ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏
#ಸ್ವಾತಂತ್ರ್ಯ_ಯಾರಿಂದ_ಬಂತು
#ಲಾಲಾ_ಲಜಪತ್_ರಾಯ್
ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕ್ರಾಂತಿಕಾರಿ ಹೋರಾಟದ ಹಾದಿ ತುಳಿದ ಪ್ರಮುಖರಲ್ಲಿ ಲಾಲಾ ಲಜಪತ್ ರಾಯ್ ಒಬ್ಬರು. ಪಂಜಾಬ್ ಕೇಸರಿ ಎಂದೇ ಖ್ಯಾತರಾಗಿದ್ದ ಇವರು ಬ್ರಿಟಿಷರ ವಿರುದ್ಧ ಹೋರಾಡಲು ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ತಮ್ಮ ಪ್ರಖರ ಮಾತಿನ ಮೂಲಕವೇ ಕ್ರಾಂತಿಯ ಕಿಚ್ಚು ಹಚ್ಚಿದರು.
ಡಿ.ಎಲ್.ಹರೀಶ ಬೆಂಗಳೂರು
ಈ ಭೂಮಿ ಮೇಲೆ ಚೆಲ್ಲಿರುವುದು ನಮ್ಮ ಪೂರ್ವಜರ ರಕ್ತ. ನಾವು ಈ ಭೂಮಿಯನ್ನು ಬಳಸುತ್ತಿದ್ದೇವೆ. ಅದರ ಮೇಲೆ ವಾಸಿಸುತ್ತಿದ್ದೇವೆ. ಆದ್ದರಿಂದ ಈ ಭೂಮಿ ನಮ್ಮದು ಇಲ್ಲವೇ ದೇವರದ್ದು…’ ಹೀಗೆ ತಮ್ಮ ಪ್ರಖರ ಮಾತುಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು ಹಚ್ಚಿದವರು ಅಪ್ರತಿಮ ವೀರ ಲಾಲಾ ಲಜಪತ್ರಾಯ್.
ಲಾಲ್-ಬಾಲ್-ಪಾಲ್ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಅವಲೋಕಿಸಿದಾಗ ಒಟ್ಟಿಗೆ ಕಾಣಿಸಿಕೊಳ್ಳುವ ಹೆಸರುಗಳು. ಲಾಲ್ ಎಂದರೆ ಲಾಲಾ ಲಜಪತರಾಯ್, ಬಾಲ್ ಎಂದರೆ ಬಾಲ ಗಂಗಾಧರ ತಿಲಕ್, ಪಾಲ್ ಎಂದರೆ ಬಿಪಿನ್ ಚಂದ್ರಪಾಲ್. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಹೋರಾಟದ ದಿಕ್ಕನ್ನು ಬದಲಿಸಿದ ಈ ಯುವಕರು ಕ್ರಾಂತಿಕಾರಿ ಹೋರಾಟದಿಂದಷ್ಟೇ ಸ್ವರಾಜ್ಯದ ಕನಸು ನನಸಾಗಲು ಸಾಧ್ಯ ಎಂಬುದನ್ನು ಸಾರಿದರು.
ಇವರಲ್ಲಿ ಪಂಜಾಬ್ ಕೇಸರಿ ಎಂದೇ ಖ್ಯಾತರಾಗಿದ್ದ ಲಾಲಾ ಲಜಪತ್ರಾಯ್ ಅವರದ್ದು ವರ್ಣರಂಜಿತ ಬದುಕು. ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕತೆ, ತಿಲಕರ ರಾಜಕೀಯ ಪ್ರಜ್ಞೆ, ಮಹಾತ್ಮ ಗಾಂಧಿಯವರ ನೈತಿಕತೆಯ ಅಪೂರ್ವ ಸಂಗಮವಾಗಿದ್ದ ಅವರು ಅಸ್ಪೃಶ್ಯತೆ ಆಚರಣೆ ವಿರುದ್ಧ ಸಮರವನ್ನೇ ಸಾರಿದ್ದ ಮಹಾನ್ ಹೋರಾಟಗಾರ.
