀಶರಿಗೆ ಹುಡುಗನ ಉತ್ತರಗಳು...

ಸ್ವಾತಂತ್ರ್ಯ_ಯಾರಿಂದ_ಬಂತು.. #ವಿನಾಯಕ_ದಾಮೋದರ_ಸಾವರ್ಕರ್ 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ವಿನಾಯಕ_ದಾಮೋದರ_ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು. ವೀರ ಸಾವರ್ಕರ್ ಹಿನ್ನೆಲೆ ವಿನಾಯಕರು ಮೇ ೨೮, ೧೮೮೩ ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. *ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್...

#ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಮಚಂದ್ರ_ಪಾಂಡುರಂಗ_ಟೋಪೆ(#ತಾತ್ಯಾ_ಟೋಪೆ)🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ರಾಮಚಂದ್ರ_ಪಾಂಡುರಂಗ_ಟೋಪೆ(#ತಾತ್ಯಾ_ಟೋಪೆ)  (೧೮೧೪ – ಏಪ್ರಿಲ್ ೧೮, ೧೮೫೯) ತಾತ್ಯಾ ಟೋಪೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಮಹಾನ್ ಸೇನಾನಿ ತಾತ್ಯಾ ಟೋಪೆ ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೆವೋಲಾ ಗ್ರಾಮದಲ್ಲಿ ೧೮೧೪ರ ವರ್ಷದಲ್ಲಿ ಜನಿಸಿದರು. ಅವರ ಪಾಂಡುರಂಗ ರಾವ್ ಜವಳೇಕರ್ ಮತ್ತು ತಾಯಿ ರುಕ್ಮಾಬಾಯಿ. ತಾತ್ಯಾ ಟೋಪೆ ಪ್ರಾರಂಭದಲ್ಲಿ ಬಿಥುರ್ ಪ್ರಾಂತ್ಯದ ನಾನಾ ಸಾಹೇಬನ ಸೇನಾನಿಯಾಗಿದ್ದರು. ಕಾಲಕ್ರಮೇಣದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ನೆರವಿಗೆ ಬಂದು ಹೋರಾಡಿದರು. ಮಹಾನ್ ಸಂಘಟನಾ ಚತುರ ಸಿಪಾಯಿ ದಂಗೆ ಎಂದು ಬಣ್ಣಿತವಾದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾನ್ಪುರ, ಕಲ್ಪಿ, ಜಾನ್ಸಿಗಳಲ್ಲಿ ಯುದ್ಧ ಸಂಘಟನೆಗಳನ್ನು ನಡೆಸಿದ ತಾತ್ಯಾ ಟೋಪೆ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು. ಈ ಪ್ರದೇಶಗಳನ್ನು ಬ್ರಿಟಿಷ್ ಸೇನೆ ಪುನಃ ವಶಪಡಿಸಿಕೊಂಡಿತಾದರೂ, ತಾತ್ಯಾ ಅವರು ದೇಶದ ಇತರೆಡೆಗಳಾದ ಬಂದೆಲ್ಖಾಂಡ್, ಮಧ್ಯಭಾರತ, ರಾಜಾಸ್ಥಾನದ ಭರತ್ಪುರ, ಬಿತುಹರ್ ಮುಂತಾದ ಬಹುತೇಕ ಕಡೆಗಳಲ್ಲಿ ಸೇನೆಯನ್ನು ನಿರಂತರವಾಗಿ ಸಂಘಟಿಸುತ್ತಲೇ ಇದ್ದರು. ನರ್ಮದಾ, ಬೆಟ್ವಾ ನದೀತೀರಗಳಿಂದ ಮೊದಲ್ಗೊಂಡು ದಕ್ಷಿಣದ ಖಾಂಡೇಶ್ ವರೆಗೆ ಅವರು ಕ್ರಾ...