ಆಯುಷ್ಮಾನ್ ಭಾರತ್

ಆಯುಷ್ಮಾನ್ ಭಾರತ್
ಇಂದು ಬೆಳಿಗ್ಗೆ 5 ಗಂಟೆಗೆ  ರೋಗಿಯೊಬ್ಬರ  ಮನೆಯಿಂದ ಎಮರ್ಜೆನ್ಸಿ  ಕಾಲ್ ಬಂದಾಗ  ಹೋಗಿದ್ದೆ  ..ಇದು ಹಳ್ಳಿ  ಯಾದ್ದರಿಂದ  ಹೆಚ್ಚಾಗಿ  ಎಮರ್ಜೆನ್ಸಿ ಕಾಲ್ ಗಳು ರಾತ್ರಿ ಬರುವುದು  ಸಾಮಾನ್ಯ ..ಹಾಗೆ ಹೋದಾಗ  75 ವರ್ಷದ ಅಜ್ಜಿ ಸ್ಟ್ರೋಕ್  ಆಗಿ ಬಿದ್ದಿದ್ದರು .ಸುಮಾರು ವರ್ಷಗಳಿಂದ  ಅವರನ್ನು ನಾನೆ ನೋಡುತಿದ್ದುದರಿಂದ  ತಕ್ಷಣ ಸ್ಟ್ರೋಕ್ ನ ಲಕ್ಷಣ  ಎಂದು ತಿಳಿಯಲು  ವೈದ್ಯನಾದ  ನನಗೆ ಹೆಚ್ಚು ಹೊತ್ತು  ಬೇಕಾಗಿರಲಿಲ್ಲ .
ಒಂದು ಕ್ಷಣ 10 ವರ್ಷದ ಹಿಂದೆ ಇದೇಮನೆಗೆ ಹೋದಾಗದ ಸಂದರ್ಭ  ನೆನಪಿನಾಳದಿಂದ  ಹೊರಬಂತು  ..ಅಂದು ಇದೇ ಅಜ್ಜಿಯ  ಗಂಡನ  ಕೊನೆಯ ದಿನವಾಗಿತ್ತು   ಅಂದು ಕೂಡ  ಹೀಗೆ ರಾತ್ರಿ 12 ಗಂಟೆಗೆ ಕಾಲ್ ಬಂದಿತ್ತು ..ಹೋಗಿ ನೋಡುವಾಗ ಇದೇ ರೀತಿ ಸ್ಟ್ರೋಕ್ ನ ಲಕ್ಷಣ ದೊಂದಿಗೆ  ಹಾಸಿಗೆಯಲ್ಲಿದ್ದರು   ತಕ್ಷಣ ಆಸ್ಪತ್ರೆಗೆ  ಹೋಗಬೇಕು  ಇಲ್ಲದ್ದರೆ  ಉಳಿಸಿಕೊಳ್ಳುವುದು  ಕಷ್ಟ ಎಂದೆ ಸುತ್ತ 4 ಜನ ಮಕ್ಕಳಿದ್ದರು  ಗುಡಿಸಲಲ್ಲಿ  ವಾಸ  ಮಾಡುವ ಬಡಕುಟುಂಬ  ಅವರದಾಗಿತ್ತು  ಚಿಕ್ಕ  ಮಗ  ಸುಕೇಶ  ತಕ್ಷಣ ಕೇಳಿದ್ದ   ಸರ್ ಆಸ್ಪತ್ರೆಯ ಬಿಲ್  ಎಷ್ಟಾಗಬಹುದು 40000 ಇಲ್ಲ 50000 ಆಗಬಹುದು  ಆದರೆ ಮುಂದಿನ ಒಂದೆರಡು ಗಂಟೆಯೊಳಗೆ  ಆಸ್ಪತ್ರೆ  ತಲುಪುವುದು  ಅನಿವಾರ್ಯ ಎಂದು ಹೇಳಿ ಅಲ್ಲಿಂದ  ಹೊರಬಂದಿದ್ದೆ  .ಸಂಜೆ ಅವರ ಮನೆಯಿಂದ  ಕಾಲ್ ಬಂದಾಗಲೇ  ಗೊತ್ತಾಗಿದ್ದು  ಅಜ್ಜ  ತೀರಿಹೋಗಿದ್ದಾರೆ   ಎಂದು ಮತ್ತೆ ತಿಳಿದಿತ್ತು ಬಡ ಕುಟುಂಬಕ್ಕೆ ಅಷ್ಟು ದೊಡ್ಡಮೊತ್ತ  ತಂದೆಗೆ  ಖರ್ಚು ಮಾಡುವಷ್ಟು  ತಾಕತ್ತು    ಇದ್ದಿರಲಿಲ್ಲ ಎಂದು ..ಹಳೆಯ ನೆನಪುಗಳೆಲ್ಲ ಕ್ಷಣಾರ್ಧದಲ್ಲಿ ಕಣ್ಣಮುಂದೆ  ತೇಲಿ  ಮರೆಯಾಗಿತ್ತು .ಅದೇ ಡೈಲಾಗ್