ಬಾಲ್ಯ: ಪಂಜಾಬ್ನ ಮಧ್ಯಮ ವರ್ಗದ ವ್ಯಾಪಾರಸ್ಥ ಕುಟುಂಬದಲ್ಲಿ 1865ರ ಜನವರಿ 28ರಂದು ಲಜಪತ್ರಾಯ್ ಅವರ ಜನನವಾಯಿತು. ಮುನ್ಷಿ ರಾಧಾಕೃಷ್ಣ ಆಜಾದ್ ಮತ್ತು ಗುಲಾಬ್ದೇವಿ ಇವರ ತಂದೆ ತಾಯಿ. ಬಾಲ್ಯವಿವಾಹ ಪ್ರಚಲಿತವಿದ್ದ ಆ ಕಾಲದಲ್ಲಿ ರಾಧಾದೇವಿ ಅವರನ್ನು ವಿವಾಹವಾದ ಲಜಪತ್ರಾಯ್, 1880ರಲ್ಲಿ ಲೂಧಿಯಾನ ಮಿಷನ್ ಸ್ಕೂಲ್ ಸೇರಿದರು.
ಪ್ರಭಾವ ಬೀರಿದ ಆ ಎರಡು ಪುಸ್ತಕಗಳು: 1880ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗಾಗಿ ಲಜಪತ್ರಾಯ್ ಲಾಹೋರಿಗೆ ಹೋದರು. ಸರ್ಕಾರಿ ವಸತಿಗೃಹದಲ್ಲಿದ್ದ ಅವರಿಗೆ ಸ್ನೇಹಿತ ಲಾಲಾ ಭವಾನಿದಾಸ್ ವಿಜ್ಞಾನದ ಹಲವು ಟಿಪ್ಪಣಿ ನೀಡಿದರು. ಅಲ್ಲಿಯವರೆಗೆ ಅವರು ವಿಜ್ಞಾನದ ಉಪಕರಣವನ್ನೇ ನೋಡಿರಲಿಲ್ಲ. ಮಗ ವಕೀಲನಾಗಬೇಕೆಂದು ಲಾಲಾಜೀ ತಾಯಿ ಬಯಸಿದ್ದರು. ಆದರೆ, ಮೌಲ್ವಿ ಮಹಮದ್ ಹುಸೇನ್ರ
ಎ ಹಿಂದ್ ಪುಸ್ತಕ ಓದಿ ಪ್ರಭಾವಿತರಾದ ಲಜಪತ್ರಾಯ್ ರಜಪೂತರ ಸಾಹಸಗಳನ್ನು ಮೆಚ್ಚಿಕೊಂಡರು. ಜತೆಗೆ ಶಾಲೆಯಲ್ಲಿ ಭಾರತ ಇತಿಹಾಸ ಕುರಿತಾಗಿ ಬೋಧಿಸುತ್ತಿದ್ದ ವಕಿಯತ್-ಎ-ಹಿಂದ್ ಪುಸ್ತಕವೂ ಅಗಾಧ ಪರಿಣಾಮ ಬೀರಿತು. ಲಾಲಾಜೀ ಒಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ವೇಳೆ ಅಧ್ಯಯನ ಮಾಡಿದ ಹಲವು ಗ್ರಂಥಗಳು ಅವರು ದೇಶ ಸೇವೆಯಲ್ಲಿ ತೊಡಗುವಂತೆ ಮಾಡಿದವು. ಲಾಲಾ ಹಂಸರಾಜ್ ಹಾಗೂ ಪಂಡಿತ್ ಗುರುದತ್ ಅವರ ಜತೆಗೂಡಿ ಆರ್ಯ ಸಮಾಜ ಸೇರುವ ಲಾಲಾಜೀ ಆ ನಂತರ ಸುರೇಂದ್ರನಾಥ ಬ್ಯಾನರ್ಜಿ ಇಟಲಿಯ ರಾಷ್ಟ್ರಪ್ರೇಮಿ ಮಂಜನಿ ಕುರಿತು ಮಾಡಿದ ಭಾಷಣ ಓದಿ ರಾಷ್ಟ್ರಸೇವೆಗೆ ಕಂಕಣಬದ್ಧರಾಗಿ ನಿಂತರು.
ಸ್ವದೇಶಿ ಜಪ: 1905ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವಂತೆ ಕೋರಿ ಲಂಡನ್ಗೆ ತೆರಳಿದ್ದ ನಿಯೋಗದಲ್ಲಿದ್ದ ಲಜಪತ್ರಾಯರು ಅವರ ನೆಲದಲ್ಲೇ ಬ್ರಿಟಿಷರ ವಿರುದ್ಧ ಸೆಟೆದು ನಿಂತರು. ಲಾರ್ಡ್ ಕರ್ಜನ್ನರ ನೀತಿಯ ಪ್ರಕಾರ ಭಾರತದಲ್ಲಿ ಆಡಳಿತ ನಡೆಸುವುದು ಮುಖ್ಯವಾಗಿ ಬ್ರಿಟಿಷರಿಗಾಗಿ, ನಂತರದ ಆದ್ಯತೆ ಭಾರತದ ಮಣ್ಣಿನ ಮಕ್ಕಳಿಗೆ. ಭಾರತದಲ್ಲಿನ ಬ್ರಿಟಿಷರ ದುರಾಡಳಿತ ನಿಮ್ಮ ಪ್ರತಿಷ್ಠೆಯನ್ನು ಕುಂದಿಸಬಹುದು ಎಂದು ಆಕ್ರೋಶ ವ್ಯಕ್ತಡಿಸಿದ್ದರು. ನಂತರ ಅಮೆರಿಕಕ್ಕೆ ತೆರಳಿದ್ದ ಅವರು ಅಲ್ಲಿಯೂ ಭಾರತ ಸ್ವಯಂ ಆಡಳಿತವನ್ನು ಬಯಸುತ್ತದೆ ಎಂಬುದನ್ನು ಪ್ರತಿಪಾದಿಸಿದ್ದರು. ‘ಭಾರತಕ್ಕೆ ಹಿಂತಿರುಗಿ ನಮ್ಮ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕು. ಜಗತ್ತಿನ ಇತಿಹಾಸ ರೂಪುಗೊಂಡಿದ್ದೇ ರಕ್ತದಿಂದ. ನಮ್ಮ ಮಾತೃಭೂಮಿ ನಮ್ಮ ರಕ್ತವನ್ನು ಅಪೇಕ್ಷಿಸುತ್ತಾಳೆ. ರಾಷ್ಟ್ರಕ್ಕಾಗಿ ಅದನ್ನು ನೀಡಿ ಅಮರರಾಗೋಣ’ ಎಂದು ಉಗ್ರವಾದ ಭಾಷಣ ಮಾಡಿದ್ದರು.
ಕ್ರಾಂತಿಯ ಕಿಚ್ಚು: 1905ರವರೆಗೆ ಮಂದಗತಿಯಲ್ಲಿ ಸಾಗುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಲಾಲ್-ಬಾಲ್-ಪಾಲ್ ಕ್ರಾಂತಿಯ ಕಿಚ್ಚನ್ನು ಹಚ್ಚಿದರು. ಜನರು ಭಾರತದ ಚರಿತ್ರೆಯಿಂದ ಪ್ರಭಾವಿತರಾಗಿ ರಾಷ್ಟ್ರಪ್ರೇಮ ಮತ್ತು ಆತ್ಮಗೌರವ ಬೆಳೆಸಿಕೊಳ್ಳಬೇಕೆಂದು ಈ ನಾಯಕರು ಕರೆ ನೀಡಿದರು. ಭಾರತದ ರಾಷ್ಟ್ರೀಯ ಚಳವಳಿಯನ್ನು ಹತ್ತಿಕ್ಕುತ್ತಿದ್ದ ಬ್ರಿಟಿಷರ ವಿರುದ್ಧ ತೀವ್ರವಾದದ ಉಗಮವಾಯಿತು. ಈ ಹೋರಾಟದ ಮುಂದಾಳತ್ವ ವಹಿಸಿದವರು ಲಾಲಾ ಲಜಪತ್ರಾಯರು. ‘‘ನಾವು ಒಂದು ಸಾಮ್ರಾಜ್ಯದ ಪ್ರಜೆಗಳು, ಭಿಕ್ಷುಕರಲ್ಲ. ಈ ಪ್ರಜ್ಞೆ ನಮ್ಮಲ್ಲಿರಬೇಕಾದ್ದು ಅಗತ್ಯ. ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪ್ರಜೆಗಳು ನಾವಾಗಬೇಕು. ಒಂದು ದೃಢ ನಿಲುವನ್ನು ತಳೆದು ಅದಕ್ಕೆ ಅಂಟಿಕೊಳ್ಳಬೇಕು’’ ಎಂದು ಎಚ್ಚರಿಸಿದರು. ಇವರ ಪ್ರಖರ ಭಾಷಣಗಳನ್ನು ಕೇಳಿದ ಬ್ರಿಟಿಷರು ಗಡಿಪಾರು ಮಾಡಿದರು. ಇದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಹರತಾಳ ಆಚರಿಸಲಾಯಿತು.
