ಮಹಾನ್ ಕ್ರಾಂತಿಕಾರಿ ಬಟುಕೇಶ್ವರ ದತ್ತ ಪುಣ್ಯತಿಥಿ.


ಮಹಾನ್ ಕ್ರಾಂತಿಕಾರಿ #ಬಟುಕೇಶ್ವರ_ದತ್ತ ಪುಣ್ಯತಿಥಿ😔🙏

ಭಾರತ ಬ್ರಿಟಿಷರ ಅಧೀನದಲ್ಲಿ ಸಿಲುಕಿದ್ದ ಸಮಯದಲ್ಲಿ ಅದೆಷ್ಟೋ ಮಾರಣಹೋಮಗಳು ನಡೆದುಹೋಗಿದ್ದವೋ ಗೊತ್ತಿಲ್ಲ. ಆದರೆ ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲೆಡೆ ಹಬ್ಬಿಸಿದಂತಹ ಅಸಂಖ್ಯಾತ ಕ್ರಾಂತಿಕಾರಿಗಳ ಹೋರಾಟದಿಂದಾಗಿ ದೇಶ ಇಂದು ಸ್ವಾತಂತ್ರ್ಯದ ಬೆಳಕನ್ನು ಕಂಡಿರುವುದು ಮಾತ್ರ ಅಕ್ಷರಶಃ ನಿಜ… ಆದರೆ ಅಂಡಮಾನಿನಲ್ಲಿನ ಸೆರೆಮನೆಗಳ ತೀಕ್ಷ್ಣ ಕ್ರೌರ್ಯವನ್ನು ಅನುಭವಿಸಿದರು ಕೂಡ ದೇಶ ಸ್ವತಂತ್ರವಾಗುವವರೆಗೆ ಹೋರಾಟವನ್ನು ನಿಲ್ಲಿಸದ ಈ ವೀರ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ್‍ಗುರು ಒಡನಾಡಿಗಳಾಗಿ ಮೆರೆದಿರುವಂತಹ ಕ್ರಾಂತಿಕಾರಿಗಳಲ್ಲೊಬ್ಬರು.ಅದೆಷ್ಟೋ ಕ್ರಾಂತಿಕಾರಿಗಳು ಇತಿಹಾಸದ ಪುಟಗಳಲ್ಲಿ ನಾಪತ್ತೆಯಾಗಿದ್ದಾರೋ ಗೊತ್ತಿಲ್ಲ. ಆದರೆ, ವೀರ ಯೋಧನೆಂದೆನಿಸಿರುವ ವೀರ ಸಾರ್ವಕರ್ ಅವರಿಂದಲೇ ಪ್ರೇರಿತನಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ ಭಗತ್ ಸಿಂಗ್, ಮದನ್ ಲಾಲ್ ಧಿಂಗ್ರ, ಅಜಾದ್ ಮೊದಲಾದವರ ಸಾಲಿನಲ್ಲಿ ಸೇರಿಕೊಂಡಿರುವ ಈ ವೀರ ಬೇರಾರು ಅಲ್ಲ. ಭಗತ್ ಸಿಂಗ್ ರ ಜೊತೆಗೂಡಿ ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್ತ. ಸ್ವತಂತ್ರ ಪೂರ್ವದಲ್ಲಿ ಯುವಕನೋರ್ವ ಅಂಡಮಾನಿನ ಸೆರೆಮನೆಯಲ್ಲಿದ್ದುಕೊಂಡು ಸೆರೆಮನೆಯ ಕಿರುಕುಳವನ್ನೆಲ್ಲ ಸಹಿಸಿ, ಅಲ್ಲಿನ ವ್ಯವಸ್ಥೆಯ ವಿರುದ್ದ ಹೋರಾಡುತ್ತಾ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಬಿಎ ಪರೀಕ್ಷೆಗೆ ಖಾಸಗಿಯಾಗಿ ಕುಳಿತು ತೇರ್ಗಡೆಯಾಗುತ್ತಾನೆ. ಅಂದಿನ ಕಾಲದಲ್ಲಿ ಅಂಡಮಾನಿನ ಸೆರೆಮನೆಯೆಂದರೆ ಅಪ್ರತಿಮ ಭಾರತೀಯ ದೇಶಭಕ್ತರಿಗೆ ಆಂಗ್ಲರು ಕೊಡುತ್ತಿದ್ದ ಅತಿ ದೊಡ್ಡ ಬಹುಮಾನವೆಂದರೇ ತಪ್ಪಾಗಲಾರದು. ಸೆರೆಮನೆಯಲ್ಲಿದ್ದುಕೊಂಡೆ ಬಿಎ ಪರೀಕ್ಷೆ ಪಾಸಾದ ಭಾರತ ಮಾತೆಯ ವೀರ ಪುತ್ರನಾದ ಕ್ರಾಂತಿಕಾರಿ ದೇಶಭಕ್ತ ಬಟುಕೇಶ್ವರ ದತ್ತ ಅಪ್ರತಿಮ ವೀರ ಎಂದೆನಿಸಿಕೊಂಡಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ ದತ್ತ, ಭಗತ್ ಸಿಂಗ್ ರ ಜೊತೆಗೂಡಿ ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದಂತಹ ವೀರನಾಗಿದ್ದಾರೆ. ಅಂಡಮಾನಿನಲ್ಲಿ ಸೆರೆಮನೆಗಳ ತೀಕ್ಷ್ಣ ಕ್ರೌರ್ಯವನ್ನು ಅನುಭವಿಸಿದರು ಕೂಡ ದೇಶ ಸ್ವತಂತ್ರವಾಗುವವರೆಗೆ ಅವರ ಹೋರಾಟ ನಿಲ್ಲಲಿಲ್ಲ. ಸ್ವತಂತ್ರವಾದ ಮೇಲೆ ತಮ್ಮ ಹೋರಾಟದಿಂದ ವೈಯಕ್ತಿಕ ಲಾಭ ಪಡೆಯಲು ಅವರು ಇಷ್ಟ ಪಡದಂತಹ ವೀರನಾಗಿ ಮೆರೆದಿರುವುದೇ ಹೆಮ್ಮೆಯ ವಿಚಾರ. ಹೌದು… ಗೋಷ್ಟಾ ಬಿಹಾರಿ ದತ್ತ ಹಾಗೂ ಕಮಲ ಕಾಮಿನಿಯವರ ಅವರ ಐದನೇ ಮಗನಾಗಿ ಪೂರ್ಬಾ ಬರ್ಧಮಾನ್ ನ (ಈಗ ಪಶ್ಚಿಮ ಬಂಗಾಳ ಎಂದು ಕರೆಯಲ್ಪಡುತ್ತಿದೆ) ಓರಿ ಗ್ರಾಮದಲ್ಲಿ 1910ರ ನವೆಂಬರ್ 18 ರಂದು ಜನಿಸಿದ ಬಟುಕೇಶ್ವರ ದತ್ತ ತನ್ನ ಬಾಲ್ಯದಲ್ಲಿಯೇ ದೇಶಭಕ್ತರ, ಐತಿಹಾಸಿಕ ಹಾಗೂ ಪೌರಾಣಿಕ ಮಹಾಪುರುಷರ ಜೀವನ ಚರಿತ್ರೆಯ ಬಗ್ಗೆ ಮಾಡಿದ ಅಧ್ಯಯನವೂ ಅವರ ಮೇಲೆ ಭಾರಿ ಪ್ರಭಾವ ಬೀರಿತ್ತು. ಕಾನ್ಪುರದ ಮಾಲ್ ರೋಡ್ ನಲ್ಲಿ ಆಂಗ್ಲರು ವಾಸಿಸುತ್ತಿದ್ದರು ಹಾಗಾಗಿ ಆ ರಸ್ತೆಯಲ್ಲಿ ಭಾರತೀಯರಿಗೆ ಸಂಚಾರ ನಿಶಿದ್ದವಾಗಿತ್ತು. ಯಾರಾದರೂ ಭಾರತೀಯರು ಅಪ್ಪಿತಪ್ಪಿ ಅತ್ತ ಕಡೆ ಸಂಚರಿಸಿದರು ಅವರಿಗೆ ತೀವ್ರ ಸ್ವರೂಪದ ಶಿಕ್ಷೆ ಕಾದಿತ್ತು. ಒಮ್ಮೆ ತರುಣರಾಗಿದ್ದ ಬಟುಕೇಶ್ವರ ಅವರು ನಮ್ಮ ದೇಶದಲ್ಲಿ ಸಂಚರಿಸಲು ನಮಗೆ ಸ್ವತಂತ್ರವಿಲ್ಲವೇ ಎಂದು ಪ್ರಶ್ನಿಸಿ ಮಾಲ್ ರಸ್ತೆಗೆ ಸಂಚಾರಕ್ಕೆಂದು ಇಳಿದೇ ಬಿಟ್ಟರು. ಇದನ್ನು ಕಂಡು ಕೆಂಡಮಂಡಲವಾದ ಕೆಂಪುಮೂತಿಯ ಆಂಗ್ಲರು ಮನಬಂದಂತೆ ಥಳಿಸಿದರು. ಬಟುಕೇಶ್ವರನ ಮೇಲೆ ಬಿದ್ದ ಆಂಗ್ಲರ ಏಟುಗಳು ಮುಂದೆ ಆಂಗ್ಲರ ಪಾಲಿಗೆ ಕಂಟಕವಾಗುತ್ತವೆ ಎಂದು ಯಾರು ಸಹ ಊಹಿಸಿರಲಿಲ್ಲ. ಆದರೆ ಅಂದೇ ಹದಿಮೂರರ ಹರೆಯನಾಗಿದ್ದ ಬಟುಕೇಶ್ವರರು ಈ ಆಂಗ್ಲರನ್ನು ಭಾರತದಿಂದ ಕಿತ್ತೋಗೆಯಬೇಕೆಂದು ನಿರ್ಧರಿಸಿದರು.