Posts

ಸ್ವಾತಂತ್ರ್ಯ_ಯಾರಿಂದ_ಬಂತು.. #ಮಂಗಳ್_ಪಾಂಡೆ 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ಮಂಗಳ್_ಪಾಂಡೆ (ದಿ. ೮ ಎಪ್ರಿಲ್ ೧೮೫೭) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೯೫೭ಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ. ಮಂಗಲ ಪಾಂಡೆ - ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಆರಂಭಿಕ ವರ್ಷಗಳಲ್ಲಿ ಮಂಗಲ್ ಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ ಕುಟುಂಬಕ್ಕೆ ಭಾರತದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯಲ್ಲಿ ಜುಲೈ ೧೮೨೭ ೧೯ ರಂದು ಜನಿಸಿದರು. ಅವರ ತಂದೆ, ದಿವಾಕರ್ ಪಾಂಡೆ, ವೃತ್ತಿಯ ಮೂಲಕ ರೈತ ಮತ್ತು ಮಧ್ಯಮ ವರ್ಗ ಸೇರಿದ್ದರು. ಮಂಗಲ್ ಪಾಂಡೆ, ನಂತರ ೧೮೩೦ ರಲ್ಲಿ ಬರಗಾಲದಿಂದ ಅವರ ತಂದೆ ಮಂಗಲ್ ಪಾಂಡೆ ಹಾಗೂ ಅವರ ಸಹೋದರಿಯನ್ನು ಬಿಟ್ಟು ಮೃತಪಟ್ಟರು. ಅವರು ೨೨ನೇ ವಯಸ್ಸಿನಲ್ಲಿ ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇರಿದರು. ಪಾಂಡೆ ೩೪ ನೇ ಬಂಗಾಳ ಸ್ಥಳೀಯ ಪದಾತಿದಳದ ೬ ನೇ ಕಂಪನಿ ಭಾಗವಾಗಿದ್ದರು , ಪ್ರಮುಖವಾಗಿ ರೆಜಿಮೆಂಟ್ ತಂದೆಯ...

ಸ್ವಾತಂತ್ರ್ಯ_ಯಾರಿಂದ_ಬಂತು... ಚಂದ್ರಶೇಖರ್ ಆಜಾದ್ 🙏🙏

Image
#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪತಚಲನ ನಡೆದಿತ್ತು. ಹನ್ನೆರಡನೆ ವಯಸ್ಸಿಗಾಗಲೇ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಬೇಕೆಂಬ ಹಂಬಲದಲ್ಲಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ?.. ಜೈ!" “ವಂದೇ... ಮಾತರಂ!" ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಎದುರಾಯಿತು. ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಿದರು. ಎಂಭತ್ತಕ್ಕು ಹೆಚ್ಚು ವಯಸ್ಸಿನ ವೃದ್ಧರೊಬ್ಬರ ಎದೆ ಮೇಲೆ ಒಬ್ಬ ಪೋಲಿಸ್ ಲಾಠಿ ಬೀಸಿದ. ಇದನ್ನು ನೋಡಿ ಕೋಪಗೊಂಡ ಹುಡುಗ ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಬೀಸಿದ, ಕಲ್ಲು ನೇರವಾಗಿ ಹೋಗಿ ಆ ಪೋಲೀಸ್ ಹಣೆಗೆ ಬಿತ್ತು. ಅಷ್ಟೇ, ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ. ಕಟಕಟೆಯಲ್ಲಿ ಹುಡುಗನನ್ನು ವಿಚಾರಣೆ ಮಾಡಲಾಯಿತು. ನ್ಯಾಯಾಧೀಶರಯ ನಿನ್ನ ಹೆಸರೇನು? ಎಂದು ಕೇಳಿದರೆ ಹುಡುಗ ಆಜಾದ್! ಎಂದು ಉತ್ತರಿಸಿದ. ನ್ಯಾಯಾಧೀಶರು ನಿನ್ನ ತಂದೆ ಹೆಸರೇನು? ಎಂದಾಗ ಹುಡುಗ ಸ್ವಾಧೀನತೆಯೆ ನನ್ನ ಅಪ್ಪ ಎಂದುಬಿಟ್ಟ‌. ಮನೆ ಎಲ್ಲಿ? ಎಂದು ಕೇಳಿದಾಗ ಹುಡುಗ ಸೆರೆಮನೆಯೇ ನನ್ನ  ಮನೆ! ಬರೆದುಕೊಳ್ಳಿ ಎಂದ. ನ್ಯಾಯಾಧೀಶರಿಗೆ ಹುಡುಗನ ಉತ್ತರಗಳು...

ಸ್ವಾತಂತ್ರ್ಯ_ಯಾರಿಂದ_ಬಂತು.. #ವಿನಾಯಕ_ದಾಮೋದರ_ಸಾವರ್ಕರ್ 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ವಿನಾಯಕ_ದಾಮೋದರ_ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು. ವೀರ ಸಾವರ್ಕರ್ ಹಿನ್ನೆಲೆ ವಿನಾಯಕರು ಮೇ ೨೮, ೧೮೮೩ ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. *ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್...

#ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಮಚಂದ್ರ_ಪಾಂಡುರಂಗ_ಟೋಪೆ(#ತಾತ್ಯಾ_ಟೋಪೆ)🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ರಾಮಚಂದ್ರ_ಪಾಂಡುರಂಗ_ಟೋಪೆ(#ತಾತ್ಯಾ_ಟೋಪೆ)  (೧೮೧೪ – ಏಪ್ರಿಲ್ ೧೮, ೧೮೫೯) ತಾತ್ಯಾ ಟೋಪೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಮಹಾನ್ ಸೇನಾನಿ ತಾತ್ಯಾ ಟೋಪೆ ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೆವೋಲಾ ಗ್ರಾಮದಲ್ಲಿ ೧೮೧೪ರ ವರ್ಷದಲ್ಲಿ ಜನಿಸಿದರು. ಅವರ ಪಾಂಡುರಂಗ ರಾವ್ ಜವಳೇಕರ್ ಮತ್ತು ತಾಯಿ ರುಕ್ಮಾಬಾಯಿ. ತಾತ್ಯಾ ಟೋಪೆ ಪ್ರಾರಂಭದಲ್ಲಿ ಬಿಥುರ್ ಪ್ರಾಂತ್ಯದ ನಾನಾ ಸಾಹೇಬನ ಸೇನಾನಿಯಾಗಿದ್ದರು. ಕಾಲಕ್ರಮೇಣದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ನೆರವಿಗೆ ಬಂದು ಹೋರಾಡಿದರು. ಮಹಾನ್ ಸಂಘಟನಾ ಚತುರ ಸಿಪಾಯಿ ದಂಗೆ ಎಂದು ಬಣ್ಣಿತವಾದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾನ್ಪುರ, ಕಲ್ಪಿ, ಜಾನ್ಸಿಗಳಲ್ಲಿ ಯುದ್ಧ ಸಂಘಟನೆಗಳನ್ನು ನಡೆಸಿದ ತಾತ್ಯಾ ಟೋಪೆ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು. ಈ ಪ್ರದೇಶಗಳನ್ನು ಬ್ರಿಟಿಷ್ ಸೇನೆ ಪುನಃ ವಶಪಡಿಸಿಕೊಂಡಿತಾದರೂ, ತಾತ್ಯಾ ಅವರು ದೇಶದ ಇತರೆಡೆಗಳಾದ ಬಂದೆಲ್ಖಾಂಡ್, ಮಧ್ಯಭಾರತ, ರಾಜಾಸ್ಥಾನದ ಭರತ್ಪುರ, ಬಿತುಹರ್ ಮುಂತಾದ ಬಹುತೇಕ ಕಡೆಗಳಲ್ಲಿ ಸೇನೆಯನ್ನು ನಿರಂತರವಾಗಿ ಸಂಘಟಿಸುತ್ತಲೇ ಇದ್ದರು. ನರ್ಮದಾ, ಬೆಟ್ವಾ ನದೀತೀರಗಳಿಂದ ಮೊದಲ್ಗೊಂಡು ದಕ್ಷಿಣದ ಖಾಂಡೇಶ್ ವರೆಗೆ ಅವರು ಕ್ರಾ...

