CRPF ಸ್ಥಾಪನಾ ದಿನ 🇮🇳💪💐

ದೇಶದ ರಕ್ಷಣೆಗಾಗಿ, ಭಾರತದ ಅಖಂಡತೆಯನ್ನ ಕಾಪಾಡುತ್ತ, ಸಂರಕ್ಷಿಸುತ್ತ ದಿನದ 24 ಗಂಟೆಗಳ ಕಾಲ ಸದಾ ರಾಷ್ಟ್ರ ಕಾಯುವ ಧೀರ #CRPF ಸ್ಥಾಪನಾ ದಿನದ ಹಾರ್ದಿಕ ಶುಭಾಷಯಗಳು..💪🇮🇳💐

ಹಲವರು ತಮ್ಮ ಪ್ರಾಣವನ್ನು ಬಲಿದಾನ ಕೊಟ್ಟು ಹಲವರು ತನ್ಮ ಆಯುಷ್ಯ, ತಾರುಣ್ಯವನ್ನೇ ಬಲಿಕೊಟ್ಟು ದೇಶದ ರಕ್ಷಣೆಯನ್ನ ಮಾಡುತ್ತಿದ್ದಾರೆ. ಹೌದು ನಾವು ಮಾತನಾಡುತ್ತಿರೋದು ಕೇಂದ್ರ ರಿಸರ್ವ್ ಪೋಲಿಸ್ ಫೋರ್ಸ್(CRPF) ನ ಬಗ್ಗೆ. CRPF ಭಾರತದ ಅತಿದೊಡ್ಡ ಸಶಸ್ತ್ರ ಬಲಗಳಲ್ಲಿ‌ ಒಂದಾಗಿದೆ. ಇದು ಭಾರತ ಸರ್ಕಾರದ ಗೃಹ ಖಾತೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಸಿಆರ್‌ಪಿಎಫ್ ನ್ನ ಬ್ರಿಟಿಷ್ ಕಾಲಖಂಡದಲ್ಲಿ ಜುಲೈ 27, 1939 ರಲ್ಲಿ CRP ಎಂದು ಅಂದರೆ ಕ್ರೌಮ್ ರೆಪ್ರೆಸೆಂಟೇಟಿವ್ ಪೋಲಿಸ್ ಎಂಬ ಹೆಸರಿನಿಂದ ಹುಟ್ಟು ಹಾಕಲಾಗಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ ಎರಡು ವರ್ಷಗಳ ನಂತರ ಅಂದರೆ 1949 ರಲ್ಲಿ ದೇಶದ ಮೊದಲ ಗೃಹಮಂತ್ರಿಗಳಾಗಿದ್ದ #ಸರ್ದಾರ್_ವಲ್ಲಭಭಾಯ್_ಪಟೇಲರು CRP ಯನ್ನು CRPF (Central Reserve Police Force) ಎಂದು ಬದಲಾಯಿಸಿದ್ದರು.‌ ಪಟೇಲರು ಇದರ ಹೆಸರನ್ನಷ್ಟೇ ಬದಲಿಸಿದ್ದರು ಹೊರತು ಈ ಫೋರ್ಸ್‌ನ ಕಾರ್ಯಶೈಲಿಯನ್ನ ಬದಲಿಸಲಿಲ್ಲ. ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ಸ್ವಾತಂತ್ರ್ಯವಾದ ಬಳಿಕ ಕೆಂಪು‌ಮುಸುಡಿಯ ಬ್ರಿಟೀಷರ ದಾಸ್ಯತೆಯನ್ನ ಅಳಿಸಿ ಹಾಕಲು ಪಟೇಲರು CRP ಎಂಬ ಹೆಸರನ್ನ ಬದಲಿಸಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್(CRPF) ಎಂದು ಬದಲಿಸಿದ್ದರು. CRP ಯನ್ನ ಬ್ರಿಟಿಷರು 1939 ರಲ್ಲಿ ಸ್ಥಾಪಿಸಿದ್ದು ಬ್ರಿಷ್ ರಾಜ್ ನಲ್ಲಿ ಮಧ್ಯ ಪ್ರದೇಶದ ‘ನೀಮಚ್’ ನಲ್ಲಿ ಉತ್ತರಭಾರತದ ಸೇನೆಯ ಅಶ್ವಾರೂಢ ಸೇನೆಯ ಪ್ರಧಾನ ಕಛೇರಿಯನ್ನ ಸ್ಥಾಪಿಸಿದ್ದರು. ಭಾರತೀಯ ಸೇನೆಯ ಭಾಗವಾಗಿರುವ ಈ ಸಶಸ್ತ್ರ ಪಡೆಗೆ ಇಂದು ಅಂದರೆ ಜುಲೈ 27 ಒಂದು ವಿಶೇಷವಾದ ದಿನವಾಗಿದ್ದು ಇಂದಿನ ದಿನವನ್ನ CRPF ಸ್ಥಾಪನಾ ದಿನವೆಂದು ಆಚರಿಸಲಾಗುತ್ತದೆ. ಈ ಪಡೆಯ ಎರಡನೆಯ ಬಟಾಲಿಯನ್‌ ನನ್ನು ಸ್ವಾತಂತ್ರ್ಯ ಸಿಕ್ಕ ಮರುಕ್ಷಣದಲ್ಲೇ ಸ್ಥಾಪಿಸಲಾಗಿತ್ತು ಹಾಗೂ ಮೂರನೇ ಬಟಾಲಿಯನ್ನೂ 1956 ರಲ್ಲಿ ಮಾಡಲಾಗಿತ್ತು...

ಜೈ ಹಿಂದ್ 🇮🇳

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