ವೀರಯೋಧ ವಿಕ್ರಂ ಭಾತ್ರಾ ರ ನೆನಪು 😍🙏
#ಏ_ಮೇರೆ_ವತನ್_ಕೇ_ಲೋಗೋ…
#ವಿಕ್ರಂ_ಭಾತ್ರಾ 😍🙏🏼🇮🇳
ಮೊಬೈಲ್ ಪ್ಲೇ ಬ್ಯಾಕ್ನಲ್ಲಿ ಲತಾ ಮಂಗೇಶ್ಕರ್ ಹಾಡಿದ “ಏ ಮೇರೆ ವತನ್ ಕೇ ಲೋಗೊ” ಹಾಡು ಗುಯ್ ಗುಟ್ಟುತ್ತಿತ್ತು, ಅದನ್ನ ಹಾಡು ಎಂದರೆ ತಪ್ಪಾಗುತ್ತೆ, ಅದೊಂದು ಚರಮ ಗೀತೆ, ಕಾರ್ಗಿಲ್ ಕಣ್ಣೆದುರು ಬಂದು ಹೋಯ್ತು, ಗೆದ್ದು ಬೀಗಿದ್ದಕ್ಕಿಂತ, ಕಳೆದುಕೊಂಡು ಅತ್ತದ್ದೇ ಜಾಸ್ತಿ. ನಾವು ಗೆದ್ದು ಸೋತಿದ್ದೆವು, ಪಾಕಿಸ್ತಾನ ಸೋತು ಸತ್ತಿತ್ತು. ಹೀಗೆ ಹಾಡು ಕೇಳುತ್ತಿದ್ದವನಿಗೆ ನೆನಪಾದದ್ದು ಕಾರ್ಗಿಲ್ ಹೀರೋಗಳದ್ದು, ಅದರಲ್ಲೂ #ವಿಕ್ರಂ_ಭಾತ್ರಾ 🙏🏼
ಆತ ಮನಸ್ಸು ಮಾಡಿದ್ದರೆ ಹಡಗು ಹತ್ತಿ ಡಾಲರ್ ಗಟ್ಟಲೆ ದುಡಿಯಬಹುದಿತ್ತು, ವಿದೇಶಿ ಹಡಗಿನಲ್ಲಿ ಕೆಲಸವೂ ಸಿಕ್ಕಿತ್ತು, ಆದರೆ ಆತ ಹಡಗಿನ ಯುನಿಪಾರಂ ತ್ಯಜಿಸಿ ಸೇನೆಯ ಯುನಿಪಾರಂ ತೊಟ್ಟುಬಿಟ್ಟ.. ತಂದೆ ಜಿ.ಎಲ್ ಭಾತ್ರಾ ಚಂಡೀಗಡದ ಪಾಲಾಲಂಪುರದ ಸಣ್ಣ ಶಾಲೆಯೊಂದರ ಮುಖ್ಯ ಶಿಕ್ಷಕ, ತಾಯಿ ಜಯ್ ಕಮಲ್ ಶಿಕ್ಷಕಿ ಜೊತೆಗೊಬ್ಬ ಸಹೋದರ ಇವಿಷ್ಟು ಭಾತ್ರಾನ ಪ್ರಪಂಚ,ತೀರಾ ಮಧ್ಯಮ ವರ್ಗದ ಕುಟುಂಬವದು, ವಿಕ್ರಂ ಸೇನೆಗೆ ಸೇರಿ ಹದಿನೆಂಟು ತಿಂಗಳಾಗಿತ್ತಷ್ಟೆ, ಮೊದಲ ರಜೆ ಸಿಕ್ಕಿತ್ತು, ಅಮ್ಮನ ಕೈ ತುತ್ತು ತಿನ್ನಬೇಕು,ಅಪ್ಪ,ತಮ್ಮನ ಜೊತೆ ಹರಟಬೇಕು ಎಂದು ಆಸೆಯಿಂದ ಮನೆಗೆ ಬಂದಿದ್ದ, ಹೋಳಿ ಹಬ್ಬದ ಸಂದರ್ಭ ಪಾಲಾಲಂಪುರದಲ್ಲಿ ನೇವುಗಲ್ ಕಫೇ ಎಂಬ ಹೋಟೆಲ್ ಇದೆ,ಅದ್ಯಾವುದೋ ಕೆಲಸಕ್ಕೆ ಹೋದಾತನಿಗೆ ಪರಿಚಯಸ್ಥನೊಬ್ಬ ಸಿಕ್ಕಿದ್ದ, “ಯುದ್ಧ ಪ್ರಾರ್ಂಭ ವಾಗೋ ಹಾಗಿದೆ ನಿನಗೆ ಯಾವಾಗ ಬೇಕಾದರು ಕರೆ ಬರಬಹುದು,ಎಚ್ಚರಿಕೆಯಿಂದಿರು” ಎಂದಿದ್ದಕ್ಕೆ, ವಿಕ್ರಂ ನಗುತ್ತಲೆ,ನೀವು ಚಿಂತೆ ಮಾಡಬೇಡಿ, ಗೆದ್ದರೆ ದ್ವಜ ಹಿಡೀದು ಬರ್ತೀನಿ, ಸತ್ತರೆ ದ್ವಜ ಹೊದ್ದು ಕೊಂಡು ಬರ್ತೀನಿ” ಎಂದಿದ್ದನಂತೆ, ಆ ಗೆಳೆಯನಿಗೆ ತಿಳಿದಿರಲಿಲ್ಲ ವಿಕ್ರಂ ಜೊತೆ ನಾನು ಕೊನೆ ಬಾರಿ ಮಾತಾಡ್ತಿದ್ದೀನೆಂದು, ೧೯೯೯ ಜೂನ್ ೧ ರಂದು ವಿಕ್ರಂಗೆ ಕರೆ ಬಂತು, ವಿಕ್ರಂನನ್ನು ಅಳುತ್ತಲೇ ಬೀಳ್ಕೊಟ್ಟಿತ್ತು ಭಾತ್ರಾ ಪ್ಯಾಮಿಲಿ, ಆತನನ್ನ ನೋಡಿದ್ದು ಅದೇ ಕೊನೆ ನಂತರ ನೋಡಿದ್ದು ಎನ್.ಡಿ.ಟಿವಿಯ ಸಂದರ್ಶನದಲ್ಲಿ ಅದಾದನ್ಂತರ ಹೆಣವಾಗಿ. ಹದಿನೇಳು ಸಾವಿರ ಅಡಿ ಎತ್ತರದಲ್ಲಿರುವ ೫೧೪೦ ಶಿಖರ ವಶಪಡಿಸಿಕೊಳ್ಳುವ ಜವಬ್ಧಾರಿ ಭಾತ್ರಾನಿಗೆ ವಹಿಸಲಾಯ್ತು, ಜೂನ್ ೧೯ರ ರಾತ್ರಿ ಆಪರೇಷನ್ ಪ್ರಾರಂಭವಾಯ್ತು,ಹೇಗಾದರು ಗೆಲ್ಲಲೇ ಬೇಕು ಇಲ್ಲವಾದಲ್ಲಿ ಕಾರ್ಗಿಲ್ ಪಾಕಿಸ್ಥಾನಕ್ಕೆ ಸೇರಿಹೋಗುತ್ತೆ,ಲೆಪ್ಟಿನೆಂಟ್ ವಿಕ್ರಂ ಭಾತ್ರಾ ಹಾಗು ಸಂಜೀವ್ ಜ್ವಾಮಾಲ್ ಶಿಖರವನ್ನೇರಿದ್ರು, ಬೆಳಗಾಗುವಷ್ಟರಲ್ಲಿ ಬಂಕರ್ಗಳನ್ನ ಸ್ಪೋಟಿಸಲಾಯ್ತು, ಶತ್ರುಗಳು “ಜನ್ನತ್” ಸೇರಿದ್ರು,ಮರುದಿನ ಬೆಳಗಾಗುವಷ್ಟರಲ್ಲಿ ೧೩ ಜಮ್ಮು- ಕಾಶ್ಮೀರ ರಯಫಲ್ಸ್ ಮೇಲೆ ಭಾತ್ರಾನದ್ದೆ ಚಿತ್ರ, ಸ್ವತಃ ಜನರಲ್ ವಿ.ಪಿ ಮಲಿಕ್ ಕರೆ ಮಾಡಿ ಭಾತ್ರಾನಿಗೆ ಅಭಿನಂದನೆ ಸಲ್ಲಿಸಿದ್ರು.