1914ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾಗುವ ಮುನ್ನ ಭಾರತದಲ್ಲಿ ರಾಜಕೀಯ ಸುಧಾರಣೆ ತರಲು ಮಸೂದೆಯೊಂದು ಇಂಗ್ಲೆಂಡ್ ಪಾರ್ಲಿಮೆಂಟ್ನ ಮುಂದೆ ಬರಲಿತ್ತು. ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕಾಂಗ್ರೆಸ್ ನಿಯೋಗದೊಂದಿಗೆ ತೆರಳಿದ್ದ ಲಾಲಾಜೀ ಸೇರಿದಂತೆ ಯಾರಿಗೂ ಆ ಮಸೂದೆ ತೃಪ್ತಿ ತರಲಿಲ್ಲ. ಬ್ರಿಟಿಷರ ವಿರುದ್ಧ ಲಾಲಾಜೀ ಇಂಗ್ಲೆಂಡಿನ ಕೆಲ ಪತ್ರಿಕೆಗಳಿಗೆ ಲೇಖನ ಬರೆದರು. ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಪರ ಹೋರಾಡಿದ್ದ ಭಾರತೀಯ ಸೈನಿಕರು ತಮ್ಮ ಶೌರ್ಯ, ಸಾಹಸಗಳ ಮೂಲಕ ದೇಶದ ಗಡಿ ರಕ್ಷಿಸಿಕೊಳ್ಳಲು ಸಮರ್ಥರು ಎಂಬುದನ್ನು ಮನದಟ್ಟು ಮಾಡಿಸಿದ್ದರು. ಲಾಲಾಜೀಯವರಿಗೆ ಭಾರತಕ್ಕೆ ಹಿಂದಿರುಗಲು ಬ್ರಿಟಿಷರು ಅನುಮತಿ ನೀಡಲಿಲ್ಲ. ಈ ವೇಳೆ ಅಮೆರಿಕ ಪ್ರವಾಸ ಕೈಗೊಂಡು ಭಾರತದ ಸ್ವರಾಜ್ಯ ಚಳವಳಿ ತೀವ್ರಗೊಳಿಸಿದರು. 1919ರಲ್ಲಿ ಭಾರತಕ್ಕೆ ಹಿಂತಿರುಗುವ ವೇಳೆಗೆ ದೇಶದಲ್ಲಿ ಎಲ್ಲೆಡೆ ಗಾಂಧೀಜಿ ಪ್ರಭಾವ ಹಬ್ಬಿತ್ತು. ರೌಲತ್ ಕಾನೂನು, ಜಲಿಯನ್ವಾಲಾಭಾಗ್ ಹತ್ಯಾಕಾಂಡ ಮತ್ತಿತರ ವಿಚಾರಗಳು ರಾಷ್ಟ್ರಕ್ಕೆ ಒಂದು ಹೊಸ ಆಯಾಮ ನೀಡಿದ್ದವು. ಅಮೆರಿಕ, ಇಂಗ್ಲೆಂಡ್, ಜಪಾನ್ನಲ್ಲಿ ಭಾರತದ ಅನಧಿಕೃತ ರಾಯಭಾರಿಯಂತೆ ಕೆಲಸ ಮಾಡಿದ ಲಾಲಾಜೀ ಭಾರತದ ಸ್ವಾತಂತ್ರ್ಯ ಚಳವಳಿಗೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಸಹಾನುಭೂತಿ ದೊರಕುವಂತೆ ಮಾಡಿದರು.
ಕಾಂಗ್ರೆಸ್ನ ಅನೇಕ ಧೋರಣೆ ಸರಿಬರದ ಕಾರಣ ಲಾಲಾಜೀ 1926ರಲ್ಲಿ ಮದನಮೋಹನ ಮಾಳವೀಯ ಅವರೊಂದಿಗೆ ಸೇರಿ ಸ್ವತಂತ್ರ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. ಈ ಪಕ್ಷಕ್ಕೆ ಆಧುನಿಕ ದೃಷ್ಟಿಕೋನವಿತ್ತು.
