ಸ್ವಾತಂತ್ರ್ಯ_ಯಾರಿಂದ_ಬಂತು... ಚಂದ್ರಶೇಖರ್ ಆಜಾದ್ 🙏🙏
#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ
ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪತಚಲನ ನಡೆದಿತ್ತು. ಹನ್ನೆರಡನೆ ವಯಸ್ಸಿಗಾಗಲೇ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಬೇಕೆಂಬ ಹಂಬಲದಲ್ಲಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ?.. ಜೈ!" “ವಂದೇ... ಮಾತರಂ!"
ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಎದುರಾಯಿತು. ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಿದರು. ಎಂಭತ್ತಕ್ಕು ಹೆಚ್ಚು ವಯಸ್ಸಿನ ವೃದ್ಧರೊಬ್ಬರ ಎದೆ ಮೇಲೆ ಒಬ್ಬ ಪೋಲಿಸ್ ಲಾಠಿ ಬೀಸಿದ. ಇದನ್ನು ನೋಡಿ ಕೋಪಗೊಂಡ ಹುಡುಗ ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಬೀಸಿದ, ಕಲ್ಲು ನೇರವಾಗಿ ಹೋಗಿ ಆ ಪೋಲೀಸ್ ಹಣೆಗೆ ಬಿತ್ತು. ಅಷ್ಟೇ, ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ. ಕಟಕಟೆಯಲ್ಲಿ ಹುಡುಗನನ್ನು ವಿಚಾರಣೆ ಮಾಡಲಾಯಿತು.
ನ್ಯಾಯಾಧೀಶರಯ ನಿನ್ನ ಹೆಸರೇನು? ಎಂದು ಕೇಳಿದರೆ
ಹುಡುಗ ಆಜಾದ್! ಎಂದು ಉತ್ತರಿಸಿದ.
ನ್ಯಾಯಾಧೀಶರು ನಿನ್ನ ತಂದೆ ಹೆಸರೇನು? ಎಂದಾಗ ಹುಡುಗ ಸ್ವಾಧೀನತೆಯೆ ನನ್ನ ಅಪ್ಪ ಎಂದುಬಿಟ್ಟ. ಮನೆ ಎಲ್ಲಿ? ಎಂದು ಕೇಳಿದಾಗ ಹುಡುಗ ಸೆರೆಮನೆಯೇ ನನ್ನ ಮನೆ! ಬರೆದುಕೊಳ್ಳಿ ಎಂದ. ನ್ಯಾಯಾಧೀಶರಿಗೆ ಹುಡುಗನ ಉತ್ತರಗಳು ಗಾಬರಿಯನ್ನುಂಟು ಮಾಡಿತು. ನ್ಯಾಯಾಧೀಶರು ಹನ್ನೆರಡು ಛಡಿ ಏಟುಗಳ ಶಿಕ್ಷೆ ವಿಧಿಸಿಯೇ ಬಿಟ್ಟರು.
ಆ ದಿನರಾತ್ರಿ ಆಜಾದ್ ನನ್ನು ಜೈಲಿನಲ್ಲಿಯೇ ಇರಿಸಲಾಗಿತ್ತು. ಅವನ ಮೈಮೇಲಿದ್ದ ಬಟ್ಟೆಗಳನ್ನು ಕಸಿದುಕೊಂಡಿದ್ದರು.
ಕೊರೆಯುವ ಚಳಿ ಬೇರೆ, ಕಂಬಳಿ ಹೊದ್ದ ಪೋಲಿಸ್ ಹುಡುಗ ಇಷ್ಟು ಚಳಿಯಲ್ಲಿ ಹೇಗೆ ನರಳುತ್ತಿರಬಹುದು ಎಂದು ನೊಡಲು ಬಂದು ಮೂಕವಿಸ್ಮತನಾದ. ಹುಡುಗ ಎಂತಹ ಕೊರೆಯುವ ಚಳಿಯಲ್ಲು ಬೆವರುತ್ತ ೧೧೦೭, ೧೧೦೮ ಎಂದು ಬಸ್ಕಿಹೊಡೆಯುತ್ತಿದ್ದ. ಹುಡುಗನ ತಾಕತ್ತನ್ನು ನೋಡಿ ಆ ಪೋಲಿಸಿಗೆ ಒಂದು ಕ್ಷಣ ಗಾಬರಿಯಾಯಿತು.
ಬೆಳಕರಿಯಿತು ೧೨ ವರ್ಷದ ಚಿಕ್ಕ ಹುಡುಗನಿಗೆ ೧೨ ಚಡಿಯೇಟು. ಕೇಳಿದರೆ ಮೈ ಜುಮ್ ಎನ್ನುತ್ತದೆ. ಎಂತ ಬಲಶಾಲಿಯಾಗಿದ್ದರೆಂದರೆ ಆಂಗ್ಲರು ಕೊಡುತ್ತಿದ್ದ ಚಡಿಯೇಟಿಗೆ ಕಣೀರು ಹಾಕಿಬಿಡುತ್ತಿದ್ದರು.
ಹುಡುಗನ ಕೈಗಳನ್ನು ಮೇಲಕ್ಕೆ ಏರಿಸಿ ಕಟ್ಟಲಾಯಿತು. ಕಲೆಕ್ಟರ್ ಸಾಹೇಬರು ಸಹಾನುಭೂತಿಯಿಂದ "ನೀನಿನ್ನೂ ಹುಡುಗ, ನೀನು ಮಾಡಿರುವ ತಪ್ಪಿಗೆ ಕ್ಷಮೆ ಕೇಳಿಕೊಂಡರೆ ನಿನ್ನನ್ನು ಬಿಡುಗಡೆ ಮಾಡುತ್ತೇನೆ. ಇಲ್ಲದಿದ್ದರೆ ಛಡಿ ಏಟು ತಿನ್ನಬೇಕಾಗುತ್ತದೆ" ಎಂದರು.