“ ಅಪ್ಪಾ ನಾನು ಶತ್ರುವಿನ ನೆಲೆಯನ್ನ ವಶ ಪಡಿಸಿಕೊಂಡಿದ್ದೇನೆ” ಎಂದು ಜಿ.ಎಲ್ ಭಾತ್ರಾಗೆ ವಿಕ್ರಂ ಹೇಳಿದಾಗ ಅವರ ಕಣ್ಣಲ್ಲಿ ಹೆಮ್ಮೆಯ ಕಣ್ಣಿರು ಚಿಮ್ಮಿತ್ತು, ಮುಂದೆ ಈ ಗೆಲುವು ಟೈಗರ್ ಹಿಲ್ ಗೆಲುವಿಗೆ ಕಾರಣವಾಯ್ತು, ಇದಾದ ಒಂಭತ್ತೇ ದಿನಕ್ಕೆ ಮತ್ತೆ ಭಾತ್ರಾಗೆ ಕರೆ ಬಂತು, “ವಿಕ್ರಂ ಜೀ ನೀವು ಮಹತ್ವದ ಶಿಖರ ಗೆಲ್ಲಲು ಹೊರಟಿದ್ದೀರಿ ನಿಮ್ಗೇನ್ನನ್ನಿಸ್ತಿದೆ?” ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ವಿಕ್ರಂ ನಗುತ್ತ “ ಏ ದಿಲ್ ಮಾಂಗೇ ಮೋರ್” ಎಂದು ಕ್ಯಾಮರಾ ಹಿಂದೆ ಮುಖ ಮಾಡಿದ್ದ! ಅಂದಿಗೆ ಟ್ರೆಂಡ್ ನಲ್ಲಿದ್ದ ಪೆಪ್ಸಿಕೋಕ್ ಕಂಪನಿಯ ಟ್ಯಾಗ್ ಲೈನದು, ಇನ್ನಷ್ಟು ಪಾಕಿಗಳನ್ನ ಕೊಲ್ಲ್ಬೇಕು ಅಂತ ಹೆಳಿ ನಕ್ಕಿಬಿಟ್ಟಿದ್ದ ಪುಣ್ಯಾತ್ಮ.
೧೬ ಸಾವಿರ ಅಡಇ ಎತ್ತರದ ೮೦ ಡಿಗ್ರಿ ಕಡಿದಾದ ೪೮೭೫ ಶಿಖರ ಗೆಲ್ಲಿಸುವ ಜವಬ್ಧಾರಿ ವಿಕ್ರಂ ನದ್ದಾಗಿತ್ತು, ಈಗಾಗಲೆ ವಿಕ್ರಂನ ಸಾಹಸ ನೊಡಿ ಆತನನ್ನ “ಶೇರ್ ಷಾ” ಎಂದೆ ಕರೆಯುತ್ತಿದ್ದರು, ಶೇರ್ ಷಾ ಬರ್ತಿದ್ದಾನೆಂದು ತಿಳಿದು, ಪಕಿಸ್ತಾನಿ ಸೈನಿಕರು ಬೆನ್ನಿಗೆ ಕಾಲು ಹಚ್ಚಿ ಓಟಕಿತ್ತರು,ಇನ್ನೆನು ಕೊನೆಯ ಬಂಕರ್ ನೆಲಕ್ಕುರುಳಬೇಕು,ಶತ್ರುವಿನ ಕಡೆಯಿಂದ ಗುಂಡಿನ ದಾಳಿ ಹೆಚ್ಚಾಯ್ತು, ಜೊತೆಯಲ್ಲಿದ್ದ ಸುಭೆದಾರನನ್ನ ರಕ್ಷಿಸಿ “ನಿನಗೆ ಮಕ್ಕಳಿದ್ದಾರೆ ದೂರ ನಿಲ್ಲು” ಎಂದು ಏಕಾಂಗಿಯಾಗೆ ಹೋರಾಟಕ್ಕೆ ನಿಂತ ಭಾತ್ರಾಗೆ ಎದೆಗೆ ಗುಂಡು ತಾಗಿತ್ತು, ಇನ್ನೊಂದು ಸೊಂಟವನ್ನ ಸೀಳಿತ್ತು, ಭಾತ್ರಾ ತನ್ನ ಉಸಿರು ನಿಲ್ಲುವವರೆಗೂ ಹೋರಡಿದ್ದ,ಬೆಳಗಾಗುವಷ್ಟರಲ್ಲಿ ೪೮೭೫ ನಮ್ಮದಾಯ್ತು, ಆದರೆ ವಿಕ್ರಮ್ನನ್ನ ನಾವು ಕಳೆದು ಕೊಡಿದ್ದೆವು.