ಶಿಕ್ಷಣ ಕ್ಷೇತ್ರದ ಸುಧಾರಣೆ
ಅನೇಕ ಸಮಸ್ಯೆ ಎದುರಿಸುತ್ತಿದ್ದ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನಿಂತ ಲಾಲಾಜೀ ಒಬ್ಬ ಶ್ರೇಷ್ಠ ಸಾಮಾಜಿಕ ಚಿಂತಕ. ಶೈಕ್ಷಣಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿದವರಲ್ಲಿ ಇವರು ಮೊದಲಿಗರು. ತಮ್ಮ ಪ್ರಖರ ಬರವಣಿಗೆ ಮೂಲಕ ದೇಶದ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಇವರು ಪ್ರಕಟಿಸಿದ ಯಂಗ್ ಇಂಡಿಯಾ, ಇಂಗ್ಲೆಂಡ್ಸ್ ಡೆಟ್ಸ್ ಟು ಇಂಡಿಯಾ, ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯಾ, ದಿ ಪ್ರಾಬ್ಲಮ್ ಆಫ್ ನ್ಯಾಷನಲ್ ಎಜುಕೇಷನ್ ಇನ್ ಇಂಡಿಯಾ ಹೀಗೆ ಹಲವು ಕೃತಿಗಳ ಮೂಲಕ ದೇಶದ ಸಮಸ್ಯೆಗಳನ್ನು ತೆರೆದಿಟ್ಟರು.
ಅಸ್ಪೃಶ್ಯತೆ ವಿರುದ್ಧ ದನಿ
ದೇಶದಲ್ಲಿ ವ್ಯಾಪಕವಾಗಿದ್ದ ಜಾತಿಭೇದ ಹಾಗೂ ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದ್ದ ಲಾಲಾಜೀ ಸಮಾಜದ ಒಂದು ವರ್ಗ ಇತರರೊಡನೆ ಬೆರೆಯಲು ಬಿಡದಿರುವುದು ನಾಚಿಕೆಗೇಡಿನ ಸಂಗತಿ. ಶೋಷಿತ ವರ್ಗದವರನ್ನು ಸಮಾನವಾಗಿ ಕಾಣದಿದ್ದರೆ ಅವರು ಮತಾಂತರಗೊಳ್ಳುವುದು ಖಚಿತ. ಎಲ್ಲಿಯವರೆಗೆ ಅಸ್ಪೃಶ್ಯತೆ ಈ ದೇಶದಲ್ಲಿ ಮುಂದುವರಿಯುವುದೋ ಅಲ್ಲಿಯವರೆಗೆ ಹಿಂದು ಸಮಾಜ ಉದ್ಧಾರವಾಗದು ಎಂದು ಪ್ರತಿಪಾದಿಸುತ್ತಿದ್ದರು. ಕೋಲ್ಕತ್ತಾದಲ್ಲಿ ನಡೆದಿದ್ದ ಅಖಿಲ ಭಾರತ ಹಿಂದು ಮಹಾಸಭಾದ ಎಂಟನೇ ಅಧಿವೇಶನದ ಅಧ್ಯಕ್ಷತೆಯನ್ನು ಲಜಪತ್ರಾಯ್ ವಹಿಸಿದ್ದರು. ಇವರ ಒತ್ತಾಸೆಯಿಂದಾಗಿ ಮಹಾಸಭಾ ಒಂದು ಗೊತ್ತುವಳಿಯನ್ನು ಅಂಗೀಕರಿಸುವ ಮೂಲಕ ಹಿಂದುಗಳ ಏಳಿಗೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಪ್ರಕಟಿಸಿತು. ಹಿಂದುಗಳ ಜೀವನದಲ್ಲೇ ಹಾಸುಹೊಕ್ಕಾಗಿದ್ದ ಜಾತಿ ಸಮಸ್ಯೆ ಹೋಗಲಾಡಿಸುವ ನಿರ್ಣಯ ಕೈಗೊಂಡಿದ್ದು, ಆಗಿನ ಕಾಲಕ್ಕೆ ಒಂದು ಕ್ರಾಂತಿಕಾರಿ ನಿರ್ಧಾರವೇ ಸರಿ. ಹಿಂದು ವಿವಾಹ ನೀತಿ ಬಗ್ಗೆ ಉದಾರತೆ ಹೊಂದಿದ್ದ ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದ್ದರು.