ಸ್ವಾತಂತ್ರ್ಯ_ಯಾರಿಂದ_ಬಂತು... #ರಾಸ್_ಬಿಹಾರಿ_ಬೋಸ್ 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ರಾಸ್_ಬಿಹಾರಿ_ಬೋಸ್ ಬೋಸರು ಮೇ ೨೫, ೧೮೮೬ರಂದು ಪಶ್ಚಿಮ ಬಂಗಾಳದ ಬುರ್ದ್ವಾನಿನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಬೋಸರು ತಮ್ಮ ಸಣ್ಣ ವಯಸ್ಸಿನಲ್ಲೇ ರೆವಲ್ಯೂಷನರಿ ಪಾರ್ಟಿಯನ್ನು ಸೇರಿದರು. ಕ್ರಾಂತಿಕಾರಿ ಚಟುವಟಿಕೆ ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ ೨೩, ೧೯೧೨ರಂದು ಬಾಂಬ್ ಎಸೆದಾಗ ರಾಸ್ ಬಿಹಾರಿ ಬೋಸರ ಹೆಸರು ಪ್ರಖ್ಯಾತಿ ಪಡೆಯಿತು. ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೋಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಾಸಿಯಲ್ಲಿ ಅವಿತು, ಗದರ್ ಪಕ್ಷದ ಕಾರ್ಯಕರ್ತರೊಡನೆ ಏಕಕಾಲದಲ್ಲಿ ಉತ್ತರ ಭಾರತದಲ್ಲೆಲ್ಲಾ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು. ಜಪಾನಿನಲ್ಲಿ ರಾಸ್ ಬಿಹಾರಿ ಬೋಸರ ಈ ಎಲ್ಲಾ ಯತ್ನಗಳನ್ನೂ ಬ್ರಿಟಿಷರು ಸದೆಬಡಿದು ಗದರ್ ಕ್ರಾಂತಿಕಾರರಲ್ಲಿ ಬಹಳಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದರಾದರೂ ರಾಸ್ ಬಿಹಾರಿ ಬೋಸರನ್ನು ಮಾತ್ರ ಹಿಡಿಯಲಾಗಲಿಲ್ಲ. ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದ್ದ ರಾಸ್ ಬಿಹಾರಿ ಬೋಸರ ಬಗ್ಗೆ ಆತಂಕಗೊಂಡ ಬ್ರಿಟಿಷರು ಅಂತಾರಾಷ್ಟ್ರೀಯ ಮಟ್ಟದಲ್ಲಿ ...