ದೇಶದಲ್ಲಿ ಮಂದಗಾಮಿಗಳ ಬಗ್ಗೆ ತೀವ್ರ ಅಸಮಾಧಾನವಿದ್ದ ಕ್ರಾಂತಿಕಾರಿ ಯುವಕರೆಲ್ಲ ಸೇರಿ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಕಟ್ಟಿ ಗುಪ್ತವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಸಂಘಕ್ಕೆ ಚಂದ್ರಶೇಖರ್ ಆಜಾದ್ ಹಾಗೂ ಭಗತ್ ಸಿಂಗ್ ಅವರೇ ನಾಯಕರುಗಳು. ಮೊದಲೇ ಮನದಲ್ಲಿ ಆಂಗ್ಲರು ಹೊತ್ತಿಸಿದ್ದ ಕಿಚ್ಚು ಬೃಹದಾಕಾರವಾಗಿ ಬೆಳೆದು ಆಂಗ್ಲರನ್ನು ಸುಟ್ಟು ಹಾಕುವಂತೆ ಬಟುಕೇಶ್ವರರನ್ನು ಪ್ರೇರೇಪಿಸಿತು. ಹಾಗಾಗಿ ಅವರು ಸಹ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ನ ಸದಸ್ಯರಾದರು.ಸ್ಯಾಂಡರ್ಸ್ ಎನ್ನುವ ಅಧಿಕಾರಿಯ ಹತ್ಯೆಯಿಂದ ಜಾಗೃತರಾದ ಆಂಗ್ಲರು, ಈ ಹತ್ಯೆಯ ಹಿಂದೆಯಿದ್ದ ಕ್ರಾಂತಿಕಾರಿಗಳನ್ನು ಬಂಧಿಸಿಬಿಡಬೇಕೆಂದು ಪಣ ತೊಟ್ಟಿದ್ದರು. ಹಾಗಾಗಿ ಪೆÇಲೀಸರಿಗೆ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಈ ಕೃತ್ಯದಲ್ಲಿ ಭಾಗಿಯಾಗಿದೆಂದು ಅನುಮಾನ ಬರತೊಡಗಿತು. ಆಗ ಆಂಗ್ಲ ಸರ್ಕಾರವು ಜನರಿಗೆ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ಬಗ್ಗೆ ಸುಳ್ಳು ಹೇಳುತ್ತಾ ಜನರಿಗೆ ಈ ಸಂಘಟನೆಯವರನ್ನು ದೇಶದ್ರೋಹಿಗಳೆಂದು ಸಾರತೊಡಗಿತು. ಆಗ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್ ತಾವು ಆಂಗ್ಲರ ವಿರುದ್ದ ದೇಶದ ಸ್ವತಂತ್ರಕ್ಕಾಗಿ ಹೋರಾಡುವ ದೇಶ ಭಕ್ತರೆಂದು ತಮ್ಮ ಯೋಜನೆಗಳನ್ನು ಜನಕ್ಕೆ ತಿಳಿಸಬೇಕೆಂದು ನಿರ್ಧರಿಸಿದರು.ಕೇಂದ್ರ ವಿಧಾನಸಭೆ ಜರುಗುವ ಸಮಯದಲ್ಲಿ ಬಾಂಬು ಎಸೆದು ತಮ್ಮ ಧ್ಯೇಯವನ್ನು ತಿಳಿಸುವ ಯೋಜನೆಯನ್ನು ಕ್ರಾಂತಿಕಾರಿಗಳು ನಿರ್ಧಾರ ಮಾಡಿ ಭಗತ್ ಸಿಂಗ್ ಮತ್ತು ಬಟುಕೇಶ್ವರರನ್ನು ಈ ಕಾರ್ಯಕ್ಕೆ ನೇಮಿಸಿದರು. ಕೇಂದ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ ಭಗತ್ ಸಿಂಗ್ ಹಾಗೂ ಬಟುಕೇಶ್ವರರು ಬಾಂಬುಗಳನ್ನು ಹಾಕಿದರು ಆದರೆ ಅವರಾರು