ಅದಕ್ಕೆ ಆಜಾದ್ "ನಾನು ಕಾಂಗ್ರೆಸ್ಸಿನ ಆದೇಶವನ್ನು ಮಾತ್ರ ಪಾಲಿಸುತ್ತೇನೆ. ನಾನು ಯಾವ ಶಿಕ್ಷೆಗೂ ಹೆದರುವುದಿಲ್ಲ" ಎಂದ.
ಛಡಿ ಏಟುಗಳನ್ನು ಹೊಡೆಯಲಾರಂಬಿಸಿದರು. ಒಂದೊಂದು ಛಡಿಯೇಟಿಗೂ ಆಜಾದ್ ಉಚ್ಛ ಕಂಠದಿಂದ "ಭಾರತ್ ಮಾತಾ ಕೀ ಜಯ್, ವಂದೇ ಮಾತರಂ" ಎಂದು ಘೋಷಿಸುತ್ತಿದ್ದರು. ‘ವಂದೇ ಮಾತರಂ’ ಎನ್ನುವ ಮತ್ತೇರಿಸುವ, ಮೈಮರೆಸುವ ಘೋಷ ವಾಕ್ಯದ ಎದುರು ಯಾವ ಪೆಟ್ಟು ತಾನೆ ನೋವುಂಟು ಮಾಡಬಹುದಾಗಿತ್ತು. ಆ ಎಳೆಯ ದೇಶಭಕ್ತನಿಗೆ?
ಆದರೆ ಹೊಡೆತದಿಂದಾದ ಅವನ ಪೃಷ್ಠ ಭಾಗದಲ್ಲಿ ಚರ್ಮ ಹರೆದು ರಕ್ತ ಸುರಿಯುತ್ತಿತ್ತು.
ಆಂಗ್ಲ ಅಧಿಕಾರಿಯು ಅವನಿಗೆ ಕುಡಿಯಲು ಒಂದು ಲೋಟ ಹಾಲನ್ನು, ಮೂರು ಕಾಲ್ ರೂಪಾಯಿ ಕೊಟ್ಟನು, ಆಗ ಆಜಾದ್ ರೂಪಾಯಿಗಳನ್ನು ಅಧಿಕಾರಿಯ ಮುಖಕ್ಕೆ ಎಸೆದು ಬ್ರಿಟಿಷ್ ರಾಣಿಯ ಬೂಟು ನೆಕ್ಕೊ ದರ್ದು ನಿಮಗಿರೋದು ನನಗಲ್ಲ.
ನಾನು ಸ್ವಾತಂತ್ರ್ಯ ಬರುವವರೆಗು ಹಾಲು ಕುಡಿಯುವುದಿಲ್ಲ ಎಂದು ಹೇಳಿದ.
ಶಿಕ್ಷೆಯುಂಡು ಹೊರಬಂದ ಬಾಲಕ ಪ್ರತಿಜ್ಞೆ ಮಾಡಿದ. “ದುಷ್ಮನೋಂಕಿ ಗೋಲಿಯೋಂ ಕಾ ಮೈ ಸಾಮ್ನಾ ಕರೂOಗಾ ? ಆಜಾದ್ ಹು, ಮೈ ಆಜಾದ್ ಹೀ ರಹುOಗಾ !" ಎಂದು
ತನ್ನ ಪ್ರತಿಜ್ಞೆ ಮಾಡಿದ.
ಭಾರತ ಮಾತೆಯನ್ನು ಸ್ವಾತಂತ್ರ್ಯಗೊಳಿಸುವ ಪಣ ತೊಟ್ಟ ಅಜಾದ್ ರು, ೧೯೨೫ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ ೯ ಆರೋಪಿಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿಯಾಗಿದ್ದರು.
ನಂತರ, ೧೯೨೮ ರಲ್ಲಿ ಭಾರತಕ್ಕೆ ಆಗಮಿಸಿದ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸುವ ವೇಳೆ ಶ್ರೀಯುತ ಲಾಲಾ ಲಜಪತರಾಯರ ಮೇಲಾದ ಕ್ರೂರ ದಬ್ಬಾಳಿಕೆಗೆ ಉತ್ತರವಾಗಿ ಆಝಾದರ ನೇತೃತ್ವದಲ್ಲಿ ಭಗತ್ ಸಿಂಗ್ ಹಾಗೂ ರಾಜಗುರು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ರನ್ನು ಹತ್ಯೆಗೈದರು.
ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಅಜಾದ್‌ರನ್ನು ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು. ಅದರಂತೆಯೇ, ಯೋಜನೆಯ ಪ್ರಕಾರ 1931ರ ಫೆಬ್ರವರಿ 27ರಂದು ಅಲಹಾಬಾದ್‌ನ ಆಲ್‌ಫ್ರೆಡ್ ಪಾರ್ಕ್‌ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟಿಶ್ ಪೊಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್‌ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು.
ಆದರೆ, ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಅಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ಆದರೆ, ಅಲ್ ಫ್ರೆಡ್ ಪಾರ್ಕ್ ನಲ್ಲಿ ಬ್ರಿಟಿಷ್ ಸೈನ್ಯದವರು ಸುತ್ತುವರಿದಿದ್ದರು. ಏಕಾಂಗಿಯಾಗಿ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನವರೆಗೂ ಹೋರಾಡಿದರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಆಸುನೀಗಿದರು. ಕೊನೆಗೂ ಅಜಾದ್ ಅಜಾದರಾಗಿಯೇ ಉಳಿದರು.
#ಜೈ_ಹಿಂದ್ 🇮🇳

Comments