ಇತ್ತ ಮನೆಗೆ ಬಂದ ಸೈನಿಕರು “ಭಾತ್ರಾಜಿ ಅಭ್ ನಹಿ ರಹೆ!” ಎಂದಾಗ ಜೈಕಮಲ್ ಕುಸಿದು ಬಿದ್ರು, ಜೆ.ಎಲ್.ಭಾತ್ರಾ ಹೆಮ್ಮೆ ಪಟ್ಟರು, ವಾಜಪೇಯಿ ಅವರ ದಿಟ್ಟ ನಿರ್ದಾರ, ವೇದ ಪ್ರಕಾಶ ಮಲಿಕ್ ಅವರ ಸ್ಟಾಟರ್ಜಿಗಳು ಕಾರ್ಗಿಲ್ ಅನ್ನು ಮತ್ತಷ್ಟು ಭಯಾನಕಗೊಳಿಸಿದ್ವು,ಆದರೆ ಒಂದಿಚೂ ಹೆದರದೆ,ಬೆವರದೆ ಗುಂಡಿಗೆದೆಯೊಡ್ಡಿ ಪ್ರಾಣಬಿಟ್ಟ ೫೩೭ ಯೋಧರಿಗೆ ಅದ್ಹೇಗೆ ಥಾಂಕ್ಸ್ ಹೇಳ್ಬೇಕೋ ಗೊತ್ತಾಗೊಲ್ಲ!
ಅಟಲ್ರನ್ನ,ಮಲಿಕ್ರನ್ನ್,ಯೋಧರನ್ನ ನಾವು ಹೊಗಳ್ಲೇ ಬೇಕು,ಇವತ್ತಿಗೂ ನಾವು ಸೋತೆವೋ? ಗೆದ್ದೆವೊ? ಎಂದು ವಿಮರ್ಷಿಸಿದಾಗ, ಯುದ್ಧದಲ್ಲೇನೋ ಗೆದ್ವಿ ಆದರೆ ವೀರರನ್ನ ಬಲಿಕೊಟ್ಟು ಸೋತುಹೋದ್ವಿ,ಇತ್ತ ಪಾಕ್ ಸೋತು ಸತ್ತೆಹೋಗಿತ್ತು, ಸೈನಿಕರು ಷಂಡರಂತೆ ಓಡಿ ಹೋದ್ರು, ವಿಪರ್ಯಾಸವೇನೆಂದರೆ, ಕಾರ್ಗಿಲ್ ವೀರರಿಗೆ ಗೌರವಿಸೋದಕ್ಕೆ ಒಂದು ದಿನವನ್ನ ನೀಡೋದಕ್ಕೂ ಪುರುಸೊತ್ತಿಲ್ಲ! ಹೋಗಲಿ ಬಿಡಿ ಸೈನಿಕರನ್ನ ಗೌರವಿಸೋದು ನಮ್ಮ ಬ್ಲಡ್ನಲ್ಲಿ ಇಲ್ಲ ಬಿಡಿ, ವಾವ್ ವಾಟ್ ಅ ಗ್ರೇಟ್ ಇಂಡಿಯನ್ಸ್ ನಾವು ಅಲ್ವಾ? ನಮಗಾಗಿ ಪ್ರಾಣ ಕೊಟ್ಟವರನ್ನ ಮರೆತೇ ಬಿಡ್ತೀವಿ ಹೋಗಲಿ ಬಿಡಿ, ಇನ್ನಾದರೂ ನಾವು ಬದಲಾಗೋಣ, “ಏ ಮೇರೆ ವತನ್ ಕೇ ಲೋಗೋ ಜರಾ ಯಾದ್ ಕರೊ ಕುರುಬಾನಿ”
#ಜೈ_ಹಿಂದ್ 🇮🇳


Comments