ಉದಮ್ ಸಿಂಗ್ ಹುತಾತ್ಮ ರಾದ ದಿನ 😔🙏

#ಉಧಮ್_ಸಿಂಗ್ 🙏🙏

ಜಲಿಯನ್ ವಾಲಾಬಾಗ್' ಹತ್ಯಾಕಾ೦ಡಕ್ಕೆ ಪ್ರತೀಕಾರವಾಗಿ, ಆಗಿನ ಪ೦ಜಾಬ್'ನ ಗವರ್ನರ್ #ಮೈಕೆಲ್_ಡ್ವಾಯರ್'ನನ್ನು ಹತ್ಯೆಗೈದ ಭಾರತೀಯ ಕ್ರಾ೦ತಿಕಾರಿ #ಉಧಮ್_ಸಿಂಗ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ. 😔😔😔

ಭಾರತ ಮಾತೆಯ ವೀರಪುತ್ರ, ಕ್ರಾಂತಿಯ ಕಿಡಿಗೆ ನಮ್ಮ ಅನಂತಕೋಟಿ ಪ್ರಣಾಮಗಳು....
#ಜಲಿಯನ್_ವಾಲಾಬಾಗ್ ಹತ್ಯಾಕಾಂಡದಲ್ಲಿ ಅವತ್ತು ಪ್ರಾಣಬಿಟ್ಟಿದ್ದು 1200 ಕ್ಕೂ ಹೆಚ್ಚು ದೇಶ ಭಕ್ತರು.ಇಷ್ಟೊಂದು ದೊಡ್ಡ ಮಟ್ಟದ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಬೇರೆ ಯಾವುದೂ ಇಲ್ಲ…ಇದಕ್ಕೆ ಕಾರಣ ಹತ್ಯಾಕಾಂಡದ ರೂವಾರಿ ಡ್ವಯರ್....
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ನಿಜಕ್ಕೂ ಸೇಡಿನ ಜ್ವಾಲೆ ದಹಿಸುತ್ತಿದ್ದದ್ದು ಅವನೊಬ್ಬನಲ್ಲಿ ಮಾತ್ರ. ಆತನ ಹೆಸರು ಉದಮ್ ಸಿಂಗ್. ಹತ್ಯಾಕಾಂಡವನ್ನ ಕಣ್ಣಾರೆ ನೋಡಿದ್ದ ಮತ್ತು ಬ್ರಿಟೀಷರ ಗುಂಡುಗಳಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಳ್ಳಲು ಪಣ ತೊಟ್ಟಿದ್ದ.
ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಜನರಕ್ ಡ್ವಯರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಗುಂಡಿಗೆ ಗುಂಡಿನಿಂದಲೇ ಉತ್ತರಿಸಿ ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್.
ಉದಮ್ ಸಿಂಗ್ ಹೇಳಿದ ಕೆಚ್ಚದೆಯ ಮಾತುಗಳು, ” ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ದ್ವೇಷ. ಆತನ ಸಾವನ್ನ ಅವನೇ ಬರಮಾಡಿಕೊಂಡ. ನನ್ನ ಜನಗಳ ರಕ್ತಕುಡಿದವನನ್ನ ನಾನು ಅಳಿಸಿ ಹಾಕಿದೆ. ಇಪ್ಪತ್ತೊಂದು ವರ್ಷಗಳಿಂದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನನಗೀಗ ಆನಂದವಾಗಿದೆ, ನಾನು ಬ್ರಿಟೀಷರಿಂದ ಸಾಯುತ್ತಿರುವ ಭಾರತೀಯರನ್ನ ನೋಡಿದ್ದೇನೆ. ಇದು ನನ್ನ ಕರ್ತವ್ಯ ತಾಯ್ನಾಡಿಗಾಗಿ ನಾನು ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ.” ಹೀಗೆ ದಿಟ್ಟತನದ ಮಾತುಗಳನ್ನಾಡಿ ಪ್ರತೀಕಾರ ತೆಗೆದುಕೊಂಡ ಅವರನ್ನು ಮೂರು ತಿಂಗಳಲ್ಲೇ ಡಯರ್ ಹತ್ಯೆ ಆರೋಪದ ಮೇಲೆ ನೇಣಿಗೇರಿಸಲಾಯಿತು.
ಇಂತಹ ಪುತ್ರರನ್ನು ಪಡೆದ ಭಾರತ ಮಾತೆಯೇ ಧನ್ಯ..🙏🏼

#ಅಮರ್_ರಹೇ

#ಜೈ_ಹಿಂದ್ 🇮🇳

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