JusticeForSowjanya


ಈ ಸಮಾಜದಲ್ಲಿ ಬಡವರ ಸಾವಿಗೆ ನ್ಯಾಯ ಮರೀಚಿಕೆಯೇ ...???

ಮುಗ್ಧ ಹೆಣ್ಣು ಮಗಳು #ಸೌಜನ್ಯ ಕೊಲೆಯಾಗಿ 7 ವರ್ಷವಾದರೂ ನ್ಯಾಯದ ಕಣ್ಣಿಗೆ ಬಟ್ಟೆ ಕಟ್ಟಿ ಮೌನವಾಗಿರುವ ಪ್ರಭಾವಿ ವ್ಯಕ್ತಿಗಳು..😉😉

ನಾನು ಸೌಜನ್ಯ ನಿಮ್ಮಲ್ಲರ ನತದೃಷ್ಟೆ ತಂಗಿ..!ನೆನಪಿರಬೇಕಲ್ಲವೇ ಅಂದು 2012 ಅಕ್ಟೊಬರ್ 9 ರಂದು ಕಾಲೇಜಿನಿಂದ ಮನೆಗೆ ಹೋರಟ ನಾನು ಮನೆಗೆ ತಲುಪಲೇ ಇಲ್ಲ.ೌ ಬಹುಷಃ  ಅದೇ  ನನ್ನ ವಿಧ್ಯಾರ್ಥಿ ಜೀವನದ  ಕೊನೆಯ ಪಯಣ   ಆಗಿತ್ತೆನೋ. ಮನೆಯಲ್ಲಿ ಮಗಳಿಗೊಸ್ಕರ  ಕಾಯುತ್ತಿದ್ದ ನನ್ನ ಹೆತ್ತವರು ದಿನಂಪ್ರತಿ ಕಾಲೇಜಿನಿಂದ ಸರಿಯಾದ ಸಮಯದಲ್ಲಿ ಆಗಮಿಸುತ್ತಿದ್ದ ಮಗಳು ಬರದೆ ಇದ್ದಾಗ ಆತಂಕಗೊಂಡಿದ್ದರು. ಸ್ಥಳಿಯರ ಜೊತೆಗೂಡಿ ರಾತ್ರಿಯಿಡೀ ಆ ಮಳೆಯಲ್ಲಿ ಹುಡುಕಿದರೂ ನಾನು ಮಾತ್ರ ಸಿಗಲೇ ಇಲ್ಲಾ. ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಸ್ವಲ್ಪ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ  ನನ್ನ ಮೃತದೇಹ ಸಿಕ್ಕಿತ್ತು. ನನ್ನ ಹೆತ್ತ ಜೀವಗಳಿಗೆ ತಮ್ಮ ಮಗಳನ್ನು ಆ ಪರಿಸ್ಥಿತಿಯಲ್ಲಿ ಕಂಡು ಆಕಾಶವೇ ತಲೆ ಮೇಲೆ ಬಿದ್ದಾಂತಾಗಿತ್ತು. ಆದರೆ ನನ್ನ ನರಳಾಟ ತಂದೆ ತಾಯಿಗಳ ನೋವು ಮನಸ್ಸಿಗೆ ಅರ್ಥವಾಗೋ ಹೊತ್ತಿಗಾಗಲೇ ನನ್ನನ್ನು ಅತ್ಯಾಚಾರವೆಸಗಿ ಕೊಂದು ತಮ್ಮ ರಕ್ತದ ಕೈಗಳನ್ನು ಪ್ರಸನ್ನೆಯಾಗಿ ಹರಿಯುತ್ತಿರುವ ನೇತ್ರಾವತಿಯಲ್ಲಿ ತೊಳೆದುಕೊಂಡು ಮನೆ ಸೇರಿದರು.  ಪ್ರಕರಣದಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರುಗಳು ನನಗೆ ಮತ್ತು ಆ ದೇವರಿಗೆ ಮಾತ್ರ ಗೊತ್ತು.  