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ರಾಜಗುರು ಭಾರತ ಸ್ವಾತಂತ್ರ್ಯದ ಅಪೂರ್ವ ಹೋರಾಟಗಾರರಲ್ಲೊಬ್ಬರು. ಮಧ್ಯಮವರ್ಗದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಇವರು, ತೀರಾ ಎಳೆ ವಯಸ್ಸಿನಲ್ಲೇ ಕ್ರಾಂತಿಕಾರಿಯಾಗಿದ್ದ ಕೆಲವೇ ಮುಖಂಡರಲ್ಲಿ ಒಬ್ಬರು. ಭಗತ್‍ಸಿಂಗ್ ಅವರ ಪಕ್ಷದಲ್ಲಿ ಗನ್‍ಮ್ಯಾನ್ ಆಗಿದ್ದ ರಾಜಗುರು, ಲಾಲಾ ಲಜಪತ್‍ರಾಯ್ ಅವರ ಹತ್ಯೆಗೆ ಪ್ರತೀಕಾರವಾಗಿ ಸೌಂಡರ್ಸ್ ಅವರನ್ನು ಹತ್ಯೆ ಮಾಡಿದ ಬಳಿಕ ಅವರು ಅತ್ಯಂತ ಜನಪ್ರಿಯರಾದರು. ಈ ಅಪರಾಧಕ್ಕಾಗಿ ಅವರನ್ನು 23ನೇ ವಯಸ್ಸಿನಲ್ಲೇ ಗಲ್ಲಿಗೇರಿಸಲಾಯಿತು. ರಾಜಗುರು 1908ರ ಆಗಸ್ಟ್ 24ರಂದು ಹುಟ್ಟಿದರು. 2016ರ ಆಗಸ್ಟ್ 24ರಂದು ಅವರ 108ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪುಣೆ ಬಳಿಕ ಖೇಡ್‍ನಲ್ಲಿ ರಾಜಗುರು ಶಿವರಾಂ ಹರಿ ರಾಜಗುರು ಎಂಬ ಹೆಸರು ಹೊಂದಿದ್ದರು. ಗಾಂಧೀಜಿಯವರ ಅಹಿಂಸಾತ್ಮಕ ಕಾನೂನುಭಂಗ ಚಳವಳಿಯಲ್ಲಿ ಅವರು ನಂಬಿಕೆ ಇಟ್ಟಿರಲಿಲ್ಲ. ಬ್ರಿಟಿಷರು ನಡೆಸುದ ದಬ್ಬಾಳಿಕೆಗೆ ಕ್ರಾಂತಿಯೊಂದೇ ಮಾರ್ಗ ಎಂದು ಅವರು ಬಲವಾಗಿ ನಂಬಿದ್ದರು. ಆದ್ದರಿಂದ ಇದಕ್ಕಾಗಿ ಹಿಂದೂಸ್ತಾನ್ ಸೋಶಲಿಸ್ಟ್ ರಿಪಬ್ಲಿಕನ್ ಆರ್ಮಿ ಸೇರಿದರು. ಯಾವುದೇ ವಿಧಾನದಲ್ಲಾದರೂ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕು ಎನ್ನುವುದೇ ಅವರ ಧ್ಯೇಯವಾಗಿತ್ತು. ರಾಜಗುರು ಅವರು ಭಗತ್ ಸಿಂಗ್ ಹಾಗೂ ಸುಖದೇವ್ ಅವರ ಜತೆ ಸೇರಿಕೊಂಡು, ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ.ಸೌಂಡ್ರಸ್ ಅವರನ್ನು 1928ರಲ್ಲಿ ಲಾಹೋರ್‍ನ...

ಸ್ವಾತಂತ್ರ್ಯ_ಯಾರಿಂದ_ಬಂತು.. #ಚಾಪೇಕರ್_ಸಹೋದರರು🙏🙏

Image
#ಸ್ವಾತಂತ್ರ್ಯ_ಯಾರಿಂದ_ಬಂತು #ಚಾಪೇಕರ್_ಸಹೋದರರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಇದೇ ಸರಣಿಯಲ್ಲಿ ಹಿಂದೆ ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಯಿಂದಾಗಿ ಕ್ರಾಂತಿಯ ಕಹಳೆ ಮೊಳಗಿಸಿ ಬಲಿದಾನಗೈದ ಕಥೆ ಇತಿಹಾಸದಲ್ಲಿ ಅಪರೂಪದ ಸಂಗತಿ. ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸ ಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸು ಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಕ್ರಾಂತಿಕಾರಿ ಕೆಲಸಗಳಿಗಾಗಿ, ಸ್ವಾತಂತ್ರ‍್ಯಕ್ಕೋಸ್ಕರ ಬಲಿದಾನ ಮಾಡಲು ಹಿಂಜರಿ...