ಕಾರ್ಗಿಲ್ ವಿಜಯ ದಿವಸ್ 🇮🇳💪
#ಕಾರ್ಗಿಲ್_ವಿಜಯ_ದಿವಸ😍💪💐
ಕಾರ್ಗಿಲ್ ಯುದ್ಧದ ಗೆಲುವಿಗೆ ಇಂದು 20 ವರ್ಷ. ಪಾಕಿಸ್ತಾನದ 'ಆಪರೇಷನ್ ಬದ್ರ್'ಗೆ ಪ್ರತಿಯಾಗಿ ಭಾರತ ಕೈಗೊಂಡ 'ಆಪರೇಷನ್ ವಿಜಯ್' ಭಾರತೀಯ ನರನಾಡಿಗಳಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಯುದ್ಧ. ಅದು 1999ರ ಮೇ ತಿಂಗಳು. ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ಪೋಖರಣ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು. ಆ ಪರೀಕ್ಷೆಯ ಔಚಿತ್ಯದ ಬಗ್ಗೆ ಭಾರತದಲ್ಲಿಯೇ ಪ್ರಶ್ನೆಗಳು ಏಳತೊಡಗಿದ್ದವು. ದೇಶದ ಭದ್ರತೆಯ ನೆಪದಲ್ಲಿ ಅನವಶ್ಯಕ ಖರ್ಚು ಎಂಬ ದುಮ್ಮಾನ ಮುಂದುವರಿದೇ ಇತ್ತು. ಇದೇ ವೇಳೆಯಲ್ಲೇ, ಅಂದರೆ 1998-99ರ ಚಳಿಗಾಲದಲ್ಲಿ ಪಾಕಿಸ್ತಾನ ತನ್ನ ಸೇನೆಯ ಕೆಲವು ತುಕಡಿಗಳನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಕ್ಕೆ ಸದ್ದಿಲ್ಲದೇ ಸಾಗಿಸತೊಡಗಿತ್ತು. 'ಆಪರೇಷನ್ ಬದ್ರ್' ಎಂಬ ಗುಪ್ತನಾಮದಲ್ಲಿ ನಡೆದ ಆ ಕಾರ್ಯಾಚರಣೆಯ ಮುಖ್ಯ ಗುರಿ ಕಾಶ್ಮೀರ ಮತ್ತು ಲಡಾಖ್ ನಡುವಿನ ಕೊಂಡಿಯನ್ನು ಒಡೆದು, ಭಾರತ ಪಡೆಗಳು ಸಿಯಾಚಿನ್ ಗ್ಲೇಸಿಯರ್‌ನಿಂದ ಹಿಂದೆ ಸರಿಯುವಂತೆ ಮಾಡುವುದಾಗಿತ್ತು. ಇತ್ತ ಪಾಕಿಸ್ತಾನಿ ಸೇನೆ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆಯೇ ಭಾರತೀಯರೆಲ್ಲ ಬೆಚ್ಚಿ ಕುಳಿತರು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಭಾರತದ ಯುವ ಸೇನೆ ಯುದ್ಧವೊಂದಕ್ಕೆ ಮೈಕೊಡವಿ ಎದ್ದುನಿಂತಿತು. ಪರ್ವತಮಯ ಪ್ರದೇಶದಲ್ಲಿ, ಅತಿ ಎತ್ತರದಲ್ಲಿ ನಡೆಯಲಿದ್ದ ಈ ಸಮರಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುವುದೇ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಆಗಲೇ ರೂಪುಗೊಂಡದ್ದು ಆಪರೇಷನ್ ವಿಜಯ್! ಈ ಎಲ್ಲಾ ಸಮಸ್ಯೆಗಳ ನಡುವೆಯೂ ಆಪರೇಷನ್ ವಿಜಯ್ ಹೆಸರಿನಲ್ಲಿ ಭಾರತೀಯ ಸೇನೆ ಅರವತ್ತಕ್ಕೂ ಹೆಚ್ಚು ದಿನಗಳ ಕಾಲ ನಡೆಸಿದ ಈ ಹೋರಾಟ ಜುಲೈ 26, 1999ರಂದು ಅಂತ್ಯವಾಯಿತು. ಪಾಕಿಸ್ತಾನಿ ಸೇನೆ ವಶಪಡಿಸಿಕೊಂಡಿದ್ದ ಭಾಗಗಳೆಲ್ಲ ಮತ್ತೆ ಭಾರತದ ತೆಕ್ಕೆಯಲ್ಲಿ ನಗುತ್ತಾ ನಿಂತಿದ್ದವು. ಭಾರತದ 527 ಸೈನಿಕರು ಈ ಯುದ್ಧದಲ್ಲಿ ಜೀವ ತ್ಯಾಗ ಮಾಡಿದರು. ಈ ವೀರರ ಸ್ಮರಣೆಯಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ...
#ಅಮರ್_ರಹೇ
ಜೈ ಹಿಂದ್ 🇮🇳💪

Comments