ಘಟನೆಯ ನೈಜ ಸತ್ಯತೆ ಪ್ರಪಂಚಕ್ಕೆ ಅರಿವಿದ್ದರೂ ನನಗೆ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ತಪ್ಪಿತಸ್ಥರಿಗೆ ರಕ್ಷಣೆ ನೀಡಲು ಮಹಾನ್ ವ್ಯಕ್ತಿಗಳ ಕೈ ಚಳಕ ಸದ್ದಿಲ್ಲದೇ ನಡೆಯುತ್ತಿರುವಾಗ ಪ್ರಕರಣ ಬೆಳಕಿಗೆ ಬರವುದಾದರು ಹೇಗೆ. ಅಪರಾಧಿಗಳನ್ನು ರಕ್ಷಿಸಿ ಎಂಜಲು ಕಾಸಿಗೆ ಕೈ ಚಾಚುವ ಇವರುಗಳ ಹೆಣ್ಮಕ್ಕಳಿಗೆ ಇಂಥಹ ಪರಿಸ್ಥಿತಿ ಬರಬೇಕು.
ಇಂತೀ ನಿಮ್ಮ ತಂಗಿ
ನ್ಯಾಯಕ್ಕಾಗಿ  ಹಾತೋರೆಯುತ್ತಿರವ ಆತ್ಮ ..!
ಅಮಾಯಕರು ಕಟ್ಟಿಕೊಂಡ ಬಗೆ ಬಗೆಯ ಕನಸುಗಳು ರಕ್ಕಸರುಗಳ ತೆಕ್ಕೆಯಲ್ಲಿ ಕರಗಿ ಹೋಗುತ್ತವೇ ಶಾಲೆ ಬಿಟ್ಟ  ಹೆಣ್ಣು  ಮಗಳೊಬ್ಬಳು ಮನೆಗೆ ಬರುತ್ತಾಳೆ ಎಂಬ ಯಾವುದೇ ನಿರೀಕ್ಷಣಾ ಭಾವವನ್ನು  ಇಟ್ಟು ಕೊಳ್ಳದಂಥಹ ಪರಿಸ್ಥಿತಿ ಬಂದೊದಗಿದೆ. ಕಾಮ ಪಿಶಾಚಿಗಳ ಮತ್ತು ಅವರನ್ನು ಪೋಷಿಸುವ ಪಾಪಿಗಳ ಲೋಕದಲ್ಲಿ ನ್ಯಾಯ ಸತ್ತು ಹೋಗಿದೆ. ತಂಗಿ ಸೌಜನ್ಯ (ಇದ್ದಕ್ಕೆ ಮೊದಲು ಕಾಮಾಂಧರ ಗರ್ಭ ಗುಡಿಯಲ್ಲಿ ಅದೆಷ್ಟೋ ಲೆಕ್ಕಕ್ಕೆ ಸಿಗದೇ  ಹೋದ ಸೌಜನ್ಯರು)  ಮಾನ ಪ್ರಾಣ ಬಲಿಕೊಂಡುವಂತಾಯಿತು  ಯಾರು ಸೌಜನ್ಯಳನ್ನು ಇಲ್ಲವಾಗಿಸಿದ್ದಾರೆಂಬ ವಾತ್ಸವ ಕುರುಹು ಇದ್ದರೂ ಹೋರಾಟದ ಬಲವಿದ್ದರೂ ಇಂದಿಗೂ ಸಹ ನ್ಯಾಯದ ಬಾಗಿಲು ತೆರೆಯಲೇ ಇಲ್ಲ. ದಿನದಿಂದ ದಿನಕ್ಕೆ ಸಂಶಯಾತ್ಮಕ ಪ್ರಶ್ನಗಳು ಹೆಚ್ಚುತ್ತವೇ ಹೊರತು ಉತ್ತರ ಮಾತ್ರ ಶೂನ್ಯವಾಗಿದೆ..! ಹಣ ಅಧಿಕಾರ ಬಲದಿಂದ ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಪುಣ್ಯ  ಕ್ಷೇತ್ರವೊಂದಕ್ಕೆ ಅಂಟಿಕೊಂಡಿರವ ಕಳಂಕ ದೂರಗಬೇಕೆಂದರೆ  ಆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಅಣ್ಣಪ್ಪ  ಸ್ವಾಮಿಯ ಕಾವಲಿನ ಕ್ಷೇತ್ರದಲ್ಲಿ ದುಷ್ಟ ಜನರು ಮಾಡಿದ ತಪ್ಪಿಗೆ ಶಿಕ್ಷೆಯಾದಗಲೇ ಸೌಜನ್ಯನ ಆತ್ಮಕ್ಕೆ ಶಾಂತಿ ಸಿಗುವುದು..!

#JusticeForSowjanya
#Ujire

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