ತಪ್ಪಿಸಿಕೊಳ್ಳದೆ ಆಂಗ್ಲರಿಗೆ ಸೆರೆ ಸಿಕ್ಕರು. ಇಬ್ಬರನ್ನು ಬಂಧಿಸಿ ಮೊಕದ್ಧಮೆ ಹೂಡಿದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಆಗ ನ್ಯಾಯಯಾಲದಲ್ಲಿ ನಮ್ಮ ದಾಳಿಯು ಯಾವುದೇ ವ್ಯಕ್ತಿಯ ಮೇಲಲ್ಲ ನಮ್ಮದು ದುಷ್ಟ ವ್ಯವಸ್ಥೆ ವಿರುದ್ದ ಹೋರಾಟವೆಂದು ವಾದಿಸಿದರು. ಆದರೂ ನ್ಯಾಯಾಲಯ ಇಬ್ಬರಿಗೂ ಜೀವಾವದಿ ಶಿಕ್ಷೆ ವಿಧಿಸಿ ಲಾಹೋರಿನ ಕಾರಾಗೃಹಕ್ಕೆ ಅಟ್ಟಿತು.ಅದೇ ಸಮಯಕ್ಕೆ ಸ್ಯಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗರ ಪಾತ್ರದ ಸುಳಿವು ಸಿಕ್ಕ ಮೇಲೆ ಭಗತ್ ಸಿಂಗರಿಗೆ ಗಲ್ಲು ಶಿಕ್ಷೆ ವಿಧಿಸಿ ಲಾಹೋರಿನ ಕಾರಾಗೃಹದಲ್ಲಿ ಇರಿಸಲಾಯಿತು. ಇದು ನರಕಕ್ಕೆ ಸವಾಲು ಒಡ್ಡುವ ಮತ್ತೊಂದು ನರಕವೆಂದು ಈ ಕಾರಾಗೃಹದಲ್ಲಿ ಸ್ವಲ್ಪ ಸಮಯಗಳ ಕಾಲ ಬಟುಕೇಶ್ವರರನ್ನು ಇರಿಸಿ ಅಲ್ಲಿಂದ ನೇರವಾಗಿ ಅಂಡಮಾನಿನ ಸೆರೆಮನೆಗೆ ವರ್ಗಾವಣೆ ಮಾಡಿದರು. ಸೆರೆಮನೆಯಲ್ಲಿ ನೀಡುತ್ತಿದ್ದ ಹಿಂಸೆಗೆ ದೇಹ ಕೃಶವಾದರೂ ನನ್ನ ದೇಶವು ಸ್ವತಂತ್ರವಾಗುವವರೆಗೂ ತಾನು ಹೋರಾಡಬೇಕೆಂದು ಬಟುಕೇಶ್ವರರು ತೀರ್ಮಾನಿಸಿದ್ದರು. ಇದೇ ಸಮಯಕ್ಕೆ ಬಟುಕೇಶ್ವರರಿಗೆ ಕ್ಷಯ ರೋಗ ತಗುಲಿ ಮತ್ತಷ್ಟು ಕೃಶರಾದರು. ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ್ ದತ್ ಹೆಸರು ಅವರ ಒಡನಾಡಿಗಳಾಗಿದ್ದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ್‍ಗುರು ಅವರ ಹೆಸರುಗಳೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಕಾರಣ, 1929 ರ ಏಪ್ರಿಲ್‍ನಲ್ಲಿ ಭಗತ್ ಸಿಂಗ್ ಒಡಗೂಡಿ ಪಂಜಾಬ್ ಅಸೆಂಬ್ಲಿಗೆ ಹಾಕಿದ ಬಾಂಬ್. ಇದಕ್ಕಾಗಿ ಬಂಧನಕ್ಕೊಳಗಾದ ನಂತರ, ದತ್ತ ಹಾಗೂ ಸಿಂಗ್ ಇಬ್ಬರೂ ಭಾರತೀಯ ರಾಜಕೀಯ ಕೈದಿಗಳ ಹಕ್ಕುಗಳು ಹಾಗೂ ಅವರ ಸ್ಥಿತಿಗತಿಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು. ಆದರೆ ಕ್ಷಯ ರೋಗ ತಗುಲಿದ ನಂತರ ಬಟುಕೇಶ್ವರರ ಆರೋಗ್ಯ ಹದಗೆಟ್ಟ ಬಗ್ಗೆ ಮಾಹಿತಿ ಪಡೆದ ಗಾಂಧೀಜಿಯವರು ಬಟುಕೇಶ್ವರರ ಬಿಡುಗಡೆಗೆ ಆಂಗ್ಲ ಸರ್ಕಾರವನ್ನು ಒತ್ತಾಯ ಮಾಡಿದಾಗ ಆಂಗ್ಲರು ದೆಹಲಿ, ಪಂಜಾಬ್ ಮತ್ತು ಬಾಂಗಳಕ್ಕೆ ಹೋಗಬಾರದು ಎಂಬ ಕಟ್ಟಳೆ ಬರೆಸಿಕೊಂಡು ಬಿಡುಗಡೆ ಮಾಡಿದರು. ಸೆರೆಮನೆಯಿಂದ ಹೊರಬಂದ ಬಟುಕೇಶ್ವರರು ಮತ್ತೆ 1942ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ತದನಂತರದಲ್ಲಿ ಆಗಸ್ಟ್ 15 1947 ರ ಸ್ವಾತಂತ್ರ್ಯ ದಿನದಂದು ಅವರ ಮೇಲಿದ್ದ ಕಟ್ಟಳೆಗಳು ರದ್ದಾದವು. ಆದರೆ ಕ್ಷಯ ರೋಗ ಮಾತ್ರ ಬಿಟ್ಟಿರಲಿಲ್ಲ ಕಡೆಗೆ ತೀವ್ರ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದರು.ಆದರೆ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಈ ಕ್ರಾಂತಿಕಾರಿ ತಾನು ಮತ್ತು ತನ್ನ ಒಡನಾಡಿಗಳೆಲ್ಲರೂ ಯಾವ ಘನ ಉದ್ದೇಶಕ್ಕಾಗಿ ಹೋರಾಡಿದರೊ ಆ ಸ್ವಾತಂತ್ರ್ಯವನ್ನು ತನ್ನ ದೇಶ ಭಾರತ ಕಂಡದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಉಳಿದರು. ಆದರೆ ಭಾರತ ಮಾತೆಯ ವೀರಪುತ್ರನಾಗಿರುವ ಈ ಕ್ರಾಂತಿಕಾರಿ 1966 ಜುಲೈ 20 ರಂದು ಕೊನೆಯುಸಿರೆಳೆದರು. ತದನಂತರ ಇವರ ಅಂತ್ಯ ಸಂಸ್ಕಾರವನ್ನು ಭಗತ್ ಸಿಂಗ್ ಅವರ ತಾಯಿ ವಿದ್ಯಾ ದೇವಿ ಹಾಗೂ ಬಟುಕೇಶ್ವರರ ಅಣ್ಣ ವಿಶ್ವೇಶ್ವರ ದತ್ತರು ಪಂಜಾಬಿನ ಫಿರೋಜಾಪುರದಲ್ಲಿ ರಾಜ ಗುರು, ಸುಖ ದೇವ್ ಹಾಗೂ ಭಗತ್ ಸಿಂಗ್ ಸಮಾಧಿಗಳ ಪಕ್ಕದಲ್ಲಿ ನಡೆಸಿಕೊಟ್ಟರು. ಸಣ್ಣ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿರುವ ಈ ಕ್ರಾಂತಿಕಾರಿ ಅಂಡಮಾನಿನ ಜೈಲಿನಲ್ಲಿ ಕ್ರೂರ ಶಿಕ್ಷೆಯನ್ನನುಭವಿಸಿ ತಮ್ಮ ಒಡನಾಡಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ್‍ಗುರು ಅವರ ಹೆಸರುಗಳೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರೋದೆ ಹೆಮ್ಮಯ ವಿಚಾರ..🙏

#ಅಮರ್_ರಹೇ_ದತ್ತ_ಜೀ
#BatukeshwarDutt

ಜೈ ಹಿಂದ್ 🇮🇳

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