ತಾಯಿ ಕಲಿಸಿದ ನೀತಿಪಾಠ
ಒಮ್ಮೆ ಕೆಲವು ಮಕ್ಕಳು ಇಸ್ಪೀಟ್ ಆಡುವುದನ್ನು ನೋಡಿ ಲಾಲಾ ಲಜಪತ್ರಾಯರು ಅವರೊಂದಿಗೆ ಆಟವಾಡಿದರಂತೆ. ಅಂದು ಗೆದ್ದ ಎಂಟಾಣೆ ಹಣವನ್ನು ತಾಯಿ ಬಳಿ ತೆಗೆದುಕೊಂಡು ಹೋದಾಗ ವಿಷಯ ತಿಳಿದ ತಾಯಿ ಅಂದು ಮಗನಿಗೆ ಊಟ ಹಾಕದೆ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲ ಎಂದು ಮಗ ಆಶ್ವಾಸನೆ ಕೊಟ್ಟಾಗಲೇ ಅವರಿಗೆ ಕೊಠಡಿಯಿಂದ ಮುಕ್ತಿ ದೊರಕಿದ್ದು. ಮತ್ತೆಂದೂ ಅಂತಹ ಆಟಕ್ಕೆ ಅವರು ಹೋಗಲೇ ಇಲ್ಲ.
ಸೈಮನ್ ಆಯೋಗವೇ ಲಾಲಾಜೀ ಸಾವಿಗೆ ಕಾರಣ
1927ರಲ್ಲಿ ಭಾರತದಲ್ಲಿ ಸಾಂವಿಧಾನಿಕ ಸುಧಾರಣೆ ತರುವುದಕ್ಕಾಗಿ ಸೈಮನ್ ಆಯೋಗವನ್ನು ರಚಿಸಿತು. ಈ ಆಯೋಗದ ಎಲ್ಲ ಸದಸ್ಯರು ಬ್ರಿಟಿಷರೇ ಆಗಿದ್ದರು. ಈ ಆಯೋಗವು ಸರ್ಕಾರದ ಕಾರ್ಯವೈಖರಿ, ಶಿಕ್ಷಣದ ಪ್ರಗತಿ, ಬ್ರಿಟಿಷ್ ಭಾರತದಲ್ಲಿ ಭಾರತೀಯರ ಬೆಳವಣಿಗೆ ಇವುಗಳನ್ನು ಪರಿಶೀಲಿಸಬೇಕಿತ್ತು, ಇದಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರೆ ಅವರು ತಮ್ಮದೇ ಸರ್ಕಾರ ರಚಿಸಿಕೊಳ್ಳಲು ಎಷ್ಟು ಸಮರ್ಥರಿದ್ದಾರೆ ಎಂಬುದನ್ನು ವರದಿ ಮಾಡಬೇಕಿತ್ತು. ಆಯೋಗ ಬ್ರಿಟಿಷ್ ಸಂಸದರಿಂದಲೇ ತುಂಬಿದ್ದರಿಂದ ಇದು ಭಾರತದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡಲಿದೆ ಎಂದು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಇದನ್ನು ವಿರೋಧಿಸಿ ಮಾಡುತ್ತಿದ್ದ ಹೋರಾಟವೊಂದರಲ್ಲಿ ಲಾಲಾಜೀಯವರನ್ನು ಗುರಿಯಾಗಿಸಿಕೊಂಡೇ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಆದರೂ ಲಾಲಾಜೀ 15000 ಜನರನ್ನೊಳಗೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಲಾಠಿ ಏಟು ತಿಂದು ಹಾಸಿಗೆ ಹಿಡಿದು ಲಾಲಾಜೀಯವರ ಆರೋಗ್ಯ ದಿನೇದಿನೆ ಕ್ಷೀಣಿಸತೊಡಗಿತು. 1928ರ ನವೆಂಬರ್ 17ರಂದು ಪಂಜಾಬ್ನ ಕೇಸರಿ ಅಸ್ತಂಗತವಾಯಿತು. ಸೈಮನ್ ಆಯೋಗವೇ ಅವರ ಸಾವಿಗೆ ಪರೋಕ್ಷವಾಗಿ ಕಾರಣವಾಯಿತು.
ಜೈ ಹಿಂದ್ 🇮🇳

Comments