ಮತ್ತೆ ಹೇಳಬೇಕಾದ್ದು  ನನ್ನ ವ್ರತ್ತಿಧರ್ಮ ಎಂಬುದು  ಅರಿತಿದ್ದರು  ಸ್ವಲ್ಪ ಹಿಂಜರಿಕೆ   ಇತ್ತು ಮನಸ್ಸಿನಾಳದಲ್ಲಿ  ..ಸ್ಟ್ರೋಕ್ ನ ಲಕ್ಷಣ ಕಾಣುತಿದೆ  ಆದಷ್ಟುಬೇಗನೆ  ಆಸ್ಪತ್ರೆಗೆ  ಹೋದರೆ  ಉಳಿಸಿಕೊಳ್ಳಬಹುದು  ಎಂದು ಹೇಳುತಿದ್ದಂತೆ 10 ವರ್ಷದ ಹಿಂದಿನ  ಅಜ್ಜನ  ಮುಖವೊಮ್ಮೆ  ಮನಸ್ಸಿನ ಮೂಲೆಯಿಂದ  ಹೊರಬಂದಿತ್ತು
ಮತ್ತೆ ಸುಕೇಶ ಕೇಳಿದ ಸರ್ ಬಿಲ್  ಎಷ್ಟಾಗಬಹುದು ..40000 ಅಥವಾ 50000 ಆಗಬಹುದು ಎಂದು ಹೇಳುವುದು ನನಗೆ ಅನಿವಾರ್ಯವಾಗಿತ್ತು  ..ಅಜ್ಜಿಯ ಏದುಸಿರು  ನಿಶ್ಯಬ್ದ ವಾಗಿ   ಇದ್ದ  ಗುಡಿಸಲಿನಲ್ಲಿ  ಸ್ಪಷ್ಟವಾಗಿ ಕೇಳುತಿತ್ತು  ..ಏನೋ ನೆನಪಾದವರಂತೆ ಸುಕೇಶ ಒಳಗೆ ಓಡಿ ಏನೋ ಕಾರ್ಡ್  ಒಂದನ್ನ ತಂದು ನನ್ನ ಕೈಗಿತ್ತ
ಓದಿದ ನನ್ನ ಕಣ್ಣು  ಮೆದುಳು   ಎರಡೂ ಚುರುಕಾಗಿತ್ತು  ಮೋದಿಯವರ  *ಅಯುಷ್ಮಾನ್  ಅರೋಗ್ಯ ವಿಮ ಕಾರ್ಡ್* ಅದಾಗಿತ್ತು
Bpl ಕುಟುಂಬಕ್ಕೆ 5 ಲಕ್ಷದ  ತನಕ ವಿಮಾ ಸೌಲಭ್ಯ  ಸಾವಿನ  ಕದ ತಟ್ಟಿದ್ದ  ಅಜ್ಜಿಯನ್ನು  ಉಳಿಸಿತ್ತು .ತಕ್ಷಣ ಆಸ್ಪತ್ರೆ ಸೇರಿದ್ದರು   ಅಜ್ಜಿ .. ಸಂಜೆ ಸುಕೇಶ ನ ಕಾಲ್ ಬಂದಿತ್ತು ನಡುಗುವ  ಕೈಇಂದ  ಮಾತಾಡಿದರೆ  ಅಜ್ಜಿ ಹುಷಾರಾಗಿದ್ದರೆ  ಎಂಬ ಶುಭವಾರ್ತೆ  ಹೇಳಿದ್ದ  ..ಥ್ಯಾಂಕ್ಸ್ ಡಾಕ್ಟ್ರೇ  ಎಂದಿದ್ದ  ..ಥ್ಯಾಂಕ್ಸ್ ನನಗಲ್ಲ  ಮೋದಿಯವರಿಗೆ  2019 ರ ಚುನಾವಣೆಯಲ್ಲಿ  ಅಜ್ಜಿಯ ವೋಟ್  ಹಾಕಿಸಿ ಮೋದಿಯವರ ಋಣ ಸಂದಾಯಮಾಡು  ಎನ್ನುವಾಗ  ..ನನಗರಿಸಿಲ್ಲದೇ ನನ್ನ ಕಣ್ಣು ಮಂಜಾಗಿತ್ತು  ...
*ಡಾ.ಶಶಿಕಿರಣ್* ಶೆಟ್ಟಿ .ಕೊಳಲಗಿರಿ  ಉಡುಪಿ (9945130630)..... ಜೈ  ಮೋದಿಜಿ  ..